ಕನ್ನಡಪ್ರಭ ವಾರ್ತೆ ನಾಪೋಕ್ಲು
ಮಹಿಳೆಯರ ನಡುವೆ ಒಗ್ಗಟ್ಟು, ಆತ್ಮವಿಶ್ವಾಸ ಮತ್ತು ನಾಯಕತ್ವ ಬೆಳೆಯಲು ಮಹಿಳಾ ಒಕ್ಕೂಟ ಶಕ್ತಿಯುತ ವೇದಿಕೆ ಆಗಬೇಕು ಎಂದು ಕವಿ ಮತ್ತು ಸಾಹಿತಿ ಪೂಜಾರಿರ ಕೃಪಾ ದೇವರಾಜ್ ಹೇಳಿದರು.ಮೂರ್ನಾಡು ಗೌಡ ಮಹಿಳಾ ಒಕ್ಕೂಟ ವತಿಯಿಂದ ಮೂರ್ನಾಡು ಪ್ರಕೃತಿ ಕಾಂಪ್ಲೆಕ್ಸ್ ನಲ್ಲಿ ವಿಶ್ವ ಮಹಿಳಾ ದಿನಾಚರಣೆ ಮತ್ತು ಗೌಡ ಮಹಿಳಾ ಒಕ್ಕೂಟ ಮೂರ್ನಾಡು
ಉದ್ಘಾಟನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಇತಿಹಾಸ ನೋಡಿದರೆ ಮಹಿಳೆಯರು ಯಾವಾಗಲೂ ಸಮಾಜದ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಆದರೆ ಹಲವಾರು ಸಂದರ್ಭಗಳಲ್ಲಿ ಅವರ ಪ್ರತಿಭೆ ಹಾಗೂ ಸಾಮರ್ಥ್ಯಕ್ಕೆ ಸರಿಯಾದ ವೇದಿಕೆ ದೊರಕಿಲ್ಲ. ಅಂತಹ ಸಮಯದಲ್ಲಿ ಈ ಮಹಿಳಾ ಒಕ್ಕೂಟ ಮಹಿಳೆಯರಿಗೆ ಒಂದು ಹೊಸ ದಾರಿ ತೋರಿಸುವ ವೇದಿಕೆಯಾಗಲಿದೆ. ಈ ಒಕ್ಕೂಟದ ಮೂಲಕ ಮಹಿಳೆಯರು ಶಿಕ್ಷಣ, ಸಮಾಜಸೇವೆ, ಕ್ರೀಡೆ, ಸಂಸ್ಕೃತಿ ಹಾಗೂ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಪ್ರತಿಭೆಯನ್ನು ಹೊರಹಾಕಲು ಆಶಯ ಸಿಗಲಿದೆ ಎಂದು ಶುಭ ಹಾರೈಸಿದರು.
ಜೀವನದಲ್ಲಿ ಸಂತೋಷ, ಹರ್ಷ, ಆರೋಗ್ಯ ಮುಖ್ಯ:
ಮನೋರಂಜನೆ ಕ್ರೀಡೆಯನ್ನು ಉದ್ಘಾಟಿಸಿದ ಹಾಕತ್ತೂರ್ ಮುಖ್ಯ ಶಿಕ್ಷಕರಾದ ತೆಕ್ಕಡೆ ಕುಮಾರಸ್ವಾಮಿ ಅವರು ಮಾತನಾಡಿ, ಇಂದು ಮಹಿಳಾ ದಿನಾಚರಣೆಯ
ಅಂಗವಾಗಿ ನಡೆಯುತ್ತಿರುವ ಈ ಮನೋರಂಜನಾ ಕ್ರೀಡಾಕೂಟವನ್ನು ಉದ್ಘಾಟಿಸುವ ಅವಕಾಶ ನನಗೆ ದೊರೆತಿರುವುದು ತುಂಬಾ ಸಂತೋಷದ ಸಂಗತಿ. ಮಹಿಳೆಯರುದಿನನಿತ್ಯ ಮನೆಯ ಕೆಲಸ, ಕುಟುಂಬದ ಜವಾಬ್ದಾರಿ ಮತ್ತು ಸಮಾಜದ ಕರ್ತವ್ಯಗಳಲ್ಲಿ ತುಂಬಾ ನಿರತರಾಗಿರುತ್ತಾರೆ. ಆದರೆ ಜೀವನದಲ್ಲಿ ಸಂತೋಷ,
