ಮುಂಡರಗಿ: ಪಟ್ಟಣದಲ್ಲಿ ತೋಂಟದಾರ್ಯ ಮಠದಲ್ಲಿ ಆಷಾಢ ಮಾಸದ ಅಂಗವಾಗಿ ಎಡೆಯೂರು ತೋಂಟದ ಸಿದ್ಧಲಿಂಗೇಶ್ವರ ಚರಿತಾಮೃತ ಪ್ರವಚನ ಮಂಗಲೋತ್ಸವ ಪ್ರಯುಕ್ತ ಭಾನುವಾರ ಬೆಳಗ್ಗೆ ಪಲ್ಲಕ್ಕಿಯನ್ನು ಮಹಿಳೆಯರು ಹೊತ್ತು ಗಮನ ಸೆಳೆದರು.
ಬಸವಾದಿ ಪ್ರಮಥರ ವಚನದ ಕಟ್ಟುಗಳು ಹಾಗೂ ಎಡೆಯೂರು ಸಿದ್ಧಲಿಂಗೇಶ್ವರರ ಬೆಳ್ಳಿ ಮೂರ್ತಿಯ ಪಲ್ಲಕ್ಕಿಯನ್ನು ಶ್ರೀಮಠದ ನಿಜುಗುಣಪ್ರಭ ತೋಂಟದಾರ್ಯ ಸ್ವಾಮೀಜಿ ಅವರು ಮುಕ್ತಾಯಕ್ಕ ಬಳಗದ ಮಹಿಳೆಯರಿಗೆ ಹೊರಿಸಿ ಶ್ರೀಮಠದಲ್ಲಿ ಪ್ರದಕ್ಷಿಣೆ ಹಾಕಿಸಿದರು.ಕೊಟ್ರೇಶ ಅಂಗಡಿ, ಈಶಣ್ಣ ಬೆಟಗೇರಿ, ಸಿ.ಕೆ. ಗಣಪ್ಪನವರ, ಎಸ್.ಬಿ. ಗಿಂಡಿಮಠ, ಶಿವಯೋಗಿ ಗಡ್ಡದ, ಶರಣಪ್ಪ ಕುಬಸದ, ಅಶೋಕ ಹುಬ್ಬಳ್ಳಿ, ದೇವಪ್ಪ ರಾಮೇನಹಳ, ಸುರೇಶ ಬಣಗಾರ, ಶಿವಕುಮಾರ ಬೆಟಗೇರಿ, ವಿಶ್ವನಾಥ ಉಳ್ಳಾಗಡ್ಡಿ, ಡಾ. ನಿಂಗು ಸೊಲಗಿ, ವಿ.ಎಸ್. ಪಾಟೀಲ, ಸುರೇಶ ನಾಯಕ, ಗಿರೀಶಗೌಡ ಪಾಟೀಲ, ಅಶೋಕ ಅಣ್ಣಿಗೇರಿ, ಎಚ್. ವಿರೂಪಾಕ್ಷಗೌಡ, ಸುಕನ್ಯಾ ಕಬ್ಬೂರಮಠ, ಮಂಗಳಾ ಕರ್ಜಗಿ ಉಪಸ್ಥಿತರಿದ್ದರು. ಇಂದು ನೂತನ ವಿದ್ಯಾರ್ಥಿಗಳಿಗೆ ಸ್ವಾಗತ
ನರೇಗಲ್ಲ: ಪಟ್ಟಣದ ಅನ್ನದಾನ ವಿಜಯ ವಿದ್ಯಾಪ್ರಸಾರಕ ಸಮಿತಿಯ ಅನ್ನದಾನೇಶ್ವರ ಪದವಿಪೂರ್ವ ಮಹಾವಿದ್ಯಾಲಯದಲ್ಲಿ 2026- 27ನೇ ಸಾಲಿನ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ‘ಅಂತರಂಗ- 2026’ ಆ.10ರಂದು ಕಾಲೇಜು ಸಭಾಭವನದಲ್ಲಿ ನಡೆಯಲಿದೆ.ಅಂದು ಬೆಳಗ್ಗೆ 10.30ಕ್ಕೆ ನಡೆಯುವ ಕಾರ್ಯಕ್ರಮದ ಸಾನ್ನಿಧ್ಯವನ್ನು ಹಾಲಕೆರೆಯ ಮುಪ್ಪಿನ ಬಸವಲಿಂಗ ಸ್ವಾಮಿಗಳು ವಹಿಸಲಿದ್ದಾರೆ. ಶಾಸಕ ಹಾಗೂ ಸಂಸ್ಥೆಯ ಉಪಾಧ್ಯಕ್ಷ ಜಿ.ಎಸ್. ಪಾಟೀಲ ಉದ್ಘಾಟಿಸಲಿದ್ದಾರೆ. ಹಂಪಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಡಿ.ವಿ. ಪರಮಶಿವಮೂರ್ತಿ, ಡಿಡಿಪಿಯು ಸಿದ್ದಲಿಂಗ ಬಂಡು ಮಸನಾಯಕ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.ಸಮಿತಿಯ ಎಂ.ಜಿ. ಸೋಮನಕಟ್ಟಿ ಅಧ್ಯಕ್ಷತೆ ವಹಿಸುವರು. ರವೀಂದ್ರನಾಥ ದೊಡ್ಡಮೇಟಿ, ಡಾ. ಜಿ.ಕೆ. ಕಾಳೆ, ಬಸವರಾಜ ಕಳಕೊಣ್ಣವರ, ಎಂ.ಬಿ. ಪಾಟೀಲ ಹಾಗೂ ಮಲ್ಲಣ್ಣ ಶಿರೂರ ಸೇರಿದಂತೆ ಆಡಳಿತ ಮಂಡಳಿಯ ಪದಾಧಿಕಾರಿಗಳು ಉಪಸ್ಥಿತರಿರಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.