ಶಿಕ್ಷಣ ಕದಿಯಲಾಗದ ಆಸ್ತಿ, ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ: ನಾಗೇಂದ್ರ

| Published : Sep 18 2025, 01:10 AM IST

ಶಿಕ್ಷಣ ಕದಿಯಲಾಗದ ಆಸ್ತಿ, ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ: ನಾಗೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರೂ ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದ ಆಶಯಗಳು ಇಂದಿಗೂ ಸಮರ್ಥವಾಗಿ ಜಾರಿಯಲಿಲ್ಲ. ಆದಿ ಜಾಂಬವ ಮಾದಿಗರ ಸಮುದಾಯದ ವಿದ್ಯಾವಂತ ನಿರುದ್ಯೋಗಿ ಯುವ ಜನರಿಗೆ ಮೀಸಲಾತಿಯ ಪ್ರಯೋಜನ ಹಾಗೂ ಒಳ ಮೀಸಲಾತಿಯು ಸಮರ್ಪಕವಾಗಿ ಜಾರಿಯಾಗಿಲ್ಲ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಶಿಕ್ಷಣ ಎಂಬ ಜ್ಞಾನ ಬೆಳಕಿನ ಶಕ್ತಿಯನ್ನು ಯಾರಿಂದಲೂ ಕದಿಯಲಾಗದ ಆಸ್ತಿ. ಆದಿಜಾಂಬವ ಮಾದಿಗ ಸಮಾಜದ ಬಂಧುಗಳು ತಮ್ಮ ಮಕ್ಕಳನ್ನು ಶಾಲೆಗೆ ಕಳಿಸಿ ವಿದ್ಯಾವಂತರನ್ನಾಗಿ ಮಾಡಿ ಸಮಾಜದ ಮುಖ್ಯ ವಾಹಿನಿಗೆ ಬರುವಂತೆ ಮಾಡಬೇಕು ಚಿಂತಕ ಅರಕಲವಾಡಿ ನಾಗೇಂದ್ರ ಕಿವಿಮಾತು ಹೇಳಿದರು.

ಪಟ್ಟಣದ ರಾಮದಾಸ್ ಹೋಟೇಲ್‌ನ ಸಭಾಂಗಣದಲ್ಲಿ ತಾಲೂಕಿನ ಮಾದಿಗರ ಕ್ಷೇಮಾಭಿವೃದ್ಧಿ ಸಮಿತಿ ಹಾಗೂ ತೇಗನಹಳ್ಳಿಯ ಆದಿ ಜಾಂಬವ ಯುವ ಕ್ಷೇಮಾಭಿವೃದ್ಧಿ ಸೇವಾ ಟ್ರಸ್ಟ್ ಆಶ್ರಯದಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಮೀಸಲಾತಿಯಲ್ಲಿ ಒಳ ಮೀಸಲಾತಿ ಮಹತ್ವ ಮತ್ತು ಶಿಕ್ಷಣದ ಮೂಲಕ ನಿರುದ್ಯೋಗ ಹೋಗಲಾಡಿಸುವುದು ಹೇಗೆ ಎಂಬ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರೂ ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದ ಆಶಯಗಳು ಇಂದಿಗೂ ಸಮರ್ಥವಾಗಿ ಜಾರಿಯಲಿಲ್ಲ. ಆದಿ ಜಾಂಬವ ಮಾದಿಗರ ಸಮುದಾಯದ ವಿದ್ಯಾವಂತ ನಿರುದ್ಯೋಗಿ ಯುವ ಜನರಿಗೆ ಮೀಸಲಾತಿಯ ಪ್ರಯೋಜನ ಹಾಗೂ ಒಳ ಮೀಸಲಾತಿಯು ಸಮರ್ಪಕವಾಗಿ ಜಾರಿಯಾಗಿಲ್ಲ ಎಂದು ವಿಷಾದಿಸಿದರು.

ಮನ್ಮುಲ್ ನಿರ್ದೇಶಕ ಡಾಲು ರವಿ ಮಾಜ ಸೇವಕ ಸೇವಕ ಮಲ್ಲಿಕಾರ್ಜುನ ಮಾತನಾಡಿ, ಮಾದಿಗ ಸಮುದಾಯದ ಬಂಧುಗಳು ಸಂವಿಧಾನ ಬದ್ಧವಾಗಿ ದೊರೆಯುವ ಮೀಸಲಾತಿ ಸೇರಿದಂತೆ ಒಳ ಮೀಸಲಾತಿ ಎಲ್ಲಾ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಸರ್ಕಾರಿ ಉದ್ಯೋಗವನ್ನು ಪಡೆದುಕೊಂಡು ಸ್ವಾವಲಂಭಿಗಳಾಗಿ ಪ್ರಗತಿಯ ದಿಕ್ಕಿನತ ಸಾಗಬೇಕು ಎಂದರು.

ಇದೇ ವೇಳೆ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ವಿದ್ಯಾರ್ಥಿಗಳನ್ನು ಟ್ರಸ್ಟ್ ಅಧ್ಯಕ್ಷ ಟಿ.ಸಿ.ರಘು ಹಾಗೂ ಸಹಾಯಕ ಪ್ರಾಧ್ಯಾಪಕ ಎಸ್.ಎಂ.ಮಂಜುನಾಥಸ್ವಾಮಿ ನೆನಪಿನ ಕಾಣಿಕೆ ವಿತರಿಸಿ ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ಟ್ರಸ್ಟ್ ಅಧ್ಯಕ್ಷ ರಘು, ಉಪಾಧ್ಯಕ್ಷ ನಾಗೇಶ್, ಗೌರವಾಧ್ಯಕ್ಷ ದಾಸಯ್ಯ, ಕಾರ್ಯದರ್ಶಿ ಟಿ.ಜೆ.ಉಮೇಶ್, ಖಜಾಂಚಿ ವಿನೋದ್ ಕುಮಾರ್, ಆಡಳಿತ ಮಂಡಳಿ ನಿರ್ದೇಶಕರಾದ ಮರಿಯಯ್ಯ, ಸತೀಶ್, ಆನಂದ, ರಮೇಶ್, ಪ್ರಮೋದ, ಸತೀಶ್, ಅರುಣ್ ಕುಮಾರ್, ಹರಿಹರಪುರ ನಿತಿನ್ ಶರ್ಮಾ, ಯಗಚಗುಪ್ಪೆ ಸೋಮಶೇಖರ್, ಮಾಜಿ ಸೈನಿಕರಾದ ಜಯರಾಮ್, ಸ್ಟುಡಿಯೋ ಜ್ಞಾನೇಶ್, ಹೊಸಹೊಳಲಿನ ಮೊಟ್ಟೆ ಹರೀಶ್, ಕಾಂತರಾಜು, ತೇಗನಹಳ್ಳಿ ಕರ್ಣ, ಮೂಡನಹಳ್ಳಿ ವೆಂಕಟೇಶ್ ಹರಿಹರಪುರ ಶಿವಕುಮಾರ್, ಬಂಡಿಹೊಳೆ ಗ್ರಾಪಂ ಸದಸ್ಯ ಬಿ.ಬಿ. ಕಾವಲು ಮೋಹನ್, ಹೊಸ ಹೊಳಲು ಮಂಜುನಾಥ್ ಸೇರಿದಂತೆ ಹಲವರು ಇದ್ದರು.