ಸಾರಾಂಶ
ಕನ್ನಡಪ್ರಭ ವಾರ್ತೆ ಟಿ. ನರಸೀಪುರಫೆ. 10 ರಿಂದ 12 ರವರೆಗೆ ತಿರಮಕೂಡಲಿನ ತ್ರಿವೇಣಿ ಸಂಗಮದಲ್ಲಿ ನಡೆಯಲಿರುವ ಕುಂಭಮೇಳ ಮಹೋತ್ಸವದ ಹಿನ್ನೆಲೆ ಜಿಲ್ಲಾಧಿಕಾರಿ ಲಕ್ಷ್ಮೀ ಕಾಂತರೆಡ್ಡಿ ಅವರು ಸ್ಥಳ ಪರಿಶೀಲಿಸಿದರು.ಕಾಶಿಗಿಂತಲೂ ಗುಲಗಂಜಿ ಗಾತ್ರದಲ್ಲಿ ಹೆಚ್ಚಿರುವ ತಿರುಮಕೂಡಲು ಕ್ಷೇತ್ರದಲ್ಲಿ ಮೂರು ವರ್ಷಕ್ಕೊಮ್ಮೆ ಕುಂಭಮೇಳದ ಜಾತ್ರಾ ಮಹೋತ್ಸವ ನಡೆಯುತ್ತಿದ್ದು, ಈ ವರ್ಷವೂ ಕುಂಭಮೇಳ ಮಹೋತ್ಸವವು ಫೆ. 10 ರಿಂದ 12ರವರೆಗೆ ನಡೆಯುತ್ತಿರುವುದರಿಂದ ಜಿಲ್ಲಾಧಿಕಾರಿ ಲಕ್ಷ್ಮೀಕಾಂತರೆಡ್ಡಿ ತ್ರಿವೇಣಿ ಸಂಗಮದ ಸ್ಥಳ ಪರಿಶೀಲಿಸಿ, ಸಕಲ ಸಿದ್ದತೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.ನಂತರ ಮಾತನಾಡಿದ ಅವರು, ಅವಶ್ಯಕತೆ ಇರುವ ಕಡೆ ಸ್ನಾನ ಘಟ್ಟಗಳನ್ನು ನಿರ್ಮಿಸುವಂತೆ ಸಲಹೆ ನೀಡಿದರು. ಗಣ್ಯರು, ಸ್ಥಳೀಯ ಭಕ್ತರಿಗೆ ಪುಣ್ಯಸ್ನಾನ ಮಾಡಲು ಒಂದು ಸಾವಿರದಿಂದ ಎರಡು ಸಾವಿರ ಜನರಿಗೆ ಅನುವಾಗುವಂತೆ ಸ್ನಾನ ಘಟ್ಟಗಳನ್ನು ನಿರ್ಮಿಸಲು ಸೂಚಿಸಿದರು. ನದಿ ನೀರು ಹೆಚ್ಚಿಗೆ ಇರುವುದರಿಂದ ಭಕ್ತಾಧಿಗಳ ಹಿತದೃಷ್ಟಿಯಿಂದ ಆಯಕಟ್ಟಿನ ಸ್ಥಳಗಳಲ್ಲಿ ಸ್ನಾನಘಟ್ಟಗಳನ್ನು ನಿರ್ಮಿಸಬೇಕು. ಗಣ್ಯರು, ಸ್ವಾಮೀಜಿಗಳು ಸ್ಣಾನ ಮಾಡಲು ತೆಪ್ಪಗಳಲ್ಲಿ ಕರೆದೊಯ್ದು ಸ್ನಾನ ಮಾಡಿಸಲು ಅವಕಾಶ ಕಲ್ಪಿಸಲಾಗುವುದು. ಕುಂಭಮೇಳದ ಪೂರ್ವ ತಾಯಾರಿಗೆ ಅಂದಾಜು ಪಟ್ಟಿಯನ್ನು ತಯಾರಿಸಿ ಎರಡು ದಿನದೊಳಗೆ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರು.