ವಾಲ್ಮೀಕಿ ಅಕ್ರಮ: ಸಿಎಂ ರಾಜೀನಾಮೆಗೆ ಶ್ರೀರಾಮಸೇನೆ ಆಗ್ರಹ

| Published : Jul 26 2024, 01:32 AM IST

ವಾಲ್ಮೀಕಿ ಅಕ್ರಮ: ಸಿಎಂ ರಾಜೀನಾಮೆಗೆ ಶ್ರೀರಾಮಸೇನೆ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಇಡಿ ಅಧಿಕಾರಿಗಳ ಮೇಲೆಯೇ ದೂರನ್ನು ಸಲ್ಲಿಸುವಂತೆ ಮಾಡಿ ತನಿಖಾ ಅಧಿಕಾರಿಗಳಿಗೆ ಭಯ ಹುಟ್ಟಿಸುವಂತೆ ಮಾಡುತ್ತಿರುವುದರಿಂದ ಮುಖ್ಯಮಂತ್ರಿಗಳು ಈ ಹಗರಣದಲ್ಲಿ ಪಾಲುದಾರರಾಗಿದ್ದಾರೆ ಎಂಬ ಅನುಮಾನಗಳು ಹೆಚ್ಚಾಗುತ್ತಿವೆ.ಆದ್ದರಿಂದ ಸಿದ್ದರಾಮಯ್ಯನವರ ರಾಜೀನಾಮೆಗೆ ಆಗ್ರಹಿಸಿ ಗೌರವಾನ್ವಿತ ರಾಜ್ಯಪಾಲರಿಗೆ ತಹಸೀಲ್ದಾರ್ ಮೂಲಕ ಮನವಿ ಮಾಡುತ್ತಿರುವುದಾಗಿ ತಿಳಿಸಿದರು.

ಕನಕಪುರ: ವಾಲ್ಮೀಕಿ ನಿಗಮದಲ್ಲಿ ನಡೆದಿರುವ ಅಕ್ರಮದ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೂಡಲೇ ರಾಜಿನಾಮೆ ನೀಡುವಂತೆ ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ನಾಗರ್ಜುನ್ ಗೌಡ ಒತ್ತಾಯಿಸಿದರು.

ತಾಲೂಕು ಕಚೇರಿಯಲ್ಲಿ ಗ್ರೇಡ್-2 ತಹಸೀಲ್ದಾರ್ ಶಿವಕುಮಾರ್ ರವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರ ತಾವು ಅಹಿಂದ ಪರ ಎಂಬ ಹೇಳಿಕೆಯು ಕೇವಲ ಭಾಷಣಕ್ಕೆ ಮಾತ್ರ ಸೀಮಿತವಾಗಿದೆ. ರಾಜ್ಯದ ಇತಿಹಾಸದಲ್ಲೇ ಭಾರೀ ಪ್ರಮಾಣದಲ್ಲಿ ದಲಿತರ ಹಣ ಅಕ್ರಮವಾಗಿ ವರ್ಗಾವಣೆಯಾಗಿದ್ದರೂ ಸಹ ಅದರ ಬಗ್ಗೆ ನಿಪಕ್ಷಪಾತವಾಗಿ ತನಿಖೆ ಮಾಡುವ ಬದಲು ತಮ್ಮ ಶಾಸಕರನ್ನು ಬಚಾವು ಮಾಡಲು ತನಿಖೆಯ ಹಾದಿ ತಪ್ಪಿಸಿ ಹಗರಣವನ್ನು ಸಂಪೂರ್ಣವಾಗಿ ಹಳ್ಳ ಹಿಡಿಸಲು ವ್ಯವಸ್ಥಿತ ಪಿತೂರಿ ಮಾಡಿದಂತೆ ತೋರುತ್ತಿದೆ ಎಂದು ಆರೋಪಿಸಿದರು.

ಇಡಿ ಅಧಿಕಾರಿಗಳ ಮೇಲೆಯೇ ದೂರನ್ನು ಸಲ್ಲಿಸುವಂತೆ ಮಾಡಿ ತನಿಖಾ ಅಧಿಕಾರಿಗಳಿಗೆ ಭಯ ಹುಟ್ಟಿಸುವಂತೆ ಮಾಡುತ್ತಿರುವುದರಿಂದ ಮುಖ್ಯಮಂತ್ರಿಗಳು ಈ ಹಗರಣದಲ್ಲಿ ಪಾಲುದಾರರಾಗಿದ್ದಾರೆ ಎಂಬ ಅನುಮಾನಗಳು ಹೆಚ್ಚಾಗುತ್ತಿವೆ.ಆದ್ದರಿಂದ ಸಿದ್ದರಾಮಯ್ಯನವರ ರಾಜೀನಾಮೆಗೆ ಆಗ್ರಹಿಸಿ ಗೌರವಾನ್ವಿತ ರಾಜ್ಯಪಾಲರಿಗೆ ತಹಸೀಲ್ದಾರ್ ಮೂಲಕ ಮನವಿ ಮಾಡುತ್ತಿರುವುದಾಗಿ ತಿಳಿಸಿದರು.

ಶ್ರೀರಾಮ ಸೇನೆಯ ಜಿಲ್ಲಾ ಕಾರ್ಯದರ್ಶಿ ನವೀನ್, ಸಾಮಾಜಿಕ ಜಾಲತಾಣದ ಪವನ್ ಗೌಡ, ಸಹ ಕಾರ್ಯದರ್ಶಿ ಅರುಣ್, ತಾಲೂಕು ಅಧ್ಯಕ್ಷ ರಾಜ ಗೋಪಾಲ್, ಮೋಹನ್ ಹಾಗೂ ಚೀರಣಕುಪ್ಪೆ ಕುಮಾರ್ ಹಾಜರಿದ್ದರು.