ಕನ್ನಡಪ್ರಭ ವಾರ್ತೆ ಚಿಕ್ಕೋಡಿ ಚಿಕ್ಕೋಡಿ ಪ್ರತ್ಯೇಕ ಜಿಲ್ಲೆಗಾಗಿ ನಡೆಯುತ್ತಿರುವ ಹೋರಾಟಕ್ಕೆ ಚಿಂಚಣಿ ಶಿವಪ್ರಸಾದ ಸ್ವಾಮೀಜಿ ಹಾಗೂ ಗ್ರಾಮಸ್ಥರು ಬೆಂಬಲ ಸೂಚಿಸಿ ಚಿಕ್ಕೋಡಿ ಜಿಲ್ಲೆಯಾಗಬೇಕೆಂದು ಆಗ್ರಹಿಸಿದರು

ಕನ್ನಡಪ್ರಭ ವಾರ್ತೆ ಚಿಕ್ಕೋಡಿ

ಚಿಕ್ಕೋಡಿ ಪ್ರತ್ಯೇಕ ಜಿಲ್ಲೆಗಾಗಿ ನಡೆಯುತ್ತಿರುವ ಹೋರಾಟಕ್ಕೆ ಚಿಂಚಣಿ ಶಿವಪ್ರಸಾದ ಸ್ವಾಮೀಜಿ ಹಾಗೂ ಗ್ರಾಮಸ್ಥರು ಬೆಂಬಲ ಸೂಚಿಸಿ ಚಿಕ್ಕೋಡಿ ಜಿಲ್ಲೆಯಾಗಬೇಕೆಂದು ಆಗ್ರಹಿಸಿದರು.

ಶನಿವಾರ ಚಿಕ್ಕೋಡಿ ಜಿಲ್ಲಾ ಹೋರಾಟಕ್ಕೆ ಚಿಂಚಣಿಯ ಶಿವಪ್ರಸಾದ ಸ್ವಾಮೀಜಿ ಹಾಗೂ ಗ್ರಾಮಸ್ಥರು ಮತ್ತು ಸಿಎಲ್‌ಇ ಸಂಸ್ಥೆಯ ವಿದ್ಯಾರ್ಥಿಗಳು ಸಾಥ್ ನೀಡಿದರು. ಬಸವ ವೃತ್ತದಲ್ಲಿ ರಸ್ತೆ ತಡೆದು ಮಾನವ ಸರಪಳಿ ನಿರ್ಮಿಸಿ ಚಿಕ್ಕೋಡಿ ಜಿಲ್ಲೆ ಆಗಬೇಕೆಂದು ಒತ್ತಾಯಿಸಿದರು. ಅಲ್ಲದೇ, ತಹಸೀಲ್ದಾರ್‌ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಶಿವಪ್ರಸಾದ ಸ್ವಾಮೀಜಿ ಮಾತನಾಡಿ, ಲಿಂ.ಅಲ್ಲಮಪ್ರಭು ಸ್ವಾಮೀಜಿ ಚಿಕ್ಕೋಡಿ ಜಿಲ್ಲೆಗಾಗಿ ಹೋರಾಟ ಮಾಡಿಕೊಂಡು ಬಂದಿದ್ದರು. ಆ ಹೋರಾಟ ಮುಂದುವರಿದಿದೆ. ಚಿಕ್ಕೋಡಿಯಲ್ಲಿ ಬಹುತೇಕ ಎಲ್ಲ ಕಚೇರಿಗಳು ಬಂದಿವೆ. ಇನ್ನಷ್ಟು ಕಚೇರಿಗಳು ಬಂದರೆ ಚಿಕ್ಕೋಡಿಗೆ ಜಿಲ್ಲಾ ಸ್ಥಾನಮಾನ ಹೊಂದುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಕೂಡಲೇ ಚಿಕ್ಕೋಡಿ ಜಿಲ್ಲೆಯನ್ನಾಗಿ ಘೋಷಿಸಬೇಕು ಎಂದು ಒತ್ತಾಯಿಸಿದರು.

