ಕನ್ನಡಪ್ರಭ ವಾರ್ತೆ ಸಾವಳಗಿ
ಇಂಚಗೇರಿ ಸಂಪ್ರದಾಯದಲ್ಲಿ ಅವಜೀವಕರ ಮಹಾರಾಜರ ಶಕ್ತಿ ಅಗಾಧವಾಗಿದೆ. ಇವರಿಂದ ಯಾರು ಗುರು ಉಪದೇಶ ಪಡೆದಿದ್ದಾರೆ ಅವರೇ ಪುಣ್ಯವಂತರು ಎಂದು ಕನ್ನೇರಿಮಠದ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮೀಜಿ ಹೇಳಿದರು.ಸಮೀಪದ ಅರಟಾಳ ಗ್ರಾಮದ ಮಂಗಳವಾರ ಅವಜೀಕರ ಮಹಾರಾಜರ 27ನೇ ಪುಣ್ಯಸ್ಮರಣೋತ್ಸವ ಸಪ್ತಾಹ ಕಾರ್ಯಕ್ರಮದ ದಿವ್ಯಸಾನ್ನಿಧ್ಯ ವಹಿಸಿ ಮಾತನಾಡಿದರು. ಭಕ್ತರು ಸಪ್ತಾಹಗಳನ್ನು ತಪ್ಪಿಸಬಾರದು, ಇಲ್ಲಿ ಜ್ಞಾನಿಗಳ ದರ್ಶನಾಶೀರ್ವಾದ ಅಮೂಲ್ಯವಾದದ್ದು. ಅವಜೀಕರ ಮಹಾರಾಜರು ಭಕ್ತರಿಗೆ ಒಳ್ಳೆಯ ಸಂದೇಶವನ್ನು ಕೊಟ್ಟಿದ್ದರೆ. ಇಂಚಗೇರಿ ಶಿಷ್ಯಂದಿರ ಮಕ್ಕಳು ಒಳ್ಳೆಯ ಸಂಸ್ಕಾರವನ್ನು ಪಡೆದಿದ್ದಾರೆ. ನಾವು ಮಾಡುವ ದಾನ, ಧರ್ಮ ನಮ್ಮನ್ನು ಕಷ್ಟದಲ್ಲಿ ಕಾಯುತ್ತದೆ. ನಂಬಿಕೆಯಿಟ್ಟು ಗುರುವಿನಿಂದ ಉಪದೇಶ ಪಡೆದುಕೊಂಡರೆ ಅದು ನಮ್ಮನ್ನು ಕಾಪಾಡುತ್ತದೆ. ಮನುಷ್ಯನ ಭಾವನೆಗಳನ್ನು ಪವಿತ್ರಗೊಳಿಸಿ ಅಂತರಂಗ ಶುದ್ದೀಕರಿಸಲು ಸದ್ಗುರುವಿನ ಮಾರ್ಗದರ್ಶನ ಅತಿ ಮುಖ್ಯ. ಅವಜೀಕರ ಮಹಾರಾಜರು ನಮಗೆಲ್ಲ ಅಮೃತದ ದಾರಿ ತೋರಿಸಿದ್ದಾರೆ. ನಾವು ಅವರು ತೋರಿದ ಮಾರ್ಗದಲ್ಲಿ ನಡೆದರೆ ಜೀವನಮುಕ್ತಿ ಪಡೆದುಕೊಳ್ಳುತ್ತೇವೆ. ನಾನಾ ಜನ್ಮ ತಿರುಗಿ ಶೇಷ್ಠವಾದ ಮಾನವ ಜನ್ಮ ಪಡೆದುಕೊಂಡ ನಾವು ಪಾಪ ಕೃತ್ಯಗಳನ್ನು ಮಾಡದೇ ಪುಣ್ಯದ ದಾರಿಯಲ್ಲಿ ಸಾಗಬೇಕು. ಸದ್ಗುರು ಎಂಬ ಅರ್ಥಕ್ಕೆ ಒಂದು ಶೇಷ್ಠ ಶಕ್ತಿಯಿದೆ. ದಿನದ 24ಗಂಟೆ ಕಾಲ ಗುರುವಿನ ಸ್ಮರಿಸದಿದ್ದರು, ಕೆಲವು ಗಂಟೆಯಾದರೂ ಗುರಿವಿನ ಸ್ಮರಿಸಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದರು.
ಶೂರ್ಪಾಲಿ ಗಿರಿಶಾನಂದ ಮಹಾರಾಜರು ಮಾತನಾಡಿ. ನಮ್ಮಲ್ಲಿರುವ ದುರಂಹಕಾರ ಮರೆಯಾಗಬೇಕು. ಸದ್ಗುರುವಿನಲ್ಲಿ ನಂಬಿಕೆ ಅತಿ ಮುಖ್ಯವಾಗಿದೆ. ಯಾರು ಗುರುಉಪದೇಶ ಪಡೆದುಕೊಳ್ಳುತ್ತಾರೆ ಅವರು ಪುಣ್ಯಶಾಲಿಗಳು. ಎಲ್ಲದಕ್ಕೂ ಮುಗಿಲಾಗಿ ಸದ್ಗುರುವಿನ ಆಶೀರ್ವಾದ ಪಡೆಯಬೇಕು ಎಂದರು.ಕಮಿಟಿ ಅಧ್ಯಕ್ಷ ಡಾ.ಎಸ್.ಆರ್.ರಾಮನಗೌಡರ ಮಾತನಾಡಿ, ಜೀವನದಲ್ಲಿ ಎಲ್ಲದಕ್ಕೂ ಸಮಯ ನೀಡುತ್ತೆವೆ, ಆದರೆ ಅಧ್ಯಾತ್ಮಕ್ಕೆ ಸಮಯ ನೀಡುತ್ತಿಲ್ಲ. ಯಾರು ಸಮಯವನ್ನು ಅಧ್ಯಾತ್ಮಕ್ಕೆ ಕೊಡುತ್ತಾರೆ ಅವರು ಆತ್ಮಜ್ಞಾನಿಗಳಾಗುತ್ತಾರೆ ಎಂದರು.
ಕಾರ್ಯಕ್ರಮದಲ್ಲಿ ಸದ್ಗುರುಗಳ ಗಂಥ ಲೋಕಾರ್ಪಣೆಗೊಳಿಸಲಾಯಿತು. ಕ್ಯಾರೆಗುಡ್ಡದ ಮಲ್ಲೇಶ್ವರ ಮಹಾರಾಜರು, ಶಿವಶರಣಾನಂದ ಮಹಾರಾಜರು, ಡಾ.ಎಸ್.ಆರ್.ರಾಮನಗೌಡರ, ಲಕ್ಷ್ಮಣ ಯಡಾವಿ, ಲಕ್ಷ್ಮಣ ಗುಗ್ಗರಿ, ಅಣ್ಣಾಸಾಬ ಅಡಹಳ್ಳಿ, ಶೀಶೈಲ ಕಲಘಟಗಿ, ಈಶ್ವರಲಿಂಗ ಕಲಘಟಗಿ, ಅವದೇಶ ಕಲಘಟಗಿ, ಆನಂದ ಕಲಘಟಗಿ, ಕೆಂಚಪ್ಪ ಜಂಬಗಿ, ಗುರಲಿಂಗ ವಡ್ಡರ ಹಾಗೂ ಅರಟಾಳ ಹಾಲಳ್ಳಿ, ಶೂರಪಾಲಿ, ಶಿವನೂರ, ಎ.ಟಿ.ಮಾಳಿ, ಗ್ರಾಮಸ್ಥರು ಇದ್ದರು.