ಕನ್ನಡಪ್ರಭ ವಾರ್ತೆ ಚಳ್ಳಕೆರೆ

ಸಮಾಜದಲ್ಲಿರುವ ಎಲ್ಲ ಜನಸಮುದಾಯಗಳ ಹಿತ ಕಾಯುವ ಜೊತೆಗೆ ಸರ್ವಸಮುದಾಯಗಳಿಗೂ ಪ್ರಾತಿನಿಧ್ಯ ನೀಡುವ ಗುರಿ ಇಟ್ಟುಕೊಂಡು ಭಾರತೀಯ ಜನತಾ ಪಕ್ಷ ಜನ್ಮ ತಳೆದಿದೆ ಎಂದು ಚಳ್ಳಕೆರೆ ವಿಧಾನ ಸಭಾ ಕ್ಷೇತ್ರದ ಬಿಎಲ್ಎ ದಯಾನಂದ.ಬಿ ಹೇಳಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬಿಜೆಪಿ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ದೇಶದ ಏಕತೆ ಸಮಗ್ರತೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಎಲ್ಲಾ ಜನರಿಗೆ ಉತ್ತಮ ಸಂಸ್ಕಾರ ಮೂಡಿಸುವ ಕೆಲಸವನ್ನು ಪಕ್ಷ ಮಾಡುತ್ತಿದೆ. ಇಂತಹ ಪಕ್ಷಕ್ಕೆ ಯಾವುದೇ ಫಲಾಪೇಕ್ಷೆ ಇಲ್ಲದೇ ಕೆಲಸ ಮಾಡುವ ಸಾವಿರಾರು ಜನರು ಸೇವೆ ಮಾಡುತ್ತಿದ್ದಾರೆ ಎಂದರು.

ಯುವಜನತೆ ಸೇರಿದಂತೆ ಸಮಾಜದ ಎಲ್ಲಾ ವರ್ಗಗಳು ಬೆಜೆಪಿ ಪಕ್ಷದ ಜೊತೆ ನಿಂತಿವೆ. ಕೇಂದ್ರದಲ್ಲಿ ಮೋದಿಜೀ ಆಡಳಿತ ