ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಸಮಾಜದಲ್ಲಿ ನಿರ್ಗತಿಕರಿಗೆ, ಬಡವರಿಗೆ ಕಷ್ಟದಲ್ಲಿದ್ದ ನೆರೆಹೊರೆಯವರಿಗೆ ಸಹಾಯ ಮಾಡುವ ಧರ್ಮ ನಿಜವಾದ ಧರ್ಮ ಎಂದು ಅಲ್‌ಅಮೀನ್ ಆಸ್ಪತ್ರೆಯ ಅಧೀಕ್ಷಕ ಡಾ.ಜಿಲಾನಿ ಅವಟಿ ಹೇಳಿದರು.ನಗರದ ಬಡಿಕಮಾನ್ ರಸ್ತೆಯಲ್ಲಿರುವ ಅಲ್‌ಅಮೀನ್ ಆಸ್ಪತ್ರೆಯಲ್ಲಿ ನಡೆದ ಕಿಡ್ನಿ ಉಚಿತ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಕಿಡ್ನಿ ಕಸಿ ಮಾಡುವುದು, ಮೊಳಕಾಲಿನ ಹಾಗೂ ಇತರೆ ಸಂದುಗಳ ಎಂಡಸ್ಕೋಪಿ ಚಿಕಿತ್ಸೆ, ಸಂದು ಜೋಡಣೆ, ನರಗಳ ಚಿಕಿತ್ಸೆ, ತಲೆಯ ಕ್ಲಿಷ್ಟಕರವಾದ ಶಸ್ತ್ರ ಚಿಕಿತ್ಸೆ, ಲಾಮಿನಾರ್ ಓಟಿ, ಐಸಿಯು, ಮತ್ತು ಇನ್ನಿತರ ವೈದ್ಯಕೀಯ ಸಂಬಂಧಿತ ಪ್ಯಾರಾಮೆಡಿಕಲ್ ನರ್ಸಿಂಗ್, ಡೆಂಟಲ್ ಕೋರ್ಸ್‌ಗಳು ನಮ್ಮಲ್ಲಿ ಲಭ್ಯವಿದ್ದು ,ಇದರ ಉಪಯೋಗವನ್ನು ಎಲ್ಲರೂ ಪಡೆಯಬೇಕು ಎಂದು ಮನವಿ ಮಾಡಿದರು.ಕಿಡ್ನಿ ತಜ್ಞ ಡಾ.ಸುರೇಶ ಕಾಗಲ್ಕರ್ ಹಾಗೂ ಡಾ.ಅಶೋಕ ಬಿರಾದಾರ ತಂಡ ಯಶಸ್ವಿಯಾಗಿ ರೋಗಿಗಳ ಪರೀಕ್ಷೆ ಮಾಡಿ ಅವರ ದಾಖಲೆಗಳನ್ನು ಪರಿಶೀಲನೆ ಮಾಡಿ ಉಚಿತವಾಗಿ ಔಷಧಿಗಳನ್ನು ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಅಥಣಿ ರಸ್ತೆಯಲ್ಲಿಯ ಅಲ್‌ಅಮೀನ್ ವೈದ್ಯಕೀಯ ಕಾಲೇಜಿಗೆ ದಾಖಲಾಗಲು ಸಲಹೆ ನೀಡಿದರು.ಡಾ.ಸುರೇಂದ್ರ ಅಗರ್ವಾಲ್, ಡಾ.ಶಫಿಯಾ, ವೈದ್ಯ ವಿದ್ಯಾರ್ಥಿಗಳಾದ ರಾಘವೇಂದ್ರ, ಮಿಹಿರ್ ಪುಣೇಕರ, ಅನುಪ, ವಿದ್ಯಾ ,ಮಧು, ಅಬ್ದುಲ್, ನೇಹಾ, ಕವನ್ ಪಟೇಲ್, ಸಿರಾಜ್, ಶಾಹಿಂ ಶಿಬಿರದಲ್ಲಿ ಭಾಗವಹಿಸಿದ್ದರು.
ಬಡಿಕಮಾನ ಆದಿಲ್ ಶಾಹಿ ಆಲಮೀನ್ ಆಸ್ಪತ್ರೆಯಲ್ಲಿ ಉಚಿತ ಕಿಡ್ನಿ ತಪಾಸಣೆ
ವಿಜಯಪುರ: ನಗರದ ಬಡಿಕಮಾನ ರಸ್ತೆಯಲ್ಲಿನ ಆಲಮೀನ್ ಆಸ್ಪತ್ರೆಯಲ್ಲಿ ಉಚಿತ ಕಿಡ್ನಿ ತಪಾಸಣೆಯು ಪ್ರತಿ ತಿಂಗಳು 2ನೇ ಭಾನುವಾರ ಪ್ರಾರಂಭವಾಗಲಿದೆ. ತಪಾಸಣೆಯಲ್ಲಿ ಹೊಟ್ಟೆ ನೋವು ,ಕಿಡ್ನಿ ಹರಳುಗಳು ಮೂತ್ರ ಸಮಸ್ಯೆ, ಲೈಂಗಿಕ ಸಮಸ್ಯೆ, ಶ್ರವಣದ ಸಮಸ್ಯೆ, ಮಕ್ಕಳ ಮೂತ್ರ ಸಮಸ್ಯೆ, ಕಿಡ್ನಿ ಕ್ಯಾನ್ಸರ್, ಪುರುಷ ಬಂಜೆತನ, ಕಿಡ್ನಿ ಕಸಿ ಮಾಡುವುದು, ಡಯಾಲಿಸೀಸ್ ಇನ್ನಿತರ ಸಮಸ್ಯೆ ಕುರಿತು ಉಚಿತವಾಗಿ ತಜ್ಞ ವೈದ್ಯರಿಂದ ಬೆಳಗ್ಗೆ 9 ರಿಂದ ಸಂಜೆ 5ರವರೆಗೆ ಅಲಮೀನ್ ವೈದ್ಯಕೀಯ ಕಾಲೇಜಿನ ಯುರಾಲಜಿ ವಿಭಾಗದ ತಂಡದ ವೈದ್ಯ ಡಾ.ಸುರೇಶ ಕಾಗಲ್ಕರ್, ಡಾ.ಅಶೋಕ ಬಿರಾದಾರ ಹಾಗೂ ಸ್ನಾತಕೋತರ ವಿದ್ಯಾರ್ಥಿಗಳಿಂದ ತಪಾಸಣೆ ಮಾಡಿ ಸಲಹೆ ನೀಡಲಾಗುವುದು. ಹೆಚ್ಚಿನ ಚಿಕಿತ್ಸೆಯನ್ನು ಅಥಣಿ ರಸ್ತೆಯಲ್ಲಿಯ ಅಲ್ ಅಮೀನ ವೈದ್ಯಕೀಯ ಆಸ್ಪತ್ರೆಯಲ್ಲಿ ನೀಡಲಾಗುವುದು. ಆಸಕ್ತ ಲೋಗಿಗಳು ತಮ್ಮ ಹತ್ತಿರ ಇರುವ ಎಲ್ಲ ದಾಖಲೆಗಳೊಂದಿಗೆ ಕಿಡ್ನಿ ಹರಳಿನ ಎಲ್ಲ ಕಡತಗಳೊಂದಿಗೆ ತಪಾಸಣೆಯಲ್ಲಿ ರವಿವಾರದಂದು ಭಾಗಿಯಾಗಬೇಕೆಂದು ಆಸ್ಪತ್ರೆಯ ಅಧೀಕ್ಷಕ ಡಾ.ಜಿಲಾನಿ ಅವಟಿ ಹಾಗೂ ವಿಭಾಗದ ಮುಖ್ಯಸ್ಥ ಡಾ.ಸುರೇಶ ಕಾಗಲ್ಕರ್ ವಿನಂತಿಸಿಕೊಂಡಿದ್ದಾರೆ. ಸಂಪರ್ಕಕ್ಕಾಗಿ ಮೊ.8884792610 ಕೋರಲಾಗಿದೆ.