ಲಾರಿ ಹಾಗೂ ಬೈಕ್ ಮಧ್ಯೆ ಡಿಕ್ಕಿ ಸಂಭವಿಸಿ ಬೈಕ್ ನಲ್ಲಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟದ್ದು, ಓರ್ವ ಪಾದಚಾರಿ ಯುವಕನಿಗೆ ಗಾಯವಾಗಿರುವ ಘಟನೆ ನಗರದ ಹೊರ ಭಾಗದ ಸೊಲ್ಲಾಪುರ ರಸ್ತೆಯ ಎನ್.ಎಚ್. 50ರಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ.
ಕನ್ನಡಪ್ರಭ ವಾರ್ತೆ ವಿಜಯಪುರ
ಲಾರಿ ಹಾಗೂ ಬೈಕ್ ಮಧ್ಯೆ ಡಿಕ್ಕಿ ಸಂಭವಿಸಿ ಬೈಕ್ ನಲ್ಲಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟದ್ದು, ಓರ್ವ ಪಾದಚಾರಿ ಯುವಕನಿಗೆ ಗಾಯವಾಗಿರುವ ಘಟನೆ ನಗರದ ಹೊರ ಭಾಗದ ಸೊಲಾಪುರ ರಸ್ತೆಯ ಎನ್.ಎಚ್. 50ರಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ. ನಗರ ನಿವಾಸಿ ಭೂಷಣ ನಾಯಕ (24) ಹಾಗೂ ಹಾಸನ ಮೂಲದ ಗಗನ್ ಪರಮೇಶ (19) ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಪಾದಚಾರಿ ಗಾಯಾಳು ಬಿಲಾಲ್ ಜಾತಗಾರನಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನೆ ಬಳಿಕ ಲಾರಿ ಬಿಟ್ಟು ಚಾಲಕ ಪರಾರಿಯಾಗಿದ್ದು, ಸ್ಥಳಕ್ಕೆ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ವಿಜಯಪುರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿ ಪ್ರಕರಣ ಜರುಗಿದೆ.