ಬಿರುಸಿನ ಮಳೆಗೆ ತೊಗರಿ ಫಸಲು ನೀರು ಪಾಲು

| Published : Aug 21 2024, 12:36 AM IST

ಸಾರಾಂಶ

ಅಫಜಲ್ಪುರ, ಕಲಬುರಗಿ, ಆಳಂದ,, ಸೇಡಂ ಹಾಗೂ ಚಿತ್ತಾಪುರ ತಾಲೂಕಿನ ಆಯ್ದ ಹೋಬಳಿಗಳಲ್ಲಿ ಸೋಮವಾರ ರಾತ್ರಿ 2 ಗಂಟೆ ಕಾಲ ಸತತ ಸುರಿದ ಬಿರುಸಿನ ಮಳೆಗೆ ಆಯಾ ಪ್ರದೇಶದಲ್ಲಿನ ಹತ್ತಾರು ಹಳ್ಳಿಗಳ ವ್ಯಾಪ್ತಿಯ ನೂರಾರು ಎಕರೆಯಲ್ಲಿ ಬೆಳೆದು ನಿಂತು ನಳನಲಿಸುತ್ತಿದ್ದ ತೊಗರಿ ಫಸಲು, ಹೆಸರು, ಉದ್ದು, ಹತ್ತಿ, ಮೆಕ್ಕೆಜೋಳ, ಸೂರ್ಯಕಾಂತಿ ಬೆಳೆಗಳು ಮಳೆ ನೀರು ಪಾಲಾಗಿದೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಜಿಲ್ಲೆಯ ಅಫಜಲ್ಪುರ, ಕಲಬುರಗಿ, ಆಳಂದ,, ಸೇಡಂ ಹಾಗೂ ಚಿತ್ತಾಪುರ ತಾಲೂಕಿನ ಆಯ್ದ ಹೋಬಳಿಗಳಲ್ಲಿ ಸೋಮವಾರ ರಾತ್ರಿ 2 ಗಂಟೆ ಕಾಲ ಸತತ ಸುರಿದ ಬಿರುಸಿನ ಮಳೆಗೆ ಆಯಾ ಪ್ರದೇಶದಲ್ಲಿನ ಹತ್ತಾರು ಹಳ್ಳಿಗಳ ವ್ಯಾಪ್ತಿಯ ನೂರಾರು ಎಕರೆಯಲ್ಲಿ ಬೆಳೆದು ನಿಂತು ನಳನಲಿಸುತ್ತಿದ್ದ ತೊಗರಿ ಫಸಲು, ಹೆಸರು, ಉದ್ದು, ಹತ್ತಿ, ಮೆಕ್ಕೆಜೋಳ, ಸೂರ್ಯಕಾಂತಿ ಬೆಳೆಗಳು ಮಳೆ ನೀರು ಪಾಲಾಗಿದೆ.

ಮೂಲಗಳ ಪ್ರಕಾರ ಅಫಲ್ಪುರ ತಾಲೂಕಿನ ಈ ಹಳ್ಳಿಗಳಲ್ಲಿ ಒಂದೇ ದಿನ 2 ಗಂಟೆಯೊಳಗೆ 53 ಮಿಮಿ ಮಳೆ ಸುರಿದಿದೆ. ಅದರಲ್ಲೂ ಕರಜಗಿ ಹೋಬಳಿಯಲ್ಲಿ ಸುರಿದ ಬಿರುಸಿನ ಮಳೆಗೆ ರೈತರು ಬೆಳೆ ಕಳೆದುಕಂಡು ಕಂಗಾಲಾಗಿದ್ದಾರೆ.

ಇಲ್ಲೆಲ್ಲಾ ಮಳೆ ನೀರಿಗೆ ಹೊಲಗದ್ದೆಗಳು ಕೆರೆಯಂತಾಗಿವೆ. ತೊಗರಿ ಫಸಲು ಮಳೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ, ಹಲವು ಜಮೀನುಗಳಲ್ಲಿ ಬೆಳಂದು ನಿಂತಿದ್ದ ತೊಗರಿ ಫಸಲು ಸಂಪೂರ್ಣ ಮಣ್ಣು ಮುಚ್ಚಿಕಂಡು ಹಾಳಾಗಿದೆ.