ಅವಶ್ಯಕತೆ ಇದ್ದರೆ ಹೆಚ್ಚುವರಿ ಮೆಟ್ಟಿಲುಗಳನ್ನು ನಿರ್ಮಿಸಿ ಈ ಭಾಗದ ಬರುವ ಭಕ್ತರ ಪುಣ್ಯಸ್ನಾನಕ್ಕೆ ತೊಂದರೆಯಾಗದಂತೆ ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.ಪ್ರತ್ಯೇಕ ಜಾಗ ಗುರುತಿಸಬೇಕು: ತ್ರಿವೇಣಿ ಸಂಗಮದಲ್ಲಿ ನೀರಿನ ಹರಿವು ಹೆಚ್ಚು ಇರುವುದರಿಂದ ನದಿಯ ಮಧ್ಯಭಾಗದಲ್ಲಿ ಹಿಂದಿನ ಕುಂಭಮೇಳದಂತೆ ಧಾರ್ಮಿಕ ಕಾರ್ಯ, ಯಾಗ, ಹೋಮ ಮತ್ತು ಹವನ ಕಾರ್ಯಗಳಿಗೆ ವೇದಿಕೆಗಳನ್ನು ನಿರ್ಮಿಸಲು ಸಾಧ್ಯವಾಗುವುದಿಲ್ಲ. ಮಹೋತ್ಸವ ನಡೆಯುವ ಸಮೀಪದಲ್ಲೇ ಪ್ರತ್ಯೇಕ ಸ್ಥಳವನ್ನು ಗುರುತಿಸಿ ಧಾರ್ಮಿಕ ಕಾರ್ಯಕ್ಕೆ ವೇದಿಕೆ, ಯಾಗ, ಹೋಮ ಮತ್ತು ಹವನ ಕಾರ್ಯಗಳಿಗೆ ತೊಂದರೆಯಾಗದಂತೆ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.ಎಸ್ಪಿ ವಿಷ್ಣುವರ್ಧನ್, ಉಪವಿಭಾಗಾಧಿಕಾರಿ ರಕ್ಷಿತ್, ಜಿಲ್ಲಾ ಕಾರ್ಯಪಾಲಕ ಎಂಜಿನಿಯರ್ ಜಿ. ರಾಜು, ತಹಸೀಲ್ದಾರ್ ಟಿ.ಎಸ್. ಸುರೇಶಾಚಾರ್, ಕಾವೇರಿ ನೀರಾವರಿ ನಿಗಮದ ಎಇಇ ಗಳಾದ ಎಸ್. ಮಂಜುನಾಥ್, ಶಾಂತಕುಮಾರ್, ಮಾದೇಗೌಡನ ಹುಂಡಿ ಎಇ ಮಂಜುನಾಥ್, ರವೀಂದ್ರ, ಡಿವೈಎಸ್ಪಿ ಜಿ.ಎಸ್. ರಘು, ವೃತ್ತ ನಿರೀಕ್ಷಕರಾದ ಮನೋಜಕುಮಾರ್, ಧನಂಜಯ್, ಜಿ ಪಂ ಎಂಜಿನಿಯರ್ ಚರಿತಾ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ಸತೀಶ್ ಚಂದ್ರನ್, ಪುರಸಭೆ ಮುಖ್ಯ ಅಧಿಕಾರಿ ವಸಂತಕುಮಾರಿ, ಸೆಸ್ಕ್ ಎಂಜಿನಿಯರ್ ವಿರೇಶ್, ಶಾಂತಕುಮಾರ್, ಇಒ ಅನಂತರಾಜು, ಯೋಜನಾಧಿಕಾರಿ ರಂಗಸ್ವಾಮಿ, ಆರ್ಐ ಮಹೇಂದ್ರ, ಮುಖಂಡರಾದ ಪಿ. ಸ್ವಾಮಿನಾಥ್, ಫಣೀಶ್, ಚೇತನ್, ಲಕ್ಷ್ಮಣ, ಮಂಜು, ಈಶ್ವರ್, ನಾಗಣ್ಣ, ಸೋಮಣ್ಣ, ಪಾರುಪತ್ತೆದಾರ್ ಚೇತನ್, ಪ್ರದೀಪ್ ಇದ್ದರು.