ಒಳ್ಳೆಯ ಸಮಾಜವನ್ನು ನಿರ್ಮಿಸುವ ಜವಾಬ್ದಾರಿ ಯಾರೋ ಹೊರಗಿನವರ ಮೇಲೆ ಹಾಕಲು ಸಾಧ್ಯವಿಲ್ಲ. ನಾವು ಪ್ರತಿಯೊಬ್ಬರೂ ನಮ್ಮ ನಡೆ-ನುಡಿಗಳ ಮೂಲಕ ಮಾದರಿಗಳಾಗಬೇಕು. ಆಗ ಮಾತ್ರ ಮೌಲ್ಯಾಧಾರಿತ ಹಾಗೂ ಮಾನವೀಯ ಸಮಾಜ ನಿರ್ಮಾಣ ಸಾಧ್ಯ ಎಂದು ಅವರು ಹೇಳಿದರು. ಶರಣ ಸಂಪ್ರದಾಯದ ಅರ್ಥವನ್ನು ವಿವರಿಸಿದ ಚೇತನ್ ಅಹಿಂಸಾ, ಶರಣ ಎಂದರೆ ಕೇವಲ ಒಂದು ಸಮುದಾಯದಲ್ಲಿ ಹುಟ್ಟಿದರೆ ಆಗುವುದಿಲ್ಲ. ಶರಣತ್ವ ಎನ್ನುವುದು ತತ್ವ, ಸಿದ್ಧಾಂತಗಳನ್ನು ಅಳವಡಿಸಿಕೊಂಡು, ಅವುಗಳನ್ನು ಜೀವನದಲ್ಲಿ ಅನುಸರಿಸಿಕೊಂಡು, ಸಮಾಜದ ಹಿತಕ್ಕಾಗಿ ಅವನ್ನು ಬೆಳೆಸಿಕೊಂಡು ಹೋದಾಗ ಮಾತ್ರ ಸಾಧ್ಯ ಎಂದು ಸ್ಪಷ್ಟಪಡಿಸಿದರು.

ಅರಸೀಕೆರೆ: ತಾಲೂಕಿನ ಮಾಡಾಳು ನಿರಂಜನ ಪೀಠದಲ್ಲಿ ಲಿಂಗೈಕ್ಯ ಶ್ರೀ ಚಂದ್ರಶೇಖರ ಮಹಾಸ್ವಾಮೀಜಿಗಳ 19ನೇ ಪುಣ್ಯಸ್ಮರಣೋತ್ಸವ ಹಾಗೂ 26ನೇ ಅರಿವಿನ ಜಾಗೃತಿ ಕಾರ್ಯಕ್ರಮದ ಅಂಗವಾಗಿ ನಡೆದ ಸಮಾರಂಭದಲ್ಲಿ ಸಮಾಜ ಸೇವಕರು ಹಾಗೂ ಚಲನಚಿತ್ರ ನಟರಾದ ಚೇತನ್ ಅಹಿಂಸಾ ಮಾತನಾಡಿ, ಉತ್ತಮ ಸಮಾಜವನ್ನು ಕಟ್ಟಬೇಕೆಂದರೆ ಮೊದಲು ನಾವು ಸ್ವತಃ ಮಾದರಿಗಳಾಗಿ ನಿಲ್ಲಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ಒಳ್ಳೆಯ ಸಮಾಜವನ್ನು ನಿರ್ಮಿಸುವ ಜವಾಬ್ದಾರಿ ಯಾರೋ ಹೊರಗಿನವರ ಮೇಲೆ ಹಾಕಲು ಸಾಧ್ಯವಿಲ್ಲ. ನಾವು ಪ್ರತಿಯೊಬ್ಬರೂ ನಮ್ಮ ನಡೆ-ನುಡಿಗಳ ಮೂಲಕ ಮಾದರಿಗಳಾಗಬೇಕು. ಆಗ ಮಾತ್ರ ಮೌಲ್ಯಾಧಾರಿತ ಹಾಗೂ ಮಾನವೀಯ ಸಮಾಜ ನಿರ್ಮಾಣ ಸಾಧ್ಯ ಎಂದು ಅವರು ಹೇಳಿದರು. ಶರಣ ಸಂಪ್ರದಾಯದ ಅರ್ಥವನ್ನು ವಿವರಿಸಿದ ಚೇತನ್ ಅಹಿಂಸಾ, ಶರಣ ಎಂದರೆ ಕೇವಲ ಒಂದು ಸಮುದಾಯದಲ್ಲಿ ಹುಟ್ಟಿದರೆ ಆಗುವುದಿಲ್ಲ. ಶರಣತ್ವ ಎನ್ನುವುದು ತತ್ವ, ಸಿದ್ಧಾಂತಗಳನ್ನು ಅಳವಡಿಸಿಕೊಂಡು, ಅವುಗಳನ್ನು ಜೀವನದಲ್ಲಿ ಅನುಸರಿಸಿಕೊಂಡು, ಸಮಾಜದ ಹಿತಕ್ಕಾಗಿ ಅವನ್ನು ಬೆಳೆಸಿಕೊಂಡು ಹೋದಾಗ ಮಾತ್ರ ಸಾಧ್ಯ ಎಂದು ಸ್ಪಷ್ಟಪಡಿಸಿದರು.