ಹರ್ಷ ಮತ್ತು ಆರೋಗ್ಯವೂ ಅಷ್ಟೇ ಮುಖ್ಯ. ಅದಕ್ಕಾಗಿ ಇಂತಹ ಮನೋರಂಜನಾ ಕ್ರೀಡೆಗಳು ನಮ್ಮ ಜೀವನಕ್ಕೆ ಹೊಸ ಉತ್ಸಾಹ ಮತ್ತು ಸಂತೋಷವನ್ನು ನೀಡುತ್ತವೆ. ಕ್ರೀಡೆಗಳು ಕೇವಲ ಗೆಲುವಿಗಾಗಿ ಅಲ್ಲ; ಒಗ್ಗಟ್ಟು, ಸ್ನೇಹ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ ಎಂದರು.ಮುಖ್ಯ ಭಾಷಣಕಾರರಾಗಿ ಮಾತನಾಡಿದ ರಾಜ್ಯ ಕೃಷಿ ಪ್ರಶಸ್ತಿ ಪುರಸ್ಕೃತರಾದ ಕಟ್ಟೆಮನೆ ಪ್ರೇಮ ಗಣೇಶ್ ಅವರು ಮಾತನಾಡಿ, ಇಂದು ಗೌಡ ಮಹಿಳಾ ಒಕ್ಕೂಟದ
ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ನನಗೆ ದೊರೆತಿರುವುದು ತುಂಬಾ ಸಂತೋಷ. ವಿಶೇಷವಾಗಿ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳೆಯರು ಒಗ್ಗಟ್ಟಾಗಿ ಸೇರಿರುವುದು ನೋಡಿದಾಗ ತುಂಬಾ ಹೆಮ್ಮೆ ಆಗುತ್ತದೆ. ನಾವು ಕೃಷಿ ಕ್ಷೇತ್ರದಲ್ಲಿ ನೋಡಿದರೆ, ಮಹಿಳೆಯರ ಪಾತ್ರ ಬಹಳ ಮಹತ್ವದ್ದಾಗಿದೆ. ಹೊಲದಲ್ಲಿ ಕೆಲಸ ಮಾಡುವುದು, ಮನೆ ನೋಡಿಕೊಳ್ಳುವುದು, ಮಕ್ಕಳನ್ನು ಬೆಳೆಸುವುದು – ಎಲ್ಲದಲ್ಲೂ ಮಹಿಳೆಯರು ಶ್ರಮಿಸುತ್ತಿದ್ದಾರೆ. ಆದರೆ ಹಲವಾರು ಬಾರಿ ಅವರ ಶ್ರಮಕ್ಕೆ ಸಿಗಬೇಕಾದ ಗೌರವ ಸಿಗುವುದಿಲ್ಲ. ಆದ್ದರಿಂದ ಇಂತಹ ಮಹಿಳಾ ಒಕ್ಕೂಟಗಳು ಮಹಿಳೆಯರಿಗೆ ಒಂದು ಶಕ್ತಿಯುತ ವೇದಿಕೆಯಾಗಿವೆ. ಇಲ್ಲಿ ಮಹಿಳೆಯರು ತಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳಬಹುದು, ಹೊಸ ಆಲೋಚನೆಗಳನ್ನು ಕಲಿಯಬಹುದು, ಮತ್ತು ತಮ್ಮ ಪ್ರತಿಭೆಯನ್ನು ತೋರಿಸಬಹುದು. ಕೃಷಿ ಕ್ಷೇತ್ರದಲ್ಲೂ ಇಂದು ಮಹಿಳೆಯರು ಹೊಸ ಸಾಧನೆಗಳನ್ನು ಮಾಡುತ್ತಿದ್ದಾರೆ. ತೋಟಗಾರಿಕೆ, ಹಾಲು ಉತ್ಪಾದನೆ, ಸಣ್ಣ ಉದ್ಯಮಗಳು, ಸ್ವಯಂ ಉದ್ಯೋಗ—ಇವುಗಳ ಮೂಲಕ ಮಹಿಳೆಯರು ಕುಟುಂಬದ ಆರ್ಥಿಕ ಶಕ್ತಿಯಾಗುತ್ತಿದ್ದಾರೆ ಎಂದು ಹೇಳಿದರು.ಸಂಘದ ಅಭಿವೃದ್ಧಿಗೆ ಕಾರಣಕರ್ತರಾದ ಮೆರ್ಕಜ್ಜೆ ಲೋಹಿತ್ ಸೋಮಯ್ಯ ಹಾಗೂ ಮೆರ್ಕಜ್ಜೆ ಕೃತಿಕಾ ಪ್ರಮೋದ್ ಅವರನ್ನು ಸನ್ಮಾನಿಸಲಾಯಿತು.
ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ:ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷರು ಆದ ಕಲ್ಲುಮುಟ್ಲು ಜಶ್ಮಿ ಚಿಂತು ವಹಿಸಿ ಮಾತನಾಡಿ, ಇಂದಿನ ಸಮಾಜ ದಲ್ಲಿ ಮಹಿಳೆಯ
ರ ಪಾತ್ರ ತುಂಬಾ ಮುಖ್ಯ. ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಸಾಧನೆ ಯಾವ ಕ್ಷೇತ್ರದಲ್ಲಿ ಮಾಡಬಹುದು. ಮಹಿಳಾ ಒಕ್ಕೂಟದಿಂದಮಹಿಳೆಯರ ಕಲಾ ಪ್ರತಿಭೆಗಳನ್ನು ಹೊರಹಾಕಲು ಒಳ್ಳೆ ವೇದಿಕೆ. ಮುಂದಿನ ದಿನಗಳಲ್ಲಿ ಒಳ್ಳೆ ಒಳ್ಳೆ ಕೆಲಸಗಳನ್ನು ಮಾಡಿ ಸಮಾಜದಲ್ಲಿ ಒಕ್ಕೂಟದ ಸಹಾಯದಿಂದ ಅಭಿವೃದ್ಧಿ
ಹೊಂದಲು ಸಾಧ್ಯ ಎಂದು ಹೇಳಿದರು.ತೆಕ್ಕಡೆ ಭವ್ಯ ಮಹಿಳಾ ದಿನಾಚರಣೆಯ ಬಗ್ಗೆ ಮಾತನಾಡಿದರು. ಈ ಸಂದರ್ಭ ಮೂರ್ನಾಡ್ ಗೌಡ ಸಮಾಜದ ಅಧ್ಯಕ್ಷರು ಆದ ಪಾಣತ್ತಲೆ ಹರೀಶ್, ಕಾರ್ಯದರ್ಶಿ
ಮೆರ್ಕಜ್ಜೆ ಲೋಹಿತ್ ಸೋಮಯ್ಯ ಸೇರಿದಂತೆ ಸಮಾಜ ಬಾಂಧವರು ಉಪಸ್ಥಿತರಿದ್ದರು.ತೆಕ್ಕಡೆ ಆಶಾ, ಕಲ್ಲುಮುಟ್ಲು ಲತಾ, ಜಯಮಾಲಾ ಪ್ರಾರ್ಥನೆ ನೆರವೇರಿಸಿದರು. ಮುಕ್ಕಾಟಿ ಚುಷ್ಮಾ ಸ್ವಾಗತಿಸಿದರು, ಅಂಚೆ ಮನೆ ದಮಯಂತಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಬೈಲೋಳಿ ಮೇನಕಾ ಅವರು ವಂದಿಸಿದರು.
ಈ ಸಂದರ್ಭದಲ್ಲಿ ತಸ್ವಿ ಬೋಟಿಕ್ ಅವರ ಸೀರೆ ಪ್ರದರ್ಶನ ಮತ್ತು ಮಾರಾಟ ಮೇಳ ಈ ಕಾರ್ಯಕ್ರಮದ ವಿಶೇಷವಾಗಿತ್ತು.