ಸಾರಾಂಶ
ದೇವಸ್ಥಾನದಲ್ಲಿನ ವೀರಭದ್ರೇಶ್ವರ ಸ್ವಾಮಿ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪನೆ ಮಾಡಲಾಗುತ್ತಿದೆ.
ಹೂವಿನಹಡಗಲಿ: ತಾಲೂಕಿನ ಮಾನ್ಯರ ಮಸಲವಾಡ ಗ್ರಾಮದ ವೀರಭದ್ರೇಶ್ವರ ಸ್ವಾಮಿ ಪಲ್ಲಕ್ಕಿ ಉತ್ಸವವು ಗ್ರಾಮ ತುಂಬೆಲ್ಲ ಅದ್ಧೂರಿ ಉತ್ಸವದ ಮೂಲಕ ಬೆಟ್ಟದ ಮಲ್ಲೇಶ್ವರ ದೇವಸ್ಥಾನಕ್ಕೆ ತೆರಳಿತು.ಶ್ರಾವಣ ಮಾಸದಲ್ಲಿ ಕೊನೆ ಸೋಮವಾರಕ್ಕೂ ಮುನ್ನ ಪ್ರತಿ ವರ್ಷವೂ ಇಲ್ಲಿನ ವೀರಭದ್ರೇಶ್ವರ ಸ್ವಾಮಿಯ ಪಲ್ಲಕ್ಕಿಯನ್ನು ವಿವಿಧ ಹೂವು ತಳಿರು-ತೋರಣಗಳಿಂದ ಅಲಂಕಾರ ಮಾಡಿ, ದೇವಸ್ಥಾನದಲ್ಲಿನ ವೀರಭದ್ರೇಶ್ವರ ಸ್ವಾಮಿ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪನೆ ಮಾಡಲಾಗುತ್ತಿದೆ.
ಸಮಾಳ, ನಂದಿಕೋಲು ಸೇರಿದಂತೆ ಮಂಗಳ ವಾದ್ಯಗಳೊಂದಿಗೆ ಅದ್ಧೂರಿ ಮೆರವಣಿಗೆಯ, ಮೂಲಕ ಬೆಟ್ಟದ ಮಲ್ಲೇಶ್ವರ ಸ್ವಾಮಿ ದೇವಸ್ಥಾನಕ್ಕೆ ತೆರಳುತ್ತಾರೆ. ನೂರಾರು ಭಕ್ತರು ಪಾದಯಾತ್ರೆಯ ಮೂಲಕ ಪಲ್ಲಕ್ಕಿ ಹೊತ್ತುಕೊಂಡು ಹೋಗುತ್ತಾರೆ. ಇಡೀ ರಾತ್ರಿ ದೇವಸ್ಥಾನದಲ್ಲಿದ್ದು, ದೇವರ ನಾಮಸ್ಮರಣೆಯ ಭಜನೆ ಮಾಡಿದ ಬೆಳಿಕ, ಮಂಗಳವಾರ ಬೆಳಗಿನಜಾವ ಬೆಟ್ಟದ ಮಲ್ಲೇಶ್ವರ ಹಾಗೂ ವೀರಭದ್ರೇಶ್ವರ ಸ್ವಾಮಿಗೆ ಅಭಿಷೇಕ ಮಾಡಿದ ಬಳಿಕ ಮನೆಯಿಂದ ಕಟ್ಟಿಕೊಂಡು ಹೋಗಿರುವ ಬುತ್ತಿ ಹಾಗೂ ದೇವಸ್ಥಾನದಲ್ಲಿ ಮಾಡಿರುವ ಪ್ರಸಾದ ಸ್ವೀಕರಿಸಿದ ಬಳಿ, ಮತ್ತೆ ಪಾದಯಾತ್ರೆಯ ಮೂಲಕ ಮಾನ್ಯರ ಮಸಲವಾಡ ಗ್ರಾಮಕ್ಕೆ ವೀರಭದ್ರೇಶ್ವರ ಸ್ವಾಮಿ ಉತ್ಸವ ಬರಲಿದೆ.ಉತ್ಸವದಲ್ಲಿ ಸಾವಿರಾರು ಭಕ್ತರು ನೆರೆದಿದ್ದರು. ಮಾನ್ಯರ ಮಸಲವಾಡ ಗ್ರಾಮದ ವೀರಭದ್ರೇಶ್ವರ ಸ್ವಾಮಿಗೆ ಸೋಮವಾರ ಬೆಳಿಗಿನಿಂದ ಅಭಿಷೇಕ, ವಿಶೇಷ ಪೂಜೆ ಸಲ್ಲಿಸಲಾಯಿತು.