ರಾಮನಗರ: ಬಿಡದಿ ಸೊಸೈಟಿ ವಾರ್ಷಿಕವಾಗಿ ಕೋಟ್ಯಂತರ ರುಪಾಯಿ ವಹಿವಾಟು ನಡೆಸುತ್ತದೆ. ಕಳೆದ 50 ವರ್ಷಗಳಿಂದ ಜೆಡಿಎಸ್ ಬೆಂಬಲಿತರೆ ಆಡಳಿತ ನಡೆಸುತ್ತಾ ಬಂದಿದ್ದಾರೆ. ಇಲ್ಲಿವರೆಗೆ ಸೊಸೈಟಿಗೆ ಸೂಕ್ತ ಕಾರ್ಯಾಲಯ ಮತ್ತು ಗೋದಾಮು ಕಟ್ಟಡ ನಿರ್ಮಿಸಲು ಸಾಧ್ಯವಾಗಿಲ್ಲ. ಇದು ಜೆಡಿಎಸ್‌ನ ಅಭಿವೃದ್ಧಿ ಶೂನ್ಯ ಕೊಡುಗೆ ಎಂದು ಬಿಡದಿ ಪುರಸಭೆ ವಿಪಕ್ಷ ನಾಯಕ ಸಿ.ಉಮೇಶ್ ಟೀಕಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತದಲ್ಲಿದೆ. ಬಿಡಿಸಿಸಿ ಬ್ಯಾಂಕಿನ ಅಧಿಕಾರ ಹಾಗೂ ಶಾಸಕ ಬಾಲಕೃಷ್ಣರವರು ಕಾಂಗ್ರೆಸ್ ಪಕ್ಷದವರೇ ಆಗಿದ್ದಾರೆ. ಇವರೆಲ್ಲರ ಸಹಕಾರದಿಂದ ರೈತರಿಗೆ ಹೆಚ್ಚಿನ ಸೌಲಭ್ಯಗಳು ಲಭಿಸುವುದರಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆಲುವು ಸಾಧಿಸಿ ಸೊಸೈಟಿ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವೈ.ಎಚ್.ಮಂಜು ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ಜೆಡಿಎಸ್ ಬೆಂಬಲಿತರು ಅಧಿಕಾರದಲ್ಲಿದ್ದರೂ ಸಹ ಸ್ವಾಯತ್ತ ಸಂಸ್ಥೆಯ ಆಡಳಿತಕ್ಕಷ್ಟೇ ಸೀಮಿತವಾಗಿದೆ. ಯಾವುದೇ ಪ್ರಮುಖ ಯೋಜನೆಗಳನ್ನು ಸಾಕಾರ ಮಾಡಲು ಸಾಧ್ಯವಾಗಿಲ್ಲ. ಸುಮಾರು 92 ಹಳ್ಳಿಗಳ ವ್ಯಾಪ್ತಿಗೆ ಒಳಪಡುವ ಬಿಡದಿ ಸೊಸೈಟಿಗೆ ಬಿಡಿಸಿಸಿ ಬ್ಯಾಂಕ್ ಶೂನ್ಯ ಬಡ್ಡಿ ದರದಲ್ಲಿ ಕೆವೈಸಿ ಬೆಳೆಸಾಲ ಕೊಟ್ಟು ರೈತರ ಕೈಹಿಡಿದಿದೆ. ತಾವು ಬಿಡಿಸಿಸಿ ನಿರ್ದೇಶಕರಾದ ನಂತರ 4 ವರ್ಷಗಳ ಹಿಂದೆ ಮೊದಲ ಬಾರಿಗೆ 3.50 ಕೋಟಿ ರು.ಗಳನ್ನು ಕೆವೈಸಿ ಬೆಳೆಸಾಲ ನೀಡಿದ್ದೇವೆ ಎಂದರು.
ಇತ್ತೀಚೆಗೆ 25 ಲಕ್ಷ ರು. ಹೈನುಗಾರಿಕೆ ಸಾಲವನ್ನು ನೀಡಿದ್ದೇವೆ. ಮುಂದಿನ ದಿನಗಳಲ್ಲಿ ಹೈನುಗಾರಿಕೆ ಸಾಲವನ್ನು 50 ಕೋಟಿ ರು.ಗಳಿಗೆ ಹೆಚ್ಚಿಸಲು ತೀರ್ಮಾನಿಸಿದ್ದೇವೆ. ಬಮೂಲ್ ಅಧ್ಯಕ್ಷರಾದ ಡಿ.ಕೆ.ಸುರೇಶ್ ಹಾಗೂ ಸಹಕಾರಿ ಧುರೀಣ ಎಚ್.ಎನ್.ಅಶೋಕ್(ತಮ್ಮಾಜಿ)ರವರ ನೇತೃತ್ವದಲ್ಲಿ 2 ಬಾರಿ ಬೆಳೆ ಸಾಲ ಕೊಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ರೈತ ಸಂಪರ್ಕ ಕೇಂದ್ರಗಳಿಂದ ದೊರೆಯುವ ಸಾಲಸೌಲಭ್ಯಗಳ ಬಗ್ಗೆ ರೈತರಿಗೆ ತಿಳಿಸಿ ನೆರವು ಕೊಡಿಸಿದ್ದೇವೆ ಎಂದು ಹೇಳಿದರು.ಬಿಡದಿ-ಕೂಟಗಲ್ ಹೋಬಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರಗೌಡ, ಬಿಎಂಐಸಿಪಿ ನಿರ್ದೇಶಕ ಅಬ್ಬನಕುಪ್ಪೆ ರಮೇಶ್, ಕೆಪಿಸಿಸಿ ಸದಸ್ಯ ಬ್ಯಾಟಪ್ಪ, ಬಿಡದಿ ಪುರಸಭೆ ಸದಸ್ಯರಾದ ಎನ್.ಕುಮಾರ್, ಹೊಂಬಯ್ಯ, ಆರ್ಎಸ್ಎಸ್ಎನ್ ಮಾಜಿ ಅಧ್ಯಕ್ಷ ಮಹೇಶ್, ಗ್ರಾಪಂ ಮಾಜಿ ಅಧ್ಯಕ್ಷ ಹೊಂಬೇಗೌಡ, ಮುಖಂಡರಾದ ಜೀವನ್ , ಹೇಮಂತ್ ಕುಮಾರ್, ಶಿವಕುಮಾರ್, ಸಂತೋಷ್, ದೊಡ್ಡರೇವಯ್ಯ, ಸತ್ಯಪ್ಪ, ರಮೇಶ್, ಮಧುಕುಮಾರ್, ಕಿರಣ್, ಬಾಲಕೃಷ್ಣ, ನಂಜುಂಡಿ, ಕುಮಾರ್ ಮೋಹನ್ ಮತ್ತಿತರರು ಹಾಜರಿದ್ದರು.
ಕೋಟ್ ...............
ಮುಂದಿನ ದಿನಗಳಲ್ಲಿ 25 ರಿಂದ 30 ಕೋಟಿ ಕೆವೈಸಿ ಬೆಳೆಸಾಲವನ್ನು ವಿತರಣೆ ಮಾಡಲಾಗುವುದು.ಕಾಂಗ್ರೆಸ್ ಸರ್ಕಾರದ ಜನಪ್ರಿಯ ಗ್ಯಾರಂಟಿ ಯೋಜನೆಗಳು, ಬಿಡಿಸಿಸಿ ಬ್ಯಾಂಕಿನಿಂದ ನೀಡಿರುವ ಆರ್ಥಿಕ ನೆರವು ಹಾಗೂ ಶಾಸಕರಾದ ಎಚ್.ಸಿ.ಬಾಲಕೃಷ್ಣರವರ ರೈತಪರ ಚಿಂತನೆಗಳು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಗೆಲುವಿಗೆ ವರದಾನವಾಗಲಿವೆ.
-ಯರೇಹಳ್ಳಿ ಮಂಜು, ನಿರ್ದೇಶಕರು, ಬಿಡಿಸಿಸಿ ಬ್ಯಾಂಕ್.6ಕೆಆರ್ ಎಂಎನ್ 6.ಜೆಪಿಜಿ
ಬಿಡದಿ ಪುರಸಭೆ ವಿಪಕ್ಷ ನಾಯಕ ಸಿ.ಉಮೇಶ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.