ಸ್ವಾಮೀಜಿ ತಮ್ಮ ನೂರಾರು ಭಕ್ತರೊಂದಿಗೆ ವೇದಿಕೆಗೆ ಆಗಮಿಸಿ, ಜಿಲ್ಲಾ ಹೋರಾಟಕ್ಕೆ ಸದಾ ಕಾಲ ನಮ್ಮ ಬೆಂಬಲವಿದೆ. ಕಳೆದ ಮೂವತ್ತು ವರ್ಷಗಳಿಂದ ಚಿಕ್ಕೋಡಿ ಜಿಲ್ಲೆ ಆಗದೇ, ಈ ಭಾಗದ ಜನರಿಗೆ ಸಾಕಷ್ಟು ಅನಾನುಕೂಲತೆ ಆಗುತ್ತಿದೆ. ಪ್ರಸ್ತುತ ಅಧಿವೇಶನದಲ್ಲಿ ಚಿಕ್ಕೋಡಿ ಜಿಲ್ಲಾ ಘೋಷಣೆ ಆಗದೇ ಹೋದರೆ ಶ್ರೀಮಠ ಹಾಗೂ ಅಪಾರ ಭಕ್ತ ಸಮೂಹದೊಂದಿಗೆ ಉಗ್ರ ಹೋರಾಟಕ್ಕೆ ಧುಮುಕಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.ಸಾಮಾಜಿಕ ಕಾರ್ಯಕರ್ತ ಚಂದ್ರಕಾಂತ ಹುಕ್ಕೇರಿ ಮಾತನಾಡಿ, ಸರ್ಕಾರ ಅಧಿವೇಶನದಲ್ಲಿ ವಿನಂತಿಯಿಂದ ಜಿಲ್ಲೆಯನ್ನು ಬೇಡಿದರೆ ಕೊಡುವುದಿಲ್ಲ, ನಮ್ಮ ಚಿಕ್ಕೋಡಿ ಶಾಸಕ ಗಣೇಶ ಹುಕ್ಕೇರಿ ಅವರು ಆನಂದ ಸಿಂಘರಂತೆ ಸದನದ ಒಳಗಡೆ ಜಿಲ್ಲೆಗಾಗಿ ಹಟ ಹಿಡಿದು ಸದನದ ಬಾವಿಗೆ ಇಳಿದು ಜಿಲ್ಲೆ ಘೋಷಣೆಗಾಗಿ ಹೋರಾಟ ಮಾಡಬೇಕೆಂದು ಹೇಳಿದರು.ಈ ಸಂದರ್ಭದಲ್ಲಿ ಬಾಳಗೌಡ ಪಾಟೀಲ, ಬಸವರಾಜ ಪಾಟೀಲ, ಬಾಬಾಸಾಹೇಬ ಪಾಟೀಲ, ಅನಿಲ ಪಾಟೀಲ, ಲಕ್ಷ್ಮಣ ಢಂಗೆರ, ಅಕ್ಷಯ ಪಾಟೀಲ, ಸೌರಬ ಪಾಟೀಲ, ಬಾಬಾಸಾಹೇಬ ನಿಂಗಣ್ಣವರ, ಬಾಬು ನಿಲಜಗೆ, ಶಿವಾನಂದ ಮುದ್ದಪ್ಪಗೊಳ, ದೀಪಕ ಮುದ್ದಪ್ಪಗೊಳ, ಶಂಕರ ಸಂಗೋಟೆ, ಬಸು ಕಾಳಪ್ಪಗೊಳ, ಮಲಗೌಡ ರಾಮಲಿಂಗೆ, ದಾದಾ ಕಾಳಪ್ಪಗೋಳ, ಶೇಖರ ಕುಂಬಾರ, ಕಾಶೀನಾಥ ಪೂಜಾರಿ, ಸುರೇಶ ಮಳವಾಡೆ, ಪುಂಡಲೀಕ ಕುಂಬಾರ್, ಸುನಿಲ್ ಕಿಲ್ಲದಾರ್, ಸಂತೋಷ ಸನದಿ, ಶಶಿಕಾಂತ ಮಲಾಪುರೆ, ಭೀಮರಾವ ಖಚನಾಳೆ, ಅಣ್ಣಪ್ಪ ಕಬಾಡಿಗೆ, ಸಂತೋ?ಷ ಚಿಕ್ಕೋಡೆ, ರಾಜು ಬೇನಾಡೆ, ಶಿವಾನಂದ ಪೂಜಾರಿ, ಮಿಥುನ್ ಅಂಕಲಿ, ಲಕ್ಷ್ಮಣ್ ಬಾಳಿಕಾಯಿ ಸೇರಿ ಹೋರಾಟಗಾರರು ಉಪಸ್ಥಿತರಿದ್ದರು.