ಮುತ್ತಿನ ರಾಶಿಗೆ ಮಂಜು ಮುಸುಕಿತಲೇ ಪರಾಕ್ : ಮೈಲಾರಲಿಂಗೇಶ್ವರ ದೇವಸ್ಥಾನದ ಕಾರ್ಣಿಕೋತ್ಸವದ ನುಡಿ

| N/A | Published : Feb 13 2025, 12:47 AM IST / Updated: Feb 13 2025, 01:05 PM IST

ಮುತ್ತಿನ ರಾಶಿಗೆ ಮಂಜು ಮುಸುಕಿತಲೇ ಪರಾಕ್ : ಮೈಲಾರಲಿಂಗೇಶ್ವರ ದೇವಸ್ಥಾನದ ಕಾರ್ಣಿಕೋತ್ಸವದ ನುಡಿ
Share this Article
  • FB
  • TW
  • Linkdin
  • Email

ಸಾರಾಂಶ

ಇದು ಹರಪನಹಳ್ಳಿ ಪಟ್ಟಣದ ಹೊರವಲಯದಲ್ಲಿರುವ ಮೈಲಾರಲಿಂಗೇಶ್ವರ ದೇವಸ್ಥಾನದ ಬಳಿ ಭರತ್ ಹುಣ್ಣಿಮೆ ದಿನ ಬುಧವಾರ ಸಂಜೆ ಕಾರ್ಣಿಕೋತ್ಸವದ ನುಡಿ.

ಹರಪನಹಳ್ಳಿ: ಮುತ್ತಿನ ರಾಶಿಗೆ ಮಂಜು ಮುಸುಕಿತಲೇ ಪರಾಕ್‌ ...

ಇದು ಹರಪನಹಳ್ಳಿ ಪಟ್ಟಣದ ಹೊರವಲಯದಲ್ಲಿರುವ ಮೈಲಾರಲಿಂಗೇಶ್ವರ ದೇವಸ್ಥಾನದ ಬಳಿ ಭರತ್ ಹುಣ್ಣಿಮೆ ದಿನ ಬುಧವಾರ ಸಂಜೆ ಕಾರ್ಣಿಕೋತ್ಸವದ ನುಡಿ.

ಗೊರವಪ್ಪ ಕೋಟೆಪ್ಪ ಬಿಲ್ಲನ್ನು ಏರಿ ಸದ್ದಲೇ ಎಂದ ಕೂಡಲೇ ಇಲ್ಲಿ ಸೇರಿದ್ದ ಸಹಸ್ರಾರು ಭಕ್ತರು ಮೌನಕ್ಕೆ ಶರಣಾದರು. ಆಗ ಗೊರವಪ್ಪ ಆಕಾಶವನ್ನೊಮ್ಮೆ ಸುತ್ತಲೂ ನೋಡಿ ಮೇಲಿನಂತೆ ಕಾರ್ಣಿಕ ನುಡಿದು ಕೆಳಕ್ಕೆ ಬಿದ್ದ, ಆಗ ಉಳಿದ ಗೊರವರು ಆತನನ್ನು ನೆಲಕ್ಕೆ ಬೀಳದಂತೆ ಎತ್ತಿ ಹಿಡಿದರು.

ಧರ್ಮಕರ್ತ ನಿಚ್ಚವ್ವನಹಳ್ಳಿ ದತ್ತಾತ್ರೇಯ, ಮುಖಂಡರಾದ ನಾಗೇಶ್ವರರಾವ್, ಮಾರ್ತಾಂಡೇಶ್ವರ ರಾವ್, ವಿಶ್ವನಾಥರಾವ್, ಪುರಸಭಾ ಸದಸ್ಯ ಕಿರಣ್‌ ಶಾನ್ ಬಾಗ್, ಅಗಡಿ ವಿಶ್ವನಾಥ ಚಕ್ರವರ್ತಿ, ಆನಂದವನ ಸೇರಿದಂತೆ ಸಹಸ್ರಾರು ಭಕ್ತರು ಕಾರ್ಣೀಕೋತ್ಸವವನ್ನು ಕುಣ್ತುಂಬಿಕೊಂಡರು.

ಹರಪನಹಳ್ಳಿ ಪಟ್ಟಣದ ಹೊರವಲಯದಲ್ಲಿ ಗೊರವಪ್ಪ ಕೋಟೆಪ್ಪ ಕಾರ್ಣಿಕದ ನುಡಿಯನ್ನು ಭಕ್ತರು ಕಣ್ತುಂಬಿಕೊಂಡರು.