ಮರಿತಿಬ್ಬೆಗೌಡರನ್ನು ಗೆಲ್ಲಿಸಿ ಮೇನ್ಮನೆಗೆ ಕಳುಹಿಸಿ: ಶಾಸಕ ಎಆರ್‌ಕೆ

| Published : May 29 2024, 12:56 AM IST

ಮರಿತಿಬ್ಬೆಗೌಡರನ್ನು ಗೆಲ್ಲಿಸಿ ಮೇನ್ಮನೆಗೆ ಕಳುಹಿಸಿ: ಶಾಸಕ ಎಆರ್‌ಕೆ
Share this Article
  • FB
  • TW
  • Linkdin
  • Email

ಸಾರಾಂಶ

ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಿರುವ ಕಾಂಗ್ರೆಸ್‌ ಅಭ್ಯರ್ಥಿ ಮರಿತಿಬ್ಬೇಗೌಡ ಪರವಾಗಿ ಮಂಗಳವಾರ ಶಾಸಕ ಎ.ಆರ್.ಕೃಷ್ಣಮೂರ್ತಿ ಮತಯಾಚನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಮರಿತಿಬ್ಬೆಗೌಡರು ಪ್ರಬುದ್ಧ ರಾಜಕಾರಣಿ, ಹಾಗಾಗಿಯೇ ಅವರು ಪ್ರತಿ ಬಾರಿಯೂ ವಿಧಾನ ಪರಿಷತ್ ಚುನಾವಣೆಯಲ್ಲಿಆಯ್ಕೆಯಾಗುತ್ತಲೆ ಬಂದಿದ್ದು , 5ನೇ ಬಾರಿಗೆ ಮತ್ತೊಮ್ಮೆ ಅವಕಾಶ ಕೇಳುತ್ತಿದ್ದಾರೆ, ಅವರನ್ನು ಮತದಾರರು ಬೆಂಬಲಿಸುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ವಿಧಾನ ಪರಿಷತ್ ನಲ್ಲಿ ಹೆಚ್ಚಿನ ಶಕ್ತಿ ನೀಡಬೇಕು ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಹೇಳಿದರು.

ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಿರುವ ಕಾಂಗ್ರೆಸ್‌ ಅಭ್ಯರ್ಥಿ ಮರಿತಿಬ್ಬೇಗೌಡ ಪರವಾಗಿ ಮಂಗಳವಾರ ಶಾಸಕ ಎ.ಆರ್.ಕೃಷ್ಣಮೂರ್ತಿ ಮತಯಾಚಿಸಿ ಮಾತನಾಡಿದರು.

ಮರಿತಿಬ್ಬೆಗೌಡರು ಮೊದಲಬಾರಿ ಶಾಸಕರಾಗಿದ್ದು ಕಾಂಗ್ರೆಸ್ ಪಕ್ಷದಿಂದಲೇ, ನಂತರ ಬದಲಾದ ಸನ್ನಿವೇಶದಲ್ಲಿ ಅನ್ಯ ಪಕ್ಷದಿಂದ ಗೆಲುವು ಸಾಧಿಸಿದರು. ಅವರ ಪ್ರಬುದ್ಧ ರಾಜಕಾರಣಿಯಾಗಿದ್ದರಿಂದಲೆ ಮತದಾರರು ಅವರನ್ನು 4 ಬಾರಿಯೂ ಬೆಂಬಲ ನೀಡುತ್ತಾ ಬಂದಿದ್ದಾರೆ. ಅನೇಕ ಸಮಸ್ಯೆಗಳಿಗೆ ಸದನದಲ್ಲಿ ಧ್ವನಿಯಾಗಿದ್ದಾರೆ. ಉಪ ಸಭಾಪತಿಗಳಾಗಿಯೂ ಕಾರ್ಯನಿರ್ವಹಿಸಿ ಗಮನ ಸೆಳೆದಿದ್ದಾರೆ.

ನಿಮ್ಮೆಲ್ಲರ ಅನೇಕ ಬೇಡಿಕೆಗಳನ್ನು ಈಡೇರಿಸುವ ಕುರಿತು ಅವರು ಮುಂದಿದ್ದಾರೆ, ಕಾಂಗ್ರೆಸ್ ನಿಮ್ಮೆಲ್ಲರ ಸಮಸ್ಯೆಯನ್ನು ಅರಿತಿದ್ದು ಈನಿಟ್ಟಿನಲ್ಲಿ ನಾನು ಸಹಾ ಶಾಸಕರಾಗಿ ಸದನದ ಗಮನ ಸೆಳೆಯುವೆ ಎಂದರು. ಪಿಂಚಣಿ ಯೋಜನೆಯಲ್ಲಿ ಹಳೆ ಪದ್ಧತಿ ಮುಂದುವರೆಸುವಂತೆ ಸಿಎಂಗೆ ಮನವಿ ಮಾಡುವೆ ಎಂದರು.

ಚುನಾವಣೆ ಎದುರಿಸುವುದು ಸುಲಭದ ಮಾತಲ್ಲ, 19ವರುಷಗಳ ನಂತರ ನಾನು ಶಾಸಕನಾಗಿದ್ದೆನೆ, ನಾನು ನಿಮ್ಮ ಶಾಸಕ ಹೊರಜಗತ್ತಿಗೆ, ಆದರೆ ನಾನು ನಿಮ್ಮೆಲ್ಲರ ಸೇವಕ. ನನ್ನ ಮೇಲೆ ವಿಶ್ವಾಸವಿಟ್ಟು ಮರಿತಿಬ್ಬೆಗೌಡರಿಗೂ ಬೆಂಬಲಿಸಬೇಕಾಗಿ ವಿನಂತಿಸುತ್ತೆನೆ.

ಶಾಸಕರು ಪಟ್ಟಣದ ವಾಸವಿ ಶಾಲೆ, ವಿಶ್ವಚೇತನ ಸಂಸ್ಥೆ, ಎಸ್.ವಿ.ಕೆ ಕಾಲೇಜು, ಸಂತ ಫ್ರಾನಿಸ್ಸ್ ಶಾಲೆ, ಆರ್.ಸಿ.ಎಂ ಶಾಲೆ, ಮಾನಸ ಶಿಕ್ಷಣ ಸಂಸ್ಥೆ, ಜೆಎಸ್ಎಸ್ ಕಾಲೇಜು, ಲಯನ್ಸ್ ಕಾಲೇಜು, ಎಂಜಿಎಸ್ವಿ ಕಾಲೇಜು, ಮಹದೇಶ್ವರ ಕಾಲೇಜು, ವರ್ಮ ಐಟಿಐ ಕಾಲೇಜು ಸೇರಿ ವಿವಿದೆಢೆ ಮತಯಾಚಿಸಿದರು.

ಈ ವೇಳೆ ಉಗ್ರಾಣ ನಿಗಮದ ಅದ್ಯಕ್ಷ ಎಸ್.ಜಯಣ್ಣ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ತೋಟೇಶ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಚಂದ್ರು, ನಗರಸಭೆ ಸದಸ್ಯ ಶಂಕರನಾರಾಯಣಗುಪ್ತ, ಮಂಜುನಾಥ್ ಮತ್ತಿತರರಿದ್ದರು.