ನರಿಯಂದಡ ಗ್ರಾಮದ ಮುಖ್ಯರಸ್ತೆಯ ಬದಿಯಲ್ಲಿ ಇರುವ ವಿದ್ಯುತ್‌ ಕಂಬಗಳು ಬೀಳುವ ಹಂತದಲ್ಲಿದೆ. ಜೀವ ಅಪಾಯವಾಗುವ ಮುನ್ನ ತಕ್ಷಣವೇ ವಿದ್ಯುತ್‌ ಕಂಬ ಬದಲಾಯಿಸಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ.

ದುಗ್ಗಳ ಸದಾನಂದಕನ್ನಡಪ್ರಭ ವಾರ್ತೆ ನಾಪೋಕ್ಲು

ಸಮೀಪದ ನರಿಯಂದಡ ಗ್ರಾಮದ ಮುಖ್ಯರಸ್ತೆಯ ಬದಿಯಲ್ಲಿ ಇರುವ ವಿದ್ಯುತ್ ಕಂಬಗಳು ಬೀಳುವ ಹಂತದಲ್ಲಿದ್ದು ಜೀವ ಅಪಾಯವಾಗುವ ಮುನ್ನ ತಕ್ಷಣವೇ ವಿದ್ಯುತ್ ಕಂಬ ಬದಲಾಯಿಸಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ.

ಚೆಯಂಡಾಣೆಯಿಂದ ಪಾರಾಣೆ ಸಂಪರ್ಕಿಸುವ ನರಿಯಂದಡ ಮುಖ್ಯ ರಸ್ತೆಯ ತೆರ್ಮೆಕಾಡು (ಜಂಕ್ಷನ್) ರಸ್ತೆಯಲ್ಲಿ ಶಿಥಿಲವಸ್ಥೆಯಲ್ಲಿರುವ ಎರಡು ವಿದ್ಯುತ್ ಕಂಬಗಳು ಬುಡದಲ್ಲಿ ಬಿರುಕು ಬಿಟ್ಟು ವಾಲಿ ಬೀಳುವ ಹಂತ ತಲುಪಿ ತೀವ್ರ ಅಪಾಯ ಮಟ್ಟದಲ್ಲಿದೆ.

ಈ ರಸ್ತೆಯಲ್ಲಿ ಬೆಳಗ್ಗೆ ಸಂಜೆ ಶಾಲಾ ವಿದ್ಯಾರ್ಥಿಗಳು ಸೇರಿದಂತೆ ವಾಹನಗಳು ಹಾಗೂ ಗ್ರಾಮೀಣ ಜನರು ಅಧಿಕ ಸಂಖ್ಯೆಯಲ್ಲಿ ಸಂಚರಿಸುತ್ತಿರುತ್ತಾರೆ. ವಿದ್ಯುತ್ ಕಂಬ ಮುರಿದು ಬಿದ್ದಲ್ಲಿ ಭಾರಿ ಜೀವ ಅಪಾಯ ಸಂಭವಿಸುವ ಸಾಧ್ಯತೆ ಇದ್ದು ಈ ಬಗ್ಗೆ ಚೆಸ್ಕಾಂ ಇಲಾಖೆ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.

------------------------------------

ಅಪಾಯ ಮಟ್ಟದಲ್ಲಿರುವ ವಿದ್ಯುತ್ ಕಂಬಗಳನ್ನು ಬದಲಾಯಿಸಬೇಕೆಂದು ವರ್ಷಗಳ ಹಿಂದೆ ಸಂಬಂಧಪಟ್ಟವರ ಗಮನಕ್ಕೆ ಕೊಡಲಾಗಿದೆ. ಇದೀಗ ವಾಲಿ, ಅಪಾಯ ಮಟ್ಟದಲ್ಲಿದ್ದು ಜೀವ ಹಾನಿಯಾಗುವ ಮೊದಲು ಕೂಡಲೇ ಚೆಸ್ಕಂ ಇಲಾಖೆ ಸಮಸ್ಯೆಯನ್ನು ಬಗೆಹರಿಸಬೇಕಾಗಿದೆ. ಗಣೇಶ್ ತೆರ್ಮೆಕಾಡು, ಗ್ರಾಮಸ್ಥ ನರಿಯಂದಡ ಗ್ರಾಮ

--------------------------------------------------------------------ಈ ಅಪಾಯದಲ್ಲಿರುವ ವಿದ್ಯುತ್ ಕಂಬಗಳ ಬಗ್ಗೆ ನನಗೆ ಮಾಹಿತಿ ಇಲ್ಲ. ಸಿಬ್ಬಂದಿಗಳನ್ನು ಸ್ಥಳಕ್ಕೆ ಕಳುಹಿಸಿ ಮಾಹಿತಿ ಪಡೆದು ಸೂಕ್ತ ಕ್ರಮ ಕೈಗೊಳ್ಳಲಾಗುವುದು.

ಚೈತ್ರೇಶ್, ಚೆಸ್ಕಾಂ ಇಲಾಖೆಯ ಜೂನಿಯರ್ ಇಂಜಿನಿಯರ್ ಮೂರ್ನಾಡು -----------------------------------------