ಕನ್ನಡಪ್ರಭ ವಾರ್ತೆ ಹಳಿಯಾಳ

ಆರೋಗ್ಯವೇ ಜೀವನದ ನಿಜವಾದ ಬಹುದೊಡ್ಡ ಸಂಪತ್ತಾಗಿದೆ. ಅದಕ್ಕಾಗಿ ವಿದ್ಯಾರ್ಥಿ ವೃಂದವು ಯಾವತ್ತೂ ಆರೋಗ್ಯದ ವಿಷಯದಲ್ಲಿ ನಿಷ್ಕಾಳಜಿ ಮಾಡಬಾರದು. ವಿದ್ಯಾರ್ಥಿ ಜೀವನದಲ್ಲಿ ಆರೋಗ್ಯ ಜೊತೆಗೆ ಶೈಕ್ಷಣಿಕ ಪ್ರಗತಿಯನ್ನು ಸಾಧಿಸಲು ನಿರಂತರವಾಗಿ ಕಾಳಜಿವಹಿಸಬೇಕು ಎಂದು ಅರಭಾವಿಯ ಕೆಆರ್‌ಸಿ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ. ಆನಂದ ಮಸ್ತಿಹೋಳೆ ಕರೆ ನೀಡಿದರು.

ಪಟ್ಟಣದ ಕೆ.ಎಲ್.ಎಸ್ ಸಂಸೈಯ ಪದವಿ ಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಆಯೋಜಿಸಿದ 2026-27ನೇ ಸಾಲಿನ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಿಗೆ ಚಾಲನೆ ನೀಡಿ ಮಾತನಾಡಿದರು.

ಕೆ.ಎಲ್.ಎಸ್. ಕಾಲೇಜಿನ ಹಳೆಯ ವಿದ್ಯಾರ್ಥಿ ಕರ್ನಾಟಕ ಮೆಡಿಕಲ್ ಕಾಲೇಜಿನ ವೈದ್ಯಕೀಯ ವಿದ್ಯಾರ್ಥಿ ಅಭಿಶೇಕ್ ಶರ್ಮಾ ಮಾತನಾಡಿ, ವಿದ್ಯಾರ್ಥಿಗಳು ಸದಾ ಅಧ್ಯಯನಶೀಲರಾಗಬೇಕು. ಅದರ ಜೊತೆಯಲ್ಲಿ ಗುರುಗಳಿಗೆ ಮತ್ತು ಪಾಲಕರಿಗೆ ವಿಧೇಯರಾಗಿರಬೇಕು ಎಂದರು.

ಕಾಲೇಜಿನ ಆಡಳಿತ ಮಂಡಳಿತ ಅಧ್ಯಕ್ಷ ಪ್ರಶಾಂತ ಕುಲಕರ್ಣಿ ಮಾತನಾಡಿದರು.


ಸಾಧಕರಿಗೆ ಸನ್ಮಾನ:

2025-26ನೇ ಸಾಲಿನಲ್ಲಿ ಪಿಯು ದ್ವಿತೀಯ ಫಲಿತಾಂಶದಲ್ಲಿ ಅತೀ ಹೆಚ್ಚು ಅಂಕ ಪಡೆದ ಕಾಲೇಜಿನ ವಿದ್ಯಾರ್ಥಿ ಗೌತಮ ಧಾರವಾಡಕರ, ವರ್ಷಾ ಬಹದ್ದೂರ ಸೇರಿದಂತೆ ಇತರ ಸಾಧಕರಿಗೆ ತಲಾ ₹15 ಸಾವಿರ ನಗದು ಬಹುಮಾನ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಕೆ.ಎಲ್.ಎಸ್ ಎಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ. ವಿ.ಎ. ಕುಲಕರ್ಣಿ, ಕನ್ನಡ ಉಪನ್ಯಾಸಕ ಚಿಂತಕ ಶಾಂತಾರಾಮ ಚಿಬುಲಕರ, ಉಪನ್ಯಾಸಕರಗಳಾದ ಪ್ರೀತಿ ತೇಲಿ, ಡಾ. ಕಿರಣಕುಮಾರ, ಮಂಜುನಾಥ ಭೋವಿ, ರಾಜೇಶ ಹೆಗಡೆ, ಡಾ. ಸಂಗಮೇಶ ಎನ್. ನಿಫಾ ಮಸ್ಕರೇನ್ಸ್, ಶಣ್ಮುಖ ದಂಡಿನ, ಹೊಳವ್ವಾ ತಳವಾರ, ಅರ್ಚನಾ ರಗಟೆ, ಅಲ್ಬೆಟಿನ್ ಮೆಂಡಿಸ್, ಪೂಜಾ ಪೆಡ್ನೇಕರ, ಮನೋಜ ನಾಯ್ಕ, ಪವನ ಕುಲಕರ್ಣಿ, ಪೂಜಾ ಚಿಪ್ಟಿ, ಗ್ರಂಥಪಾಲಕ ಸಂಜಯ ಕುಲಕರ್ಣಿ ಹಾಗೂ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಮತ್ತು ಪಾಲಕರು ಇದ್ದರು.

ಕಾಲೇಜಿನ ಪ್ರಾಚಾರ್ಯ ಶ್ರೀನಿವಾಸ ಪ್ರಭು ಪ್ರಾಸ್ತಾವಿಕವಾಗಿ ಮಾತನಾಡಿದರು. ದೈಹಿಕ ನಿರ್ದೇಶಕ ಮಲ್ಲಿಕಾರ್ಜುನ ಕಾಜಗಾರ ಕಾಲೇಜಿನ ಪರಿಚಯ ಮಾಡಿಸಿದರು. ಸಾಂಸ್ಕೃತಿಕ ಸಂಯೋಜಕಿ ಸಪ್ನಾ ಸಾಳುಂಕೆ, ಶ್ಲೋಕಾ ತೇಗೂರ, ಉಪನ್ಯಾಸಕಿ ವಂದನಾ ಗೌಡಾ, ನಿರಂಜನ ಕೋತ್, ಪ್ರಿಯಾ ಪಟ್ಟಣ, ಖುಷಿ ಮಡಾಕರ, ಸಂಜನಾ ಗೊಂದಳೆ ಕಾರ್ಯಕ್ರಮ ನಿರ್ವಹಿಸಿದರು.