ಕಳಲುಘಟ್ಟ ಗ್ರಾಪಂ ಮೇಲೆ ಲೋಕಾಯುಕ್ತ ದಾಳಿ ನಡೆದಿಲ್ಲ

| Published : May 11 2025, 11:53 PM IST

ಸಾರಾಂಶ

ದಾಬಸ್‍ಪೇಟೆ: ತ್ಯಾಮಗೊಂಡ್ಲು ಹೋಬಳಿಯ ಕಳಲುಘಟ್ಟ ಗ್ರಾಪಂ ಮೇಲೆ ಲೋಕಾಯುಕ್ತ ಅಧಿಕಾರಿಗಳ ದಾಳಿ ನಡೆದಿಲ್ಲ. ಅರ್ಜಿದಾರರು ನೀಡಿದ ಸರ್ಕಾರಿ ಶಾಲಾ ಆಟದ ಮೈದಾನ ವಿಚಾರವಾಗಿ ದಾಖಲಾತಿ ಪರಿಶೀಲನೆ ಹಾಗೂ ಸ್ಥಳ ಮಹಜರಿಗೆಂದು ಲೋಕಾಯುಕ್ತ ಅಧಿಕಾರಿಗಳು ಪಂಚಾಯತಿಗೆ ಭೇಟಿ ನೀಡಿದ್ದರು ಎಂದು ಕಳಲುಘಟ್ಟ ಗ್ರಾಪಂ ಅಧ್ಯಕ್ಷೆ ಸೌಮ್ಯ ಆಂಜನಮೂರ್ತಿ ಸ್ಪಷ್ಟಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳಲುಘಟ್ಟ ಗ್ರಾಮಸ್ಥ ಜಯರಾಮ್ 2021ರಲ್ಲಿ ಪಂಚಾಯತಿ ವ್ಯಾಪ್ತಿಯ ಸುಬ್ರಹ್ಮಣ್ಯನಗರದ ಸರ್ಕಾರಿ ಪ್ರಾಥಮಿಕ ಶಾಲೆಯ ಆಟದ ಮೈದಾನಕ್ಕೆ ಮೀಸಲಿಟ್ಟ ಜಮೀನು ಅನ್ಯರ ಪಾಲಾಗಿದೆ ಎಂದು ದೂರು ನೀಡಿದ್ದ ಕಾರಣ, ಈ ಸಂಬಂಧ ದಾಖಲಾತಿಗಳ ಪರಿಶೀಲನೆ ಭೇಟಿ ನೀಡಿದ್ದರು ಎಂದು ಸ್ಪಷ್ಟೀಕರಣ ನೀಡಿದರು.

ಕಾನೂನು ಹೋರಾಟ:

ಗೋವೇನಹಳ್ಳಿ ಗ್ರಾಮದ ಕೃಷ್ಣಮೂರ್ತಿ ಕಳಲುಘಟ್ಟ ಗ್ರಾಪಂ ಮೇಲೆ ಲೋಕಾ ದಾಳಿ ಎಂದು ಸುಳ್ಳು ಸುದ್ದಿ ಪತ್ರಿಕೆಗಳಿಗೆ ನೀಡಿ ಗ್ರಾಪಂ ಹೆಸರಿಗೆ ಮಸಿ ಬಳಿಯುವ ಯತ್ನ ನಡೆಸಿದ್ದಾರೆ. ಈತನ ಮೇಲೆ ಕಾನೂನು ಹೋರಾಟ ಮಾಡುತ್ತೇವೆ. ಕೃಷ್ಣಮೂರ್ತಿ ಕೇಬಲ್ ನೆಟ್‍ವರ್ಕ್ ವಿಚಾರವಾಗಿ ಅನುಮತಿಗಾಗಿ ಪಂಚಾಯತಿಗೆ ಅರ್ಜಿ ಸಲ್ಲಿಸಿದ್ದರು. ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಅರ್ಜಿ ತಿರಸ್ಕರಿಸಲಾಗಿತ್ತು. ಆಗಿನಿಂದ ಪಂಚಾಯತಿ ಅಧಿಕಾರಿಗಳು ಹಾಗೂ ಕೆಲ ಸದಸ್ಯರು ಸಹಕಾರ ನೀಡುತ್ತಿಲ್ಲ ಎಂದು ಆರ್‌ಟಿಐ ಅರ್ಜಿ ಸಲ್ಲಿಸುತ್ತಾ ಮೇಲಿನ ಅಧಿಕಾರಿಗಳಿಗೆ ದಾಖಲೆಯಿಲ್ಲದೆ ದೂರು ನೀಡುತ್ತಿದ್ದಾರೆ. ಪಂಚಾಯತಿಯಲ್ಲಿ ನನ್ನ ಕೆಲಸ ಮಾಡಿಕೊಡುತ್ತಿಲ್ಲ ಎಂದು ಗ್ರಾಪಂ ವಿರುದ್ಧ ಅಧಿಕಾರಿಗಳ ಭೇಟಿ ವಿಷಯವೇ ಅರಿಯದೇ ಸುಳ್ಳು ಸುದ್ದಿ ಕೊಟ್ಟಿದ್ದಾರೆ ಎಂದು ಕೃಷ್ಣಮೂರ್ತಿ ಮೇಲೆ ದೂರಿದರು.

ಗ್ರಾಪಂ ಸದಸ್ಯರಾದ ಹರೀಶ್, ನರಸಿಂಹಮೂರ್ತಿ, ಹರೀಶ್, ನೇತ್ರಾವತಿ, ಮಮತಾ, ರೇಷ್ಮಾ, ಪದ್ಮಾವತಿ, ರಂಗೇಗೌಡ್ರು ಉಪಸ್ಥಿತರಿದ್ದರು.

ಪೋಟೋ 4 :

ಕಳಲುಘಟ್ಟದಲ್ಲಿ ಗ್ರಾಪಂ ಅಧ್ಯಕ್ಷೆ ಸೌಮ್ಯ ಆಂಜನಮೂರ್ತಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.