ಸಾರಾಂಶ
ಕೊಪ್ಪಳ ತಾಲೂಕಿನ ಮೈನಹಳ್ಳಿ ಗ್ರಾಮದ ಶಿವಶರಣೆ ಬುಡ್ಡಮ್ಮ ದೇವಿ ಜಾತ್ರಾ ಮಹೋತ್ಸವ ಹಾಗೂ ಮಹಾ ರಥೋತ್ಸವಗಳು ಮೇ 14ರಿಂದ 17ರ ವರೆಗೆ ನಡೆಯಲಿದ್ದು, ದೇವಸ್ಥಾನದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು.
ಕೊಪ್ಪಳ: ತಾಲೂಕಿನ ಮೈನಹಳ್ಳಿ ಗ್ರಾಮದ ಶಿವಶರಣೆ ಬುಡ್ಡಮ್ಮ ದೇವಿ ಜಾತ್ರಾ ಮಹೋತ್ಸವ ಹಾಗೂ ಮಹಾ ರಥೋತ್ಸವಗಳು ಮೇ 14ರಿಂದ 17ರ ವರೆಗೆ ನಡೆಯಲಿದ್ದು, ದೇವಸ್ಥಾನದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು.
ಮೇ 14ರಂದು ರಾತ್ರಿ 10.30ಕ್ಕೆ ಲಘು ರಥೋತ್ಸವ (ಉಚ್ಚಯ್ಯ) ಜರುಗುವುದು. ಮೇ 15ರಂದು ಸಾಯಂಕಾಲ 5.30ಕ್ಕೆ ಮಹಾ ರಥೋತ್ಸವ ಜರುಗುವುದು. ಮೇ 16ರಂದು ಬೆಳಗ್ಗೆ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯುವುದು.ಆನಂತರ ರಾತ್ರಿ 8 ಗಂಟೆಗೆ ಶ್ರೀ ಮೈಲಾರ ಲಿಂಗೇಶ್ವರ ಮತ್ತು ಗಂಗಿ ಮಾಳಮ್ಮನವರ ವಿವಾಹ ಕಾರ್ಯಕ್ರಮ ಹಾಗೂ ರಾತ್ರಿ 10.30ಕ್ಕೆ ಸಂಗೀತ ಮತ್ತು ರಸಮಂಜರಿ ಕಾರ್ಯಕ್ರಮ ನಡೆಯಲಿದೆ. ಮೇ 17ರಂದು ಸಾಯಂಕಾಲ 5.30ಕ್ಕೆ ಕಡುಬಿನ ಕಾಳಗ ಜರುಗಲಿವೆ.
ಪ್ರತಿ ವರ್ಷದಂತೆ ಈ ವರ್ಷ ಮೇ 15ರಂದು ಬೆಳಗ್ಗೆ 8 ಗಂಟೆಯಿಂದ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆಯಿಂದ ರಕ್ತದಾನ ಶಿಬಿರ ನಡೆಯುತ್ತದೆ. ರಕ್ತದಾನಿಗಳು ಈ ಶಿಬಿರದಲ್ಲಿ ರಕ್ತದಾನ ಮಾಡಬಹುದು ಎಂದು ಕಮಿಟಿಯವರು ತಿಳಿಸಿದ್ದಾರೆ.ಆನಂತರ ಮಧ್ಯಾಹ್ನ 12 ಗಂಟೆಯಿಂದ ಭಕ್ತಾದಿಗಳಿಗೆ ಮಹಾಪ್ರಸಾದ ಕಾರ್ಯಕ್ರಮ ಜರುಗುವುದು. ಅಂದು ರಾತ್ರಿ ಶ್ರೀ ಶಿವಶರಣೆ ಬುಡ್ಡಮ್ಮ ದೇವಿ ನಾಟ್ಯ ಸಂಘದಿಂದ ರಾತ್ರಿ 10.30ಕ್ಕೆ ಧನಿಕರ ದೌರ್ಜನ್ಯ ಎಂಬ ಸುಂದರ ಸಾಮಾಜಿಕ ನಾಟಕ ಅಭಿನಯಿಸುವವರು ಎಂದು ಶ್ರೀ ಶಿವಶರಣೆ ಬುಡ್ಡಮ್ಮ ದೇವಿ ದೇವಸ್ಥಾನ ಸಮಿತಿಯವರು ತಿಳಿಸಿದ್ದಾರೆ.
ಗ್ರಾಮದ ಮುಖಂಡರಾದ ಷಣ್ಮುಖಯ್ಯ ತೋಟದ, ಮರಿಶಾಂತವೀರ ಸ್ವಾಮಿ ಚಕ್ಕಡಿಮಠ, ವೀರಯ್ಯ ಹಿರೇಮಠ ನಿಂಗಣ್ಣ ಡಂಬ್ರಳ್ಳಿ, ಗುದ್ನೆಪ್ಪ ಬಳಗೇರಿ, ಶಿವಣ್ಣ ಹ್ಯಾಟಿ, ಬಸವರಾಜ ಅಂಗಡಿ, ವಿರೂಪಾಕ್ಷಿ ಬಳಗೇರಿ, ರೇವಪ್ಪ ಮೆತ್ತಗಲ್ ಉಪಸ್ಥಿತರಿದ್ದರು.