ಸಾರಾಂಶ
ಸುಂಟಿಕೊಪ್ಪ 1ನೇ ವಿಭಾಗ ಹಾಗೂ 3ನೇ ವಿಭಾಗದಲ್ಲಿ ವಿದ್ಯುತ್ ಮಂದ ಬೆಳಕಿನ ಸಮಸ್ಯೆ ಎದುರಿಸುತ್ತಿದ್ದು ಇದೀಗ ಸಮಸ್ಯೆ ಪರಿಹಾರವಾಗಿದೆ. ಈ ಕುರಿತು ಗ್ರಾ.ಪಂ. ಪ್ರಮುಖರು ಚೆಸ್ಕಾಂಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಸುಂಟಿಕೊಪ್ಪ 1ನೇ ವಿಭಾಗ ಹಾಗೂ 3ನೇ ವಿಭಾಗದಲ್ಲಿ ವಿದ್ಯುತ್ ಮಂದ ಬೆಳಕಿನ ಸಮಸ್ಯೆ ಎದುರಿಸುತ್ತಿದ್ದು ಇದೀಗ ಸಮಸ್ಯೆ ಪರಿಹಾರವಾಗಿದೆ. ಈ ಕುರಿತು ಗ್ರಾ.ಪಂ. ಪ್ರಮುಖರು ಚೆಸ್ಕಾಂಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಈ ವಿಭಾಗದ ನಿವಾಸಿಗಳು ಗಂಭೀರ ಸಮಸ್ಯೆಯ ಬಗ್ಗೆ ಈ ಭಾಗದ ಸದಸ್ಯರು ಗಮನಕ್ಕೆ ತಂದ ಮೇರೆಗೆ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಚೆಸ್ಕಾಂ ಇಲಾಖೆಗೆ ನೂತನ ಟ್ರಾನ್ಸ್‌ಫಾರ್ಮರ್ ಅಳವಡಿಸುವಂತೆ ಮನವಿ ಪತ್ರ ಸಲ್ಲಿಸಲಾಗಿತ್ತು.
ಈ ವಿಭಾಗಗಳಿಗೆ ನೂತನ ಟ್ರಾನ್ಸ್‌ಫಾರ್ಮರ್ ಅಳವಡಿಸುವ ಮೂಲಕ ಸಮಸ್ಯೆ ಪರಿಹಾರಕ್ಕೆ ಮುಂದಾಗಿದ್ದು ಚೆಸ್ಕಾಂ ಇಲಾಖೆಯ ಅಧಿಕಾರಿಗಳ ಕಾರ್ಯವೈಖರಿಗೆ ಪಂಚಾಯಿತಿ ವತಿಯಿಂದ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.ಸುಂಟಿಕೊಪ್ಪ 1ನೇ ವಿಭಾಗದ ಗುಡ್ಡಪ್ಪ ರೈ, ಶಿವರಾಮ ರೈ ಬಡಾವಣೆ ಹಾಗೂ ಮಾಸ್ಟರ್ ಬಡಾವಣೆಯ ನಿವಾಸಿಗಳಿಗೆ ಮಂದಬೆಳಕಿನ ಸಮಸ್ಯೆ ಕಳೆದ ಹಲವು ತಿಂಗಳುಗಳಿಂದ, ಈ ಭಾಗದ ನಿವಾಸಿಗಳು ಸಂಜೆ ವೇಳೆ ಮಂದಬೆಳಕಿನ ಎದುರಿಸುತ್ತಿರುವುದನ್ನು ಗಮನಕ್ಕೆ ತಂದಿದ್ದರು.ಈ ಭಾಗದ ಸದಸ್ಯರು ಸಮಸ್ಯೆಯ ಗಂಭೀರತೆ ಬಗ್ಗೆ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿ ಸಭೆಯಲ್ಲಿ ನಿರ್ಣಯ ಕೈಗೊಂಡು ಪಂಚಾಯಿತಿ ವತಿಯಿಂದ ಚೆಸ್ಕಾಂ ಇಲಾಖೆಗೆ ಪತ್ರ ಬರೆದು ಸಮಸ್ಯೆ ಪರಿಹಾರಕ್ಕೆ ಕ್ರಮಕೈಗೊಳ್ಳುವಂತೆ ಮನವಿ ಮಾಡಿಕೊಂಡಿದ್ದರು.
ಚೆಸ್ಕಾಂ ಕಿರಿಯ ಅಭಿಯಂತರ ಲವಕುಮಾರ್ ಸ್ಥಳ ಪರಿಶೀಲನೆ ಮೇಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದ ಮೇರೆಗೆ ಇಲಾಖೆ ಸುಂಟಿಕೊಪ್ಪ 1ನೇ ವಿಭಾಗದ ಗುಡ್ಡಪ್ಪ ರೈ, ಶಿವರಾಮ ರೈ ಬಡಾವಣೆ 25 ಕಿ.ಲೋವ್ಯಾಟ್ಸ್ ಹಾಗೂ ಮಾಸ್ಟರ್ ಬಡಾವಣೆಗೆ 65 ಕಿ.ಲೋ ವ್ಯಾಟ್ಸ್ ಟ್ರಾನ್ಸ್‌ಫಾರ್ಮರ್ ಅಳವಡಿಸಿ ಸಮಸ್ಯೆ ಪರಿಹರಿಸಲಯಿತು.ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್.ಸುನಿಲ್‌ಕುಮಾರ್, ಸದಸ್ಯರಾದ ಪಿ.ಎಫ್.ಸಬಾಸ್ಟೀನ್, ಶಬ್ಬಿರ್ ಅವರು ಚೆಸ್ಕಾಂ ಇಲಾಖೆಯ ಅಧಿಕಾರಿ ಸಹಾಯಕ ಕಾರ್ಯಪಾಲಕ ಅಭಿಯಂತರ ಮಂಜುನಾಥ್ ಹಾಗೂ ಕಿರಿಯ ಅಭಿಯಂತರ ಲವಕುಮಾರ್ ಹಾಗೂ ಸಿಬ್ಬಂದಿ ಭಾಷ ಗುರು ಅವರ ಸೇವೆಯನ್ನು ಶ್ಲಾಘಿಸಿದರು.