ನದಿಗೆ ಹಾರಿ ಮಹಿಳೆ ಆತ್ಮಹತ್ಯೆ ಯತ್ನ: ಸ್ಥಳೀಯ ಯುವಕನಿಂದ ರಕ್ಷಣೆ

| Published : Dec 13 2024, 12:46 AM IST

ಸಾರಾಂಶ

ಪಾವಂಜೆಯ ಸೇತುವೆಯಲ್ಲಿ ಮಂಗಳೂರು ಕಡೆಗೆ ಹೋಗುವ ಸೇತುವೆಯಲ್ಲಿ ಮಹಿಳೆಯೊಬ್ಬ ಸೇತುವೆಯಿಂದ ಹಾರಲು ಯತ್ನಿಸುತ್ತಿದ್ದರು. ಈ ಸಂದರ್ಭ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಪಾವಂಜೆ ನಿವಾಸಿ ಪ್ರವೀಣ್‌ ಗಮನಿಸಿ ತನ್ನ ಸ್ನೇಹಿತರಿಗೆ ವಿಷಯ ತಿಳಿಸಿ ಅವರ ಸಹಾಯದಿಂದ ಮಹಿಳೆಯನ್ನು ರಕ್ಷಿಸುವ ಕಾರ್ಯ ಮಾಡಿದ್ದಾರೆ.

ಮೂಲ್ಕಿ: ಮುಕ್ಕ ಸಮೀಪದ ಪಾವಂಜೆ ಸೇತುವೆಯಲ್ಲಿ ಮಹಿಳೆಯೊಬ್ಬರು ನದಿಗೆ ಹಾರಲು ಯತ್ನಿಸುತ್ತಿದ್ದು ಸ್ಥಳೀಯ ಯುವಕನೊಬ್ಬನ ಸಮಯಪ್ರಜ್ಞೆಯಿಂದ ರಕ್ಷಿಸಲ್ಪಟ್ಟಿರುವ ಘಟನೆ ನಡೆದಿದೆ. ಪಾವಂಜೆಯ ಸೇತುವೆಯಲ್ಲಿ ಮಂಗಳೂರು ಕಡೆಗೆ ಹೋಗುವ ಸೇತುವೆಯಲ್ಲಿ ಮಹಿಳೆಯೊಬ್ಬ ಸೇತುವೆಯಿಂದ ಹಾರಲು ಯತ್ನಿಸುತ್ತಿದ್ದರು. ಈ ಸಂದರ್ಭ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಪಾವಂಜೆ ನಿವಾಸಿ ಪ್ರವೀಣ್‌ ಗಮನಿಸಿ ತನ್ನ ಸ್ನೇಹಿತರಿಗೆ ವಿಷಯ ತಿಳಿಸಿ ಅವರ ಸಹಾಯದಿಂದ ಮಹಿಳೆಯನ್ನು ರಕ್ಷಿಸುವ ಕಾರ್ಯ ಮಾಡಿದ್ದಾರೆ. ಮಹಿಳೆ ಕೃಷ್ಣಾಪುರ ನಿವಾಸಿಯಾಗಿದ್ದು ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಈ ಸಂದರ್ಭ ಸ್ವಲ್ಪಹೊತ್ತು ವಾಹನ ಸಂಚಾರ ಸ್ಥಗಿತಗೊಂಡಿದ್ದರಿಂದ ಟ್ರಾಫಿಕ್‌ ಜಾಮ್‌ ಆಗಿದ್ದು ಪೊಲೀಸರು ಸ್ಥಳಕ್ಕೆ ಆಗಮಿಸಿ ವಾಹನ ಸಂಚಾರ ಸುಗಮಗೊಳಿಸಿದರು.