ಕನ್ನಡಪ್ರಭ ವಾರ್ತೆ ರಾವಂದೂರು
ಜಗತ್ತಿನ ಅತ್ಯಂತ ಮಹಾನ್ ಪುರುಷ ಮಾನವತಾವಾದಿ ಬಸವಣ್ಣ ನವರ ತತ್ವ ಆದರ್ಶಗಳು ಇಂದಿನ ಯುವ ಜನಾಂಗಕ್ಕೆ ಮಾದರಿಯಾಗಬೇಕು ಎಂದು ಸುತ್ತೂರು ಕ್ಷೇತ್ರದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು. ಗ್ರಾಮದಲ್ಲಿ ನಡೆದ ಶರಣು ಸಂಸ್ಕೃತಿ ಉತ್ಸವ ಹಾಗೂ ಬಸವತತ್ವ ಸಮಾವೇಶ ಮತ್ತು ಜಯದೇವ ಸಮುದಾಯ ಭವನದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಜಗತ್ತಿಗೆ ವಚನ ಸಾಹಿತ್ಯಕ್ಕೆ ಬಸವಣ್ಣನವರ ಕೊಡುಗೆ ಅಪಾರವಾಗಿದ್ದು, ಇಂದಿನ ಯುವ ಜನಾಂಗಕ್ಕೆ ಬಸವಣ್ಣವರ ತತ್ವ ಆದರ್ಶಗಳನ್ನು ಬಹಳ ಮುಖ್ಯವಾಗಿ ವಿದೇಶಿಗರು ನಮ್ಮ ಸಂಸ್ಕೃತಿಯನ್ನು ಅಧ್ಯಯನ ಮಾಡಿ ಅನುಸರಿಸುತ್ತಾ ಬಂದಿದ್ದಾರೆ, ಆದರೆ ನಮ್ಮವರು ವಿದೇಶ ಸಂಸ್ಕೃತಿಯನ್ನು ಅನುಸುತ್ತಿರುವುದು ಶೋಚನೀಯ ಸಂಗತಿಯಾಗಿದೆ, ಆದ್ದರಿಂದ ಬಸವಣ್ಣನ ತತ್ವ ಆದರ್ಶಗಳು ನಮ್ಮೆಲ್ಲರಿಗೂ ಮಾದರಿಯಬೇಕು, ಅದರಲ್ಲೂ ಮನೆಯಲ್ಲಿ ತಂದೆ ತಾಯಿಂದರು ಮಕ್ಕಳಿಗೆ ಬಸವಣ್ಣನವರ ತತ್ವ ಆದರ್ಶಗಳ ಬಗ್ಗೆ ಹೆಚ್ಚು ಅರಿವು ಮೂಡಿಸಬೇಕು ಎಂದರು.
ಮುರುಘಮಠದ ಮೋಕ್ಷ ಪತಿ ಸ್ವಾಮೀಜಿ ಮಾತನಾಡಿ, ಎಲ್ಲರ ಭಕ್ತರ ಸಹಕಾರದಿಂದ ಈ ಸಮುದಾಯ ಭವನ ನಿರ್ಮಿಸಲಾಗಿದ್ದು, ಬಸವಣ್ಣನ ತತ್ವ ಆದರ್ಶಗಳು ಎಲ್ಲರಿಗೂ ದಾರಿದೀಪವಾಗಬೇಕು ಎಂದರು.ಹೊಳಲ್ಕೆರೆ ತಾಲೂಕು ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಮಂಜುನಾಥ್ ಮಾತನಾಡಿದರು.
ಅರಕೆರೆಯ ಸಿದ್ದೇಶ್ವರ ಸ್ವಾಮೀಜಿ, ಮಂಡ್ಯದ ಬಸವರಾಜ ಸ್ವಾಮೀಜಿ ಹಾಗೂ ಇಮ್ಮಡಿ ಮುರಘ ಸ್ವಾಮೀಜಿ, ಬಸವಲಿಂಗ ದೇಶ ಕೇಂದ್ರ ಸ್ವಾಮೀಜಿ, ಸರ್ಪಭೂಷಣ ಮಠದ ಸ್ವಾಮೀಜಿ ಹಾಗೂ ವಿವಿಧ ಧಾರ್ಮಿಕ ಕೇಂದ್ರದ ಮಠಾಧೀಶರು ಇದ್ದರು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರನ್ನು ಹಾಗೂ ಪಿಯುಸಿ ಮತ್ತು ಎಸ್ಸೆಸೆಲ್ಸಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನುಸನ್ಮಾನಿಸಲಾಯಿತು. ತಾಲೂಕು ವೀರಶೈವ ಸಮಾಜದ ಅಧ್ಯಕ್ಷ ಪರಮೇಶ್, ಜಿಪಂ ಮಾಜಿ ಸದಸ್ಯ ಆರ್.ಎಸ್. ಚಿಕ್ಕವೀರಪ್ಪ, ಮಹದೇಶ್ವರ ಪ್ರಾಧಿಕಾರದ ನಿರ್ದೇಶಕ ಆರ್.ಎಸ್. ಕುಮಾರ ವಿಜಯ, ಆರ್.ಡಿ. ಸತೀಶ್, ಪಿ ಎಲ್.ಡಿ ಬ್ಯಾಂಕ್ ಅಧ್ಯಕ್ಷ ಕೆ. ಹೋಲದಪ್ಪ, ಬಿಜೆಪಿ ಮುಖಂಡ ಆರ್.ಟಿ. ಸತೀಶ್, ಆರ್.ಆರ್. ಶಶಿಧರ್, ಬಸವ ಬಳಗದ ಅಧ್ಯಕ್ಷ ಆರ್.ಎಸ್. ವಿಜಯಕುಮಾರ್, ಮೈಸೂರು ಬಸವ ಬಳಗ ಒಕ್ಕೂಟದ ಅಧ್ಯಕ್ಷ ಪ್ರದೀಪ್ ಕುಮಾರ್, ಆರ್. ಏಸ್. ಸುರೇಶ್ ಇದ್ದರು.----------------