ಹುಟ್ಟು ನಮ್ಮ ಆಯ್ಕೆಯಲ್ಲ, ಆದರೆ ಹುಟ್ಟಿದ ನಂತರ ಸಮಾಜಕ್ಕೆ ನಾವು ನೀಡುವ ಸಂದೇಶ, ನಾವು ಪಾಲಿಸುವ ತತ್ವಗಳು ಮತ್ತು ಮೌಲ್ಯಗಳೇ ನಮ್ಮ ವ್ಯಕ್ತಿತ್ವವನ್ನು ನಿರ್ಧರಿಸುತ್ತವೆ. ಈ ಅಂಶಗಳಲ್ಲಿ ಜಾಗೃತರಾಗಿದ್ದಾಗ ಮಾತ್ರ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಸಾಧ್ಯ ಎಂದು ಹೇಳಿದರು. ಬಸವಣ್ಣನವರ 12ನೇ ಶತಮಾನದ ತತ್ವಗಳು ಇಂದಿಗೂ ಪ್ರಸ್ತುತವಾಗಿದ್ದು, ಸಮಾನತೆ, ಸಾಮಾಜಿಕ ನ್ಯಾಯ ಹಾಗೂ ಮಾನವ ಗೌರವದ ಮೌಲ್ಯಗಳು ನಮ್ಮ ಸಂವಿಧಾನದಲ್ಲಿಯೂ ಅಡಕವಾಗಿವೆ ಎಂದು ಅವರು ಹೇಳಿದರು. ಸಮ ಸಮಾಜ ಎಂದರೆ ಕೇವಲ ಮಾತಲ್ಲ. ಇತಿಹಾಸದಲ್ಲಿ ನಡೆದ ಅನ್ಯಾಯಗಳನ್ನು ಗುರುತಿಸಿ, ಕೆಳಮಟ್ಟದಲ್ಲಿರುವವರನ್ನು ಮೇಲಕ್ಕೆತ್ತುವ ಪ್ರಯತ್ನ ಮಾಡಿದಾಗ ಮಾತ್ರ ನ್ಯಾಯಯುತ ಸಮಾಜ ನಿರ್ಮಾಣವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ಸಮಾಜದ ಅಭಿವೃದ್ಧಿಗಾಗಿ ಬಸವಣ್ಣ, ಬುದ್ಧ ಮತ್ತು ಡಾ. ಬಿ. ಆರ್‌. ಅಂಬೇಡ್ಕರ್ ಅವರ ತತ್ವಗಳನ್ನು ಅಳವಡಿಸಿಕೊಳ್ಳುವುದು ಅತ್ಯಗತ್ಯವಾಗಿದೆ. ವಿಶೇಷವಾಗಿ ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಂಡು ಬದುಕಿದಾಗ ಮಾತ್ರ ಅಂಧನಂಬಿಕೆಗಳಿಂದ ಮುಕ್ತವಾದ, ನೇರ ಮತ್ತು ನ್ಯಾಯಪಾಲಿತ ಸಮಾಜ ರೂಪುಗೊಳ್ಳುತ್ತದೆ ಎಂದು ಹೇಳಿದರು.ಇಂದಿನ ಪೀಳಿಗೆಯ ಯುವಕರು ವೈಜ್ಞಾನಿಕ ಚಿಂತನೆಗಳನ್ನು ಅರಿತುಕೊಂಡು, ತರ್ಕಬದ್ಧವಾಗಿ ಬದುಕುವ ಮನೋಭಾವ ಬೆಳೆಸಿಕೊಳ್ಳಬೇಕು. ಆಗ ಮಾತ್ರ ಸಮಾಜದಲ್ಲಿ ನೈತಿಕತೆ, ಸಮಾನತೆ ಮತ್ತು ಮಾನವೀಯ ಮೌಲ್ಯಗಳು ಬಲಪಡುತ್ತವೆ ಎಂದು ಚೇತನ್ ಅಹಿಂಸಾ ಜನತೆಗೆ ಸಂದೇಶ ನೀಡಿದರು.