ಸಾರಾಂಶ
ಜಗತ್ತಿನ ಸಾಂಸ್ಕೃತಿಕ ರಾಯಭಾರಿಯಾಗಿ ತನ್ನ ಕೌಶಲ್ಯದ ಮೂಲಕ ಇಂದಿಗೂ ಜೀವಂತವಾಗಿರುವ ಮಹಾನ್ ಚೇತನ ಶಿಲ್ಪಕಲೆಯ ದೈವ ಪುರುಷ ವಿಶ್ವಕರ್ಮ. ವ್ಯವಸಾಯ ಸಲಕರಣೆಗಳು, ಅಭರಣ ಮತ್ತು ದೇವಾಲಯಗಳ ವಾಸ್ತುಶಿಲ್ಪ ಕಲೆಗಳನ್ನು ತಯಾರಿಸುವ ಜಗತ್ತಿನ ನಿರ್ಮಾತೃ ವಿಶ್ವಕರ್ಮರಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತದಿಂದ ವಿಶ್ವಕರ್ಮ ಜಯಂತಿಯನ್ನು ಆಚರಿಸಲಾಯಿತು.ಜಯಂತಿಯಲ್ಲಿ ವಿಶ್ವಕರ್ಮರ ಭಾವಚಿತ್ರಕ್ಕೆ ಸಮಾಜದ ಮುಖಂಡರು ಹಾಗೂ ವಿವಿಧ ಕನ್ನಡ ಪರ ಸಂಘಟನೆಗಳ ಮುಖಂಡರು ಪುಷ್ಪನಮನ ಸಲ್ಲಿಸಿದರು.
ತಹಸೀಲ್ದಾರ್ ಚೇತನ ಯಾದವ್ ಮಾತನಾಡಿ, ಜಗತ್ತಿನ ಸಾಂಸ್ಕೃತಿಕ ರಾಯಭಾರಿಯಾಗಿ ತನ್ನ ಕೌಶಲ್ಯದ ಮೂಲಕ ಇಂದಿಗೂ ಜೀವಂತವಾಗಿರುವ ಮಹಾನ್ ಚೇತನ ಶಿಲ್ಪಕಲೆಯ ದೈವ ಪುರುಷ ವಿಶ್ವಕರ್ಮ ಎಂದು ಬಣ್ಣಿಸಿದರು.ಇದೇ ವೇಳೆ ಪಟ್ಟಣದಲ್ಲಿ ಅಮರ ಶಿಲ್ಪಿ ಜಕಣಾಚಾರಿ ವೃತ್ತ ನಿರ್ಮಾಣ ಹಾಗೂ ವಿಶ್ವಕರ್ಮ ಸಮುದಾಯ ಭವನ ನಿರ್ಮಿಸುವಂತೆ ಸಮುದಾಯದ ಮುಖಂಡರು ಮನವಿ ಸಲ್ಲಿಸಿದರು.
ಈ ವೇಳೆ ನಿಮಿಷಾಂಬ ದೇವಾಲಯ ಸಮಿತಿ ಸದಸ್ಯ ಕೃಷ್ಣಾಚಾರ್, ಸತೀಶ್, ರಮೇಶ್, ಕರವೇ ಸ್ವಾಮಿಗೌಡ, ಕಸಾಪ ಅಧ್ಯಕ್ಷ ಸಿದ್ದಲಿಂಗು ಸೇರಿದಂತೆ ವಿಶ್ವಕರ್ಮ ಸಮಾಜದ ಇತರ ಮುಖಂಡರು ಹಾಗೂ ಇತರ ಸಂಘಟನೆ ಮುಖಂಡರು ಉಪಸ್ಥಿತರಿದ್ದರು.ವಿಶ್ವಕರ್ಮ ಜಯಂತೋತ್ಸವ ಆಚರಣೆ
ಶ್ರೀರಂಗಪಟ್ಟಣ:ತಾಲೂಕಿನ ಹೊಸ ಉಂಡವಾಡಿ ಗ್ರಾಮದ ಶ್ರೀ ಕಾಳಿಕಾಂಭ ಅಮ್ಮನವರ ದೇವಸ್ಥಾನದಲ್ಲಿ ಶ್ರೀ ವಿರಾಟ್ ವಿಶ್ವಕರ್ಮ ಜಯಂತೋತ್ಸವವನ್ನು ವಿಶ್ವಕರ್ಮ ಸಮಾಜದ ಮುಖಂಡ ಮಜ್ಜಿಗೆಪುರ ಚಲುವಚಾರ್ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಪೂಜಾ ಸಮಿತಿ ಅಧ್ಯಕ್ಷ ಹಳೇ ಉಂಡವಾಡಿ ಶಿವರಾಮುಚಾರ್, ನಾರಾಯಣಚಾರ್, ವಸಂತಕುಮಾರ್, ಮಹದೇವು, ನಾಗಚಾರ್, ಜಯರಾಮು ಮತ್ತಿತರರು ಭಾಗವಹಿಸಿದ್ದರು. ಇದೇ ವೇಳೆ ವಿಶ್ವಕರ್ಮ ಸಮಾಜದ ವಾಸ್ತು ಜ್ಯೋತಿಷಿ ವೇ.