ಬೆನಮನಹಳ್ಳಿ- ಕುಂತೂರು ನಿಟ್ಟೂರು ಮಾರ್ಗವಾಗಿ ಸೇರುವ 4 ಕಿ.ಮೀ ರಿಂದ 5.50 ಕಿ.ಮೀ ರಸ್ತೆ ಅಭಿವೃದ್ಧಿಗೆ 1.70 ಕೋಟಿ ರು. ವೆಚ್ಚ ಮಾಡಲಾಗುತ್ತಿದೆ. ಇದೇ ಮಾರ್ಗದ 3 ಕಿ.ಮೀ ರಿಂದ 4 ಕಿ.ಮೀ ರಸ್ತೆ ಅಭಿವೃದ್ಧಿಗೆ 1 ಕೋಟಿ ರು. ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ.

ಹಲಗೂರು:

ಹೋಬಳಿಯ ಹಲವು ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ಗುದ್ದಲಿ ಪೂಜೆ ನೆರವೇರಿಸಿದರು.

ಸಮೀಪದ ನಿಟ್ಟೂರು ಹಲಸಹಳ್ಳಿ, ನಿ.ಹೊಸದೊಡ್ಡಿ, ಧನಗೂರು, ಹುಲ್ಲಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಅಂದಾಜು 3.15 ಕೋಟಿ ರು. ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಶಾಸಕರು, ಬೆನಮನಹಳ್ಳಿ- ಕುಂತೂರು ನಿಟ್ಟೂರು ಮಾರ್ಗವಾಗಿ ಸೇರುವ 4 ಕಿ.ಮೀ ರಿಂದ 5.50 ಕಿ.ಮೀ ರಸ್ತೆ ಅಭಿವೃದ್ಧಿಗೆ 1.70 ಕೋಟಿ ರು. ವೆಚ್ಚ ಮಾಡಲಾಗುತ್ತಿದೆ ಎಂದರು.

ಇದೇ ಮಾರ್ಗದ 3 ಕಿ.ಮೀ ರಿಂದ 4 ಕಿ.ಮೀ ರಸ್ತೆ ಅಭಿವೃದ್ಧಿಗೆ 1 ಕೋಟಿ ರು. ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ. ಧನಗೂರು ಕೋಡಿಯಿಂದ ಧನಗೂರು ಕುರಿ ಫಾರಂವರೆಗೆ ರಸ್ತೆ ಅಭಿವೃದ್ಧಿಗೆ 15 ಲಕ್ಷ ರು., ಧನಗೂರು ಗ್ರಾಮದ ಪ.ಜಾ ಕಾಲೋನಿಯಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣಕ್ಕೆ ಅಂದಾಜು 10 ಲಕ್ಷ ರು. ವೆಚ್ಚ ಮಾಡಲಾಗುತ್ತಿದೆ ಎಂದು ವಿವರಿಸಿದರು.

ಇದೇ ರೀತಿ ಹುಲ್ಲಹಳ್ಳಿ ಹಾಗೂ ಕೋಡಿಪುರ ಗ್ರಾಮಗಳ ಸರ್ವೇ ನಂ. 109, 110, 111, 112, 119, 120, 121, 122 ರ ಜಮೀನುಗಳಿಗೆ ಅಡ್ಡ ರಸ್ತೆಯಿಂದ ಚನ್ನಿಪುರ ಮೈನರ್ ಚಾನಲ್ ರಸ್ತೆವರೆಗೆ ಮೆಟ್ಲಿಂಗ್ ಜಲ್ಲಿ ರಸ್ತೆ ಅಗಲೀಕರಣ ಕಾಮಗಾರಿಗೆ 20 ಲಕ್ಷ ರು. ವೆಚ್ಚದಲ್ಲಿ ಕಾರ್ಯಾರಂಭವಾಗಿದೆ. ಒಟ್ಟಾರೆ 3.15 ಕೋಟಿ ರು. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದ್ದು, ಮಳವಳ್ಳಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.

ಈ ವೇಳೆ ನಿಟ್ಟೂರು ಗ್ರಾಪಂ ಅಧ್ಯಕ್ಷೆ ಶಿವಮ್ಮ ಚಿಕ್ಕಸಿದ್ದಯ್ಯ, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ನಟೇಶ್, ಲೋಕೋಪಯೋಗಿ ಇಲಾಖೆ ಎಇಇ ಸೋಮಶೇಖರ್, ಕುಂತೂರು ಗೋಪಾಲ್, ಪದ್ಮನಾಬ್, ಶ್ರೀನಿವಾಸಚಾರಿ, ಮರಿಸ್ವಾಮಿ, ಶಿವಣ್ಣ ಎಚ್.ಎಸ್., ತಿಮ್ಮರಾಜು, ಸರ್ವೋತ್ತಮ್, ವೆಂಕಟರಾಮು, ಶಿವನಂಜು, ಸರಗೂರು ಜಯಣ್ಣ, ನಾಗರಾಜು, ಚಂದ್ರಕುಮಾರ್, ಶಿವಣ್ಣ, ದಿವ್ಯಕುಮಾರ್, ಜಮೀಲ್, ಸದ್ರುಲ್, ಜೀವನ್ ಕುಮಾರ್, ಭೀಮರಾಜು, ಗುತ್ತಿಗೆದಾರ ಚಂದ್ರಶೇಖರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.