ತೊಗರಿ, ಹೆಸರು, ಉದ್ದು ಬಿತ್ತಿದ್ದ ಹೊಲಗಳಲ್ಲಿ 3ರಿಂದ 4 ಅಡಿ ನೀರು ಮಡುಗಟ್ಟಿದೆ. ರಾಮ ನಗರದ ಅನೇಕ ರೈತರ ಹೊಲಗಳಲ್ಲಿ ಮಳೆ ನೀರು ಭಾರಿ ಪ್ರಮಣಲ್ಲಿ ಶೇಖರೊಗಂಡಿದ್ದು ರೈತರೆಲ್ಲರೂ ಮೋಟಾರು ಬಳಸಿ ಮಳೆ ನೀರನ್ನು ಹೊಲದಿಂದ ಹೊರಹಾಕುವತ್ತ ಹರಸಾಹಸಕ್ಕಿಳಿದಿದ್ದಾರೆ.

2 ವಾರ ಮಳೆಯೇ ಬಂದಿರಲಿಲ್ಲ. ಇದರಿಂದ ರೈತರು ಅದ್ಲೆಲಿ ತೊಗರಿಗೆ ಈ ವಾತಾವರಣ ಮಾರಕವಾಗುವುದೋ ಎಂದು ಕಂಲಾಗಾಗಿದ್ದರು. ಹೀಗೆ ರೈತರು ಮರುಗುತ್ತಿದ್ದಾಗಲೇ ಸುರಿದಿರುವ ಮಾಯದಂತಾ ಮಲೆ ಸುರಿದು , ನೀರಿನ ರಭಸಕ್ಕೆ ತೊಗರಿ ಹೊಲಗದ್ದೆಗಳು, ಹೊಲದ ಬದುವು, ಜಮೀನಿನ ಅನೇಕ ಮರ ಗಿಡಗಳು ಕೂಡ ಕೊಚ್ಚಿಕೊಂಡು ಹೋಗಿವೆ.

ಸೋಮವಾರ ರಾತ್ರಿ 1 ಗಂಟೆಯಲ್ಲೇ ಸುರಿಯಿತು ಭಾರಿ ಮಳೆ:

ಕಲಬುರಗಿ ಹವಾಮಾನ ಇಲಾಖೆ ಹಾಗೂ ಕೃಷಿ ಇಲಾಖೆ ಮೂಲಗಳ ಪ್ರಕಾರ, ಸೇಡಂ, ಮುಧೋಳ ಕೋಡ್ಲಾದಲ್ಲಿ ಸರಾಸರಿ 41 ಮಿಮೀ, ಕಮಲಾಪುರದಲ್ಲಿ 18 ಮಿಮೀ, ಕಲಬುರಗಿ ತಾಲೂಕಿನ ಸಾವಳಗಿಯಲ್ಲಿ 1 ಗಂಟೆಯಲ್ಲೇ 67 ಮಿಮೀ, ಕೋಡ್ಲಿಯಲ್ಲಿ 18 ಮಿಮೀ, ಚಿತ್ತಾಪುರದ ನಾಲವಾರದಲ್ಲಿ 40 ಮಿಮೀ, ಅಫಜಲ್ಪುರ ತಾಲೂಕಿನ ಕರಜಗಿ ಹೋಬಳಿ ವ್ಯಾಪ್ತಿಯಲ್ಲಿ 54 ಮಿಮೀ, ಆತನೂರ್‌, ಗೊಬ್ಬೂರ ಹೋಬಳಿಯಲ್ಲಿ 30 ಮಿಮೀ , ಆಳಂದದ ನಿಂಬರ್ಗಾ, ಆಳಂದದಲ್ಲಿ 40 ಮಿಮೀ, ಚಿಂಚೋಳಿಯ ಐನಾಪೂರ, ನಿಡಗುಂದಾದಲ್ಲಿ ಸರಾಸರಿ 30 ಮಿಮೀ ಮಳೆ ಸೋಮವಾರ ರಾತ್ರಿ 1 ಗಂಟೆಯಲ್ಲೇ ಸುರಿದಿದೆ.

