ಮುಂಡರಗಿ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ನಾಡು, ನುಡಿ, ನೆಲ, ಜಲ, ಭಾಷೆ, ಸಂತ- ಶರಣರು, ಮಹಾತ್ಮರ ಕುರಿತು ನಿರಂತರವಾಗಿ ಒಂದಿಲ್ಲೊಂದು ಕಾರ್ಯಕ್ರಮವನ್ನು ಮಾಡುವ ಮೂಲಕ ಎಲ್ಲರಲ್ಲಿಯೂ ಸಾಹಿತ್ಯದ ಅಭಿರುಚಿ ಮೂಡಿಸುತ್ತಿದೆ ಎಂದು ಕಪ್ಪತ್ ಹಿಲ್ಸ್ ವಲಯ ಅರಣ್ಯಾಧಿಕಾರಿ ಮಂಜುನಾಥ ಮೇಗಳಮನಿ ತಿಳಿಸಿದರು.

ಶನಿವಾರ ಸಂಜೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಶರಣ ಚಿಂತನ ಮಾಲೆ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ತಾವು ಚಿಕ್ಕಂದಿನಿಂದಲೂ ಶಾಲಾ- ಕಾಲೇಜಿನ ಪಠ್ಯಕ್ಕೆ ಸಂಬಂಧಿಸಿದಂತೆ ಓದಿದ್ದನ್ನು ಹೊರತುಪಡಿಸಿದರೆ ನಮಗೆ ಸಾಹಿತ್ಯದ ಕುರಿತು ಆಸಕ್ತಿ ಇರಲಿಲ್ಲ. ಇದೀಗ ಇಲ್ಲಿನ ಕನ್ನಡ ಸಾಹಿತ್ಯ ಪರಿಷತ್ತಿನ ನಿರಂತರ ಸಾಹಿತ್ಯದ ಚಟುವಟಿಕೆಗಳನ್ನು ನೋಡುತ್ತಾ, ಕೇಳುತ್ತಾ ಸಾಹಿತ್ಯದ ಆಸಕ್ತಿ ಮೂಡುತ್ತಿದೆ ಎಂದರು.

ಜ್ಯೋತಿ ಕುರಿಯವರ ತುರುಗಾಯಿ ರಾಮಣ್ಣನ ಕುರಿತು ಉಪನ್ಯಾಸ ನೀಡಿಸ ತುರುಗಾಹಿ ರಾಮಣ್ಣ 12ನೇ ಶತಮಾನದ ವಚನಕಾರರು ಮತ್ತು ಬಸವಾದಿ ಶಿವಶರಣರು. ತುರು ಎಂದರೆ ಹಸು. ಊರಿನ ದನಗಳನ್ನು ಕಾಯುವ ಕಾಯುವ ಕಾಯಕ ಮಾಡುತ್ತಾ ಅದರಿಂದಲೇ ಇವರು ಜೀವನ ಸಾಗಿಸುತ್ತಿದ್ದರು.

ಇವರು ತಮ್ಮ ವೃತ್ತಿ ಬದುಕಿನ ಅನುಭವವನ್ನೇ ಆಧ್ಯಾತ್ಮಿಕ ಚಿಂತನೆಗೆ ಬಳಸಿಕೊಂಡವರಾಗಿದ್ದರು. ಇವರ 46 ವಚನಗಳು ಲಭ್ಯವಿದ್ದು, ಗೋಪತಿನಾಥ ವಿಶ್ವೇಶ್ವರಲಿಂಗ ಅವರ ವಚನದ ಅಂಕಿತವಾಗಿತ್ತು. ಗೋವುಗಳನ್ನು ಕಾಯುವ ವಿಧಾನ, ಅವುಗಳ ನಡವಳಿಕೆ ಮುಂತಾದ ವ್ಯಾವಹಾರಿಕ ವಿಷಯಗಳನ್ನು ತಮ್ಮ ವಚನಗಳಲ್ಲಿ ಆಧ್ಯಾತ್ಮಿಕ ತತ್ವಗಳಿಗೆ ಸಮೀಕರಿಸಿ ಸುಂದರವಾಗಿ ವಿವರಿಸಿದ್ದಾರೆ ಎಂದರು.ಸಾಮಾಜಿಕ ಅರಣ್ಯ ಇಲಾಖೆಯ ಆರ್‌ಎಫ್‌ಒ ಸುನಿತಾ ಬಿ.ಎಸ್. ಮಾತನಾಡಿದರು. ಕಾರ್ಯಕ್ರಮದಲ್ಲಿ ಆರ್.ಎಲ್. ಪೊಲೀಸಪಾಟೀಲ, ಮಂಜುನಾಥ ಮೇಗಳಮನಿ, ಸುನಿತಾ ಬಿ.ಎಸ್., ತಾಲೂಕು ಶಸಾಪ ಅಧ್ಯಕ್ಷರಾಗಿ ಆಯ್ಕೆಯಾದ ವೀರಣ್ಣ ಮಾಡವಾಳರ, ನಿವೃತ್ತ ಉಪಪ್ರಾಚಾರ್ಯ ಎಸ್.ಸಿ. ಚಕ್ಕಡಿಮಠ, ತಾಲೂಕು ಪ್ರಾ.ಶಾ. ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಪಿ. ಶೀರನಹಳ್ಳಿ ಸೇರಿದಂತೆ ಅನೇಕರನ್ನು ಸನ್ಮಾನಿಸಲಾಯಿತು. ತಾಲೂಕು ಕಸಾಪ ಅಧ್ಯಕ್ಷ ಎಂ.ಜಿ. ಗಚ್ಚಣ್ಣವರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಕಾರ್ಯಕ್ರಮದಲ್ಲಿ ಶಂಕರ ಕುಕನೂರ, ವೀಣಾ ಪಾಟೀಲ, ಎಂ.ಐ. ಮುಲ್ಲಾ, ಕೃಷ್ಣ ಸಾಹುಕಾರ, ರಮೇಶಗೌಡ ಪಾಟೀಲ, ಎಸ್.ಬಿ. ಕರಿಭರಮಗೌಡ್ರ, ರಾಜೇಶ್ವರಿ ಪಾಟೀಲ, ಮಧುಮತಿ ಇಳಕಲ್, ಕೊಟ್ರೇಶ ಜವಳಿ, ಸೀತಾ ಬಸಾಪುರ, ಕಾವೇರಿ ಬೋಲಾ, ಲಲಿತ ಕಡ್ಡಿ, ಎಸ್.ಆರ್. ಬಸಾಪುರ, ಆರ್.ಕೆ. ರಾಯನಗೌಡ್ರು, ಪ್ರತಿಭಾ ಹೊಸಮನಿ, ದಾನಗೌಡ ಪಾಟೀಲ, ಗುಡ್ಲಾನೂರ್, ಕಾಶೀನಾಥ ಶಿರಬಡಗಿ, ಎಂ.ಎಸ್. ಹೊಟ್ಟಿನ ಉಪಸ್ಥಿತರಿದ್ದರು. ಮಂಜುನಾಥ ಮುಧೋಳ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಅಕ್ಕಮಹಾದೇವಿ ಕೊಟ್ಟೂರ ಶೆಟ್ಟರ ನಿರೂಪಿಸಿ, ಆರ್.ವೈ. ಪಾಟೀಲ ವಂದಿಸಿದರು.