ಬೆಳಗಾವಿಯಲ್ಲಿ ಏರ್ಪಡಿಸಿದ್ದ ಜಾಂಬೂರೇಟ್ ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ಗಳಿಗೆ ಪಿಜಿಆರ್ ಸಿಂಧ್ಯಾ ಅವರು ರಾಷ್ಟ್ರಪತಿ ಪುರಸ್ಕಾರ ಪ್ರಶಸ್ತಿ ಪತ್ರವನ್ನು ನೀಡಿ ಅಭಿನಂದಿಸಿದರು.

ಶಿವಮೊಗ್ಗ: ಬೆಳಗಾವಿಯಲ್ಲಿ ಏರ್ಪಡಿಸಿದ್ದ ಜಾಂಬೂರೇಟ್ ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ಗಳಿಗೆ ಪಿಜಿಆರ್ ಸಿಂಧ್ಯಾ ಅವರು ರಾಷ್ಟ್ರಪತಿ ಪುರಸ್ಕಾರ ಪ್ರಶಸ್ತಿ ಪತ್ರವನ್ನು ನೀಡಿ ಅಭಿನಂದಿಸಿದರು.

ಮಲ್ನಾಡ್ ಓಪನ್ ಗ್ರೂಪ್ ವತಿಯಿಂದ ಲೀಡರ್ ಟ್ರೈನರ್ ಎ.ವಿ.ರಾಜೇಶ್ ಅವರ ಮಾರ್ಗದರ್ಶನದಲ್ಲಿ ರೋವರ್ ವಿಭಾಗದ ಪೃಥ್ವಿ ಗಿರಿಮಾಜಿ, ರೇಣುಕಯ್ಯ, ಗೈಡ್ ವಿಭಾಗದಲ್ಲಿ ಸುಶ್ಮಿತಾ ರಾಷ್ಟ್ರಪತಿ ಪುರಸ್ಕಾರ ಪ್ರಶಸ್ತಿ ಪತ್ರ ಪಡೆದಿದ್ದಾರೆ. ಸಿಹಿಮೊಗೆ ಓಪನ್ ಗ್ರೂಪ್ ವತಿಯಿಂದ ಲೀಡರ್ ಟ್ರೈನರ್ ಗೈಡ್ ಕಾತ್ಯಾಯಿನಿ ಅವರ ಮಾರ್ಗದರ್ಶನದಲ್ಲಿ ಗೈಡ್ ಅಲ್ಮಾಜ್ ಮತ್ತು ಎ.ಸಿಂಚನಾ ಅವರು ಪ್ರಶಸ್ತಿ ಪತ್ರ ಪಡೆದಿದ್ದಾರೆ.

ಪ್ರಶಸ್ತಿ ಪತ್ರ ಪುರಸ್ಕೃತರಿಗೆ ಜಿಲ್ಲಾ ಸಂಸ್ಥೆ ವತಿಯಿಂದ ಅಭಿನಂದಿಸಲಾಯಿತು. ಸ್ಕೌಟ್ಸ್ ಮತ್ತು ಗೈಡ್ಸ್ ನ ಪ್ರತಿಷ್ಠಿತ ಉನ್ನತ ಪ್ರಶಸ್ತಿ ಪಡೆದ ಮಕ್ಕಳಿಗೆ ಸನ್ಮಾನಿಸಲಾಯಿತು. ಪ್ರಶಸ್ತಿ ಪತ್ರವು ರಾಷ್ಟ್ರಪತಿ ದ್ರೌಪದಿ ಮುರ್ಮು ಸಹಿ ಮಾಡಿರುತ್ತಾರೆ.

ಇದೇ ಸಂದರ್ಭದಲ್ಲಿ ನಾಯಕಿ ತರಬೇತಿ ಪಡೆದಿರುವ ಹೇಮಲತಾ ಅವರನ್ನು ಸನ್ಮಾನಿಸಲಾಯಿತು. ಪಿಜಿಆರ್ ಸಿಂಧ್ಯಾ ಅವರು ಶಿವಮೊಗ್ಗ ದಿನ ಉದ್ಘಾಟಿಸಿ ಜಿಲ್ಲೆಯ ಬಗ್ಗೆ ವಿಶೇಷ ಮೆಚ್ಚುಗೆ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ಕೇಂದ್ರ ಸ್ಥಾನಿಕ ಆಯುಕ್ತ ಜಿ.ವಿಜಯಕುಮಾರ್, ಆಯುಕ್ತ ಎಸ್.ಜಿ.ಆನಂದ್, ಪ್ರಧಾನ ಆಯುಕ್ತೆ ಶಕುಂತಲಾ ಚಂದ್ರಶೇಖರ್, ಗೈಡ್ ಆಯುಕ್ತೆ ಲಕ್ಷ್ಮೀ ಕೆ.ರವಿ, ಮಲ್ಲಿಕಾರ್ಜುನ ಕಾನೂರು, ಹೇಮಲತಾ, ಚೂಡಾಮಣಿ ಪವಾರ್, ಸುಮನ್ ಶೇಖರ್, ಕೆ.ರವಿ, ಶಿವಶಂಕರ್ ಮತ್ತಿತರರು ಇದ್ದರು.