ಬ್ರಹ್ಮ ಶ್ರೀ. ಡಾ.ಎಂ.ಎಲ್ ರಮೇಶ್ ಸ್ಥಪತಿ ವಿಶ್ವಕರ್ಮ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು.ಬಿಜೆಪಿ ನಗರಾಧ್ಯಕ್ಷರಾಗಿ ಜಿ.ಇ.ಸುಧಾಕರ ಆಯ್ಕೆಶ್ರೀರಂಗಪಟ್ಟಣ:
ಪಟ್ಟಣದ ಗೋಸೆಗೌಡ ಬೀದಿ ನಿವಾಸಿ ಜಿ.ಇ.ಸುಧಾಕರ ಅವರನ್ನು ಬಿಜೆಪಿ ನಗರಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದು ಮಂಡಲ ಅಧ್ಯಕ್ಷ ಪಿಹಳ್ಳಿ ರಮೇಶ್ ತಿಳಿಸಿದ್ದಾರೆ. ಜವಾಬ್ದಾರಿ ವಹಿಸಿಕೊಂಡು ಪಕ್ಷದ ಸಂಘಟನೆಯಲ್ಲಿ ತೊಡಗಿಕೊಳ್ಳುವ ಜೊತೆಗೆ ಪಕ್ಷದ ಬಲವರ್ಧನೆಗೆ ಶ್ರಮಿಸುವಂತೆ ಸೂಚನೆ ನೀಡಿದ್ದಾರೆ.ವಿವೇಕಾನಂದ ವಾಣಿಜ್ಯ ವಿದ್ಯಾ ಶಾಲೆಗೆ ಶೇ.90 ರಷ್ಟು ಫಲಿತಾಂಶಪಾಂಡವಪುರ: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಬೆಂಗಳೂರು 2025ರ ಜುಲೈನಲ್ಲಿ ನಡೆಸಿದ ವಾಣಿಜ್ಯ ಪರೀಕ್ಷೆಯಲ್ಲಿ ಪಟ್ಟಣದ ವಿವೇಕಾನಂದ ವಾಣಿಜ್ಯ ವಿದ್ಯಾ ಶಾಲೆ ಶೇ.90 ರಷ್ಟು ಫಲಿತಾಂಶ ಪಡೆದಿದೆ.
ಶಾಲೆ ವಿದ್ಯಾರ್ಥಿಗಳಾದ ಕೆ.ಆರ್.ತೇಜಸ್ವಿನಿ ಜೂ.ಕನ್ನಡ ಮತ್ತು ಇಂಗ್ಲಿಷ್ ಎರಡು ವಿಭಾಗದ ಟೈಪಿಂಗ್‌ನಲ್ಲಿ ಶೇ.95 ಮತ್ತು 92.5, ಕೆ.ವಿ.ರೋಜಾ ಶೇ.93.5 ಮತ್ತು ಶೇ.93, ಕೆ.ಎನ್.ನಮಿತಾ ಶೇ.85.5 ಮತ್ತು ಶೇ.48.5 ಹಾಗೂ ಸಿನಿಯರ್ ವಿಭಾಗದಲ್ಲಿ ಎನ್.ಕೆ.ತನುಷ್ಕಾ ಶೇ.91 ಮತ್ತು ಶೇ.84.5, ಆರ್.ಕೀರ್ತನಾ ಶೇ.90.5 ಮತ್ತು ಶೇ.86 ವಿಷಯವಾರು ಅಂಕ ಗಳಿಸಿ ವಾಣಿಜ್ಯ ಶಾಲೆಗೆ ಗೌರವ ತಂದಿದ್ದಾರೆ. ಪರೀಕ್ಷೆಗೆ ಕುಳಿತ ಒಟ್ಟು 26 ವಿದ್ಯಾರ್ಥಿಗಳಲ್ಲಿ 8 ಡಿಸ್ಟಿಂಷನ್, 6 ಪ್ರಥಮ ದರ್ಜೆ, 4 ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆಂದು ಪ್ರಾಂಶುಪಾಲೆ ಎಂ.ಎಲ್.ಜಯಶ್ರೀ ತಿಳಿಸಿದ್ದಾರೆ.