ಕನ್ನಡಪ್ರಭ ವಾರ್ತೆ ಕುಣಿಗಲ್ ಪರಿಸರದಲ್ಲಿ ಸಿಗುವ ಸೂರ್ಯ ಕಿರಣ ಅನಿಲ ಸೇರಿದಂತೆ ಸೌರ ಚಾಲಿತ ವಾಹನಗಳ ಉಪಯೋಗದಿಂದ ಹಸಿರು ಭಾರತ ನಿರ್ಮಾಣ ಸಾಧ್ಯ ಎಂದು ಎಚ್ ಪಿ ಸಿ ಎಲ್ ಕಂಪನಿಯ ಮುಖ್ಯ ಅಧಿಕಾರಿ ವಿಜಯಕುಮಾರ್ ತಿಳಿಸಿದ್ದಾರೆ ತಾಲೂಕಿನ ಯಡಿಯೂರಿನ ಸರ್ಕಾರಿ ಪ್ರೌಢ ಶಾಲೆಯ ಆವರಣದಲ್ಲಿ ಸಂರಕ್ಷಣಾ ಕ್ಷಮತ ಮಹೋತ್ಸವದ ಅಂಗವಾಗಿ ಎಚ್ ಪಿ ಸಿ ಎಲ್ ರಿಸೀವ್ ಪ್ಲಾಂಟ್ ವತಿಯಿಂದ ಏರ್ಪಡಿಸಿದ್ದ ಸ್ವಚ್ಛ ಭಾರತ ಆಂದೋಲನ ಹಾಗೂ ಅನಿಲದ ಅರಿವು ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಭಾರತದಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿದೆ ಆದರೆ ಅಲ್ಲಿನ ಭೂಪ್ರದೇಶ ಹೆಚ್ಚಾಗುತ್ತಿಲ್ಲ ಮಾನವನ ಅಗತ್ಯತೆಗೆ ಪೂರೈಕೆ ಆಗುವ ಮನುಷ್ಯ ತನ್ನ ಪರಿಸರದ ಮೇಲೆ ನಿರಂತರ ಅವಲಂಬಿತನಾಗಿದ್ದಾನೆ. ಪರಿಸರದ ಉಳಿವಿಗಾಗಿ ಇನ್ನಿತರ ಮೂಲಗಳಿಂದ ಸೂರ್ಯನ ಕಿರಣ ಗಾಳಿ ಸೇರಿದಂತೆ ಬೇರೆ ಬೇರೆ ಭಾಗಗಳಿಂದ ಬೇಕಾದ ಶಕ್ತಿಯನ್ನು ಪಡೆಯಬೇಕೆಂದರು. ಸೂರ್ಯನ ಶಾಖ ಬಳಸಿ ಅಡುಗೆ ಮಾಡುವುದು ಗಾಳಿಯಿಂದ ಯಂತ್ರಗಳನ್ನು ಚಲಿಸುವುದು ಬ್ಯಾಟರಿ ವಾಹನಗಳನ್ನು ಉಪಯೋಗಿಸುವುದು ಸೇರಿದಂತೆ ವಿವಿಧ ಪರಿಸರಕ್ಕೆ ಮಾರಕವಾಗುವುದನ್ನು ತೊರೆದು ಪೂರಕ ಮಾರ್ಗಗಳಿಂದ ಬೇಕಾದ ಇಂಧನವನ್ನು ನಿಯಮಿತವಾಗಿ ಬಳಸಿಕೊಂಡು ಪರಿಸರ ರಕ್ಷಣೆ ಮಾಡಬೇಕೆಂದರು. ಕಾರ್ಯಕ್ರಮದಲ್ಲಿ ಮುಖ್ಯಶಿಕ್ಷಕಿ ರಾಜೇಶ್ವರಿ ಮಾತನಾಡಿ, ಪ್ರತಿ ಮನೆಯಲ್ಲಿ ಇಂಧನ ಬಳಕೆ ಇರುತ್ತದೆ. ಆದರೆ ಸಾಮಾನ್ಯವಾಗಿ ಪೂರ್ವಜರು ಬಳಸುತ್ತಿದ್ದ ಸೌದೆಯಿಂದ ಇತ್ತೀಚೆಗೆ ಬಳಕೆ ಆಗುವ ಅನಿಲ ಹಾಗೂ ಬೇರೆಮೂಲಗಳಿಂದ ಪರಿಸರ ಉಳಿಸುವ ಪ್ರಯತ್ನ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಜಾಗೃತಿ ಅವಶ್ಯಕತೆ ಇದೆ ಎಂದರು. ಈ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಹಾಗೂ ಭದ್ರತಾ ಅಧಿಕಾರಿ ನಾಗರಾಜ್ , ಶಿಕ್ಷಕ ಚಂದ್ರಶೇಖರ್ ಸೇರಿದಂತೆ ಹಲವಾರು ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಇದ್ದರು.