ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ರಾಜ್ಯದ ಎಲ್ಲ ವಿಕಲಚೇತನರ ಪ್ರತಿ ತಿಂಗಳ ಮಾಶಾಸನ ಕಳೆದ 2-3 ತಿಂಗಳಿಂದ ಜಮೆಯಾಗದೆ ವಿಕಲಚೇತನರು ಹಾಗೂ ವಯೋವೃದ್ಧರು ತೊಂದರೆ ಎದುರಿಸುತ್ತಿದ್ದಾರೆ ಎಂದು ತಾಲೂಕಿನ ಮುತ್ತಗಿ ಗ್ರಾಮದ ಹಿರಿಯ ನಾಗರಿಕರ ಸೇವಾ ಸಂಘದ ಕಾರ್ಯದರ್ಶಿ ಮೌಲಾಲಿ ಮಂಟೂರ ತಿಳಿಸಿದ್ದಾರೆ.

ಆರೋಗ್ಯದ ಚಿಕಿತ್ಸೆ ಪಡೆಯಲು ಔಷಧಿಗಳನ್ನು ಖರೀದಿಸಲು, ನಿತ್ಯದ ಹಾಲು, ರೇಷನ್ ಸಾಮಗ್ರಿಗಳು ಖರೀದಿಸಲು ಮತ್ತು ಮನೆ ಬಾಡಿಗೆ ಕಟ್ಟಲು ಹಣ ಇಲ್ಲದೆ ಪರದಾಡುವಂತಾಗಿದೆ. ಮುಖ್ಯಮಂತ್ರಿಗಳು ವಿಕಲಚೇತನರ ಕಡೆ ಗಮನ ಹರಿಸಿ ಆದಷ್ಟು ಬೇಗ ರಾಜ್ಯದ ಎಲ್ಲ ವಿಕಲಚೇತನರಿಗೆ ಮಾಸಾಶನ ಹಣ ಅವರ ಖಾತೆಗೆ ಜಮೆ ಮಾಡುವಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಪ್ರಕಟಣೆ ಮೂಲಕ ವಿನಂತಿಸಿದ್ದಾರೆ.