ಸೇಡಂ, ಕಮಲಾಪುರ, ಚಿತ್ತಾಪುರ ತಾಲೂಕಿನ ಹಲವು ಹೋಬಳಿಗಳಲ್ಲಿ ಸುರಿದಬಿರುಸಿನ ಮಳೆಗೆ ತಗ್ಗು ಪ್ರದೇಶದಲ್ಲಿರುವ ಹೊಲಗದ್ದೆಗಳಲ್ಲಿನ ತೊಗರಿ, ಹೆಸರು, ಉದ್ದು ಹಾಳಾಗಿವೆ.

ಇನ್ನೇನು ಕಾಯಿ ಕಟ್ಟಿದೆ. ತುಸು ಬಿಸಿಲು ಬಿದ್ರೆ ಕಡಿಯೋಣ ಎಂದು ರೈತರು ಹೆಸರು ರಾಶಿಗೆ ಮುಂದಾಗಿದ್ದರು. ಬೆಳೆಯೂ ತುಂಬಾ ವೈನಾಗಿತ್ತು. ಆದರೆ ಅದೆಲ್ಲಿಂದಲೋ ಬಂದ ಮಗಿ ಮಲೆ 1 ಗಂಟೆಯಲ್ಲಿಯೇ ರೈತರ ಕನಸುಗಳನ್ನು ನುಚ್ಚುನೂರು ಮಾಡಿದೆ.

ಭೀಮಾ ತೀರದಲ್ಲಿ ಡಬ್ಬಲ್‌ ಕಂಟಕ:

ಅಫಜಲ್ಪುರ ತಾಲೂಕಿನ ಭೀಮಾ ತೀರ ಮಣ್ಣೂರ, ಕುಡಿಗನೂರ್‌ ಗ್ರಾಮಗಳಿರುವ ಕರಜಗಿ ಹೋಬಳಿ ರೈತರ ಪಾಲಿಗೆ ಡಬ್ಬಲ್‌ ಕಂಟಕ ಕಾಡಿದೆ. ಮೊದಲೇ ಭೀಮಾ ನದಿಗೆ ನೆರೆ ಬಂದು ಭಾರಿ ಫಸಲು ಹಾಳಾಗಿತ್ತು. ಇದೀಗ 1 ಗಂಟೆಯಲ್ಲೇ ಸಿಕ್ಕಾಪಟ್ಟೆ ಮಳೆ ಸುರಿದು ರೈತರೆಲ್ಲರೂ ಹೌಹಾರುವಂತಾಗಿದೆ.

ಮಣಣೂರಲ್ಲಿ ರೈತರು ಮೊಲಖಾಲುವರೆಗೂ ಬೆಳೆದು ನಳನಳಿಸುತ್ತಿದ್ದ ತೊಗರಿ ಫಸಲು ಮಳೆ ನೀರಿನಿಂದಾಗಿ ಮಣ್ಣಲ್ಲಿ ಕೊಚ್ಚಿ ಹೂತು ಹೋಗರೋದು ಕಂಡು ಕಣ್ಣೀರು ಹಾಕುತ್ತಿದ್ದಾರೆ. ಈ ಬಾರಿ ತೊಗರಿ ಭಾರಿ ಫಸಲು ಬಂದಿತ್ತು. ಕಾಲಕಾಲಕ್ಕೆ ಮಳೆಯೂ ಸುರಿದಿತ್ತು. ಇದೇ ಮಳಿ ತುಸು ನಿಧಾನಕ್ಕೆ ಬಂದು ಹೋಗಿದ್ರ ನಮ್ಮ ಭಾಗ್ಯದ ಬಾಗಿಲು ತೆರೆಯುತ್ತಿತ್ತು. ಇದೀಗ ಈ ಮಗಿ (ಮಘ) ಮಳೆ ನಮ್ಮನ್ನ ಮತ್ತ ಸಂಕಷ್ಟಕ್ಕೆ ತಲ್ಳಿದೆ ಎಂದು ಮಣ್ಣೂರಿನ ರೈತರು ಗೋಳಾಡುತ್ತಿದ್ದಾರೆ.