ಸಾರಾಂಶ
ಕನ್ನಡಪ್ರಭ ವಾರ್ತೆ ಭಾರತೀನಗರ
ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್ ವಿರೋಧಿಸಿ ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘದ ಪದಾಧಿಕಾರಿಗಳು ಅಂಬೇಡ್ಕರ್ ಭವನದ ಬಳಿ ಗುರುವಾರ ಪ್ರತಿಭಟನೆ ನಡೆಸಿದರು.ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘದ ರಾಜ್ಯಾಧ್ಯಕ್ಷ ಎಂ.ಪುಟ್ಟಮಾದು ಮಾತನಾಡಿ, ಕೇಂದ್ರದ ಬಜೆಟ್‌ನಲ್ಲಿ ಕೃಷಿ ಕಾರ್ಮಿಕರನ್ನು ಸಂಪೂರ್ಣ ಕಡೆಗಣಿಸಿ ಬಂಡವಾಳಶಾಯಿಗಳಿಗೆ ಮಣೆ ಹಾಕಿದ್ದಾರೆ ಎಂದು ಆರೋಪಿಸಿದರು.
ಪಡಿತರ ಸಾರ್ವಜನಿಕರ ವಿತರಣೆ ವ್ಯವಸ್ಥೆಯಲ್ಲಿ ಬಲಪಡಿಸಲು ಬಜೆಟ್‌ನಲ್ಲಿ ಯಾವುದೇ ಕ್ರಮಕೈಗೊಂಡಿಲ್ಲ. ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಕಾರ್ಯಕ್ರಮಕ್ಕೆ 86 ಸಾವಿರ ಕೋಟಿ ಹಂಚಿಕೆಯಲ್ಲಿ ಈಗ ಯಾವುದೇ ಹೆಚ್ಚಳವಾಗಿಲ್ಲ ಎಂದು ದೂರಿರು.2 ವರ್ಷಗಳ ಹಿಂದೆ ಈ ಮೊತ್ತ 90 ಸಾವಿರ ಕೋಟಿ ಇತ್ತು. ಕೇಂದ್ರ ಬಜೆಟ್ ಒಟ್ಟು ಗಾತ್ರ 44 ಲಕ್ಷ ಕೋಟಿಯಿಂದ 48 ಲಕ್ಷ ಕೋಟಿಗೆ ಏರಿಕೆಯಾಗಿದ್ದರೂ ಜನ ಸಾಮಾನ್ಯರ ಯೋಜನೆಗಳಿಗೆ ಅನುದಾನ ಪ್ರಮಾಣ ಕಡಿಮೆಗೊಂಡಿರುವುದು ಇವರ ದುರಾಡಳಿ ವೈಖರಿಯನ್ನು ಎತ್ತಿತೋರಿಸುತ್ತಿದೆ ಎಂದರು.
ಶಿಕ್ಷಣ, ಆರೋಗ್ಯ, ಗ್ರಾಮೀಣ ಉದ್ಯೋಗ, ಎಸ್‌ಸಿ, ಎಸ್‌ಟಿ ಜನರ ರೈತ ವಿಭಾಗಗಳಿಗೆ ಈ ಬಜೆಟ್‌ನಲ್ಲಿ ತುಳಿತ್ತಕೊಳಗಾಗಿದ್ದು, ವಿದೇಶಿ ಬಂಡವಾಳಶಾಯಿಗಳ ಪರವಾಗಿದೆ. ಭೂ-ಸುಧಾರಣೆಯ ಆಶಯಗಳನ್ನು ಬುಡಮೇಲು ಮಾಡಿ ಜನರ ಭೂಮಿಯನ್ನು ಕಾರ್ಪೋರೇಟ್‌ಗಳಿಗೆ ಹಂಚಲಾಗುತ್ತಿದೆ. ಹಸಿರು ಕ್ರಾಂತಿ ಹೆಸರಿನಲ್ಲಿ ಗಣಿಗಾರಿಕೆಗಾಗಿ ಎಲ್ಲಾ ಏಜೆನ್ಸಿ ಪ್ರದೇಶಗಳನ್ನು ಅಂಬಾನಿ, ಅದಾನಿಗಳಿಗೆ ಹಸ್ತಾಂತರಿಸಲು ಹೊರಟಿದೆ ಎಂದು ಕಿಡಿಕಾರಿದರು.ಇದು ರೈತರ, ಕೃಷಿಕೂಲಿಕಾರ್ಮಿಕರ ಬಜೆಟ್ ಅಲ್ಲ. ಅದಕ್ಕಿಂತ ಹೆಚ್ಚಾಗಿ ಈ ಬಜೆಟ್ ಸಂರ್ಪೂವಾಗಿ ಕಾರ್ಮಿಕರು ಮತ್ತು ಸಾಮಾನ್ಯ ಜನರ ವಿರೋಧಿಯಾಗಿದೆ. ಬಡವರ ಕಷ್ಟದ ಬಗ್ಗೆ ಚೆಲ್ಲಾಟವಾಡುತ್ತಿರುವ ಕೇಂದ್ರ ಸರ್ಕಾರಕ್ಕೆ ಕೃಷಿಕೂಲಿಕಾರರ ಸಂಘ ಖಂಡಿಸುತ್ತಿದೆ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರವು ಅಂಬೇಡ್ಕರ್ ನಿಗಮದಲ್ಲಿ ಇಟ್ಟಿದ್ದ ಹಣವನ್ನು ಸಹ ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡು ದಲಿತರಿಗೆ ಅನ್ಯಾಯವಾಗಿದೆ. ಜೊತೆಗೆ ವಾಲ್ಮಿಕಿ ನಿಗಮದ ಹಣವನ್ನು ದುರುಪಯೋಗ ಪಡಿಸಿಕೊಂಡಿದೆ. ಇದನ್ನು ಸಿಬಿಐ ತನಿಖೆಗೆ ಒಳಪಡಿಸಬೇಕೆಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಕೃಷಿಕೂಲಿಕಾರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಹನುಮೇಶ್, ಮಳವಳ್ಳಿ ತಾಲೂಕು ಘಟಕದ ಅಧ್ಯಕ್ಷ ಬಿ.ಎಂ.ಶಿವಮಲವಯ್ಯ, ತಾಲೂಕು ಕಾರ್ಯದರ್ಶಿ ಕೆ.ಪಿ.ಅರುಣ್‌ಕುಮಾರ್, ಪಾಂಡವಪುರ ತಾಲೂಕು ಅಧ್ಯಕ್ಷ ಎನ್.ಸುರೇಂದ್ರ, ಕಪನೀಗೌಡ, ಈರೇಗೌಡ, ಯೋಗೇಶ್, ದೇವರಾಜು, ಪುಟ್ಟಸ್ವಾಮಿ, ಶಕುಂತಲ, ನಾಗಮ್ಮ, ಅನಿತ, ಶಭಾವತಿ, ಸೇರಿದಂತೆ ಹಲವರಿದ್ದರು.