ಮತದಾನ ನಾಗರಿಕನ ಹಕ್ಕು, ಕರ್ತವ್ಯ: ಎಚ್.ಷಡಕ್ಷರಯ್ಯ

| Published : Apr 04 2024, 01:04 AM IST

ಮತದಾನ ನಾಗರಿಕನ ಹಕ್ಕು, ಕರ್ತವ್ಯ: ಎಚ್.ಷಡಕ್ಷರಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಸಮರ್ಥ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಬೇಕು. ಮತದಾನದ ಬಗ್ಗೆ ತಾತ್ಸಾರ ಬೇಡ. ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡಬೇಕು.

ಸಂಡೂರು:

ತಾಲೂಕಿನ ದರೋಜಿ ಗ್ರಾಪಂ ವ್ಯಾಪ್ತಿಯ ಹೊಸ ಮಾದಾಪುರ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೈಗೊಳ್ಳಲಾಗಿರುವ ನಾಲಾ ಹೂಲೆತ್ತುವ ಕಾಮಗಾರಿ ಕೆಲಸದ ಸ್ಥಳದಲ್ಲಿ ಬುಧವಾರ ಮತದಾನ ಜಾಗೃತಿ ಕಾರ್ಯಕ್ರಮ ಮ್ಮಿಕೊಳ್ಳಲಾಯಿತು.

ಮತದಾನದ ಮಹತ್ವ ಕುರಿತು ಮಾತನಾಡಿದ ತಾಲೂಕು ಪಂಚಾಯತ್‌ ಇಒ ಎಚ್. ಷಡಕ್ಷರಯ್ಯ, ಮತದಾನ ಪ್ರತಿಯೊಬ್ಬ ನಾಗರಿಕರ ಹಕ್ಕು ಹಾಗೂ ಕರ್ತವ್ಯವೂ ಆಗಿದೆ. ೧೮ ವರ್ಷ ತುಂಬಿದ ಪ್ರತಿಯೊಬ್ಬರು ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಬೇಕು. ಸದೃಢ ರಾಷ್ಟ್ರ ನಿರ್ಮಾಣ ಹಾಗೂ ಪ್ರಜಾಪ್ರಭುತ್ವಕ್ಕಾಗಿ ಪ್ರತಿಯೊಬ್ಬರು ಮತದಾನ ಮಾಡಿ, ಸಮರ್ಥ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಬೇಕು. ಮತದಾನದ ಬಗ್ಗೆ ತಾತ್ಸಾರ ಬೇಡ. ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಹೇಳಿದರಲ್ಲದೆ, ಕೂಲಿ ಕಾರ್ಮಿಕರಿಗೆ ಮತದಾನದ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.

ಇದೇ ಸಂದರ್ಭದಲ್ಲಿ ಕಾರ್ಯನಿರ್ವಹಣಾಧಿಕಾರಿಗಳು ಮೇಟಿಗಳಿಗೆ ಜಾಬ್ ಕಾರ್ಡ್‌ಗಳನ್ನು ನಿಯಮಿತವಾಗಿ ಅಪ್ಡೇಟ್ ಮಾಡುವುದು, ಜಾಬ್ ಕಾರ್ಡ್ ವಿಭಜನೆ, ನರೇಗಾ ಅಧಿಸೂಚಿತ ಕೂಲಿ ಮೊತ್ತ ಪಡೆಯಲು ನಿರ್ವಹಿಸಬೇಕಾದ ಕೆಲಸ ಹಾಗೂ ಕೆಲಸದ ಸ್ಥಳದಲ್ಲಿನ ಸೌಲಭ್ಯಗಳ ಕುರಿತು ವಿವರಿಸಿದರು.

ಈ ಸಂದರ್ಭದಲ್ಲಿ ನರೇಗಾ ಯೋಜನೆಯ ಸಹಾಯಕ ನಿರ್ದೇಶಕರಾದ ರೇಣುಕಸ್ವಾಮಿ, ಪಿಡಿಒ, ಟಿಐಇಸಿ, ಟಿಎ ಹಾಗೂ ಗ್ರಾಮ ಪಂಚಾಯ್ತಿ ಸಿಬ್ಬಂದಿ ಉಪಸ್ಥಿತರಿದ್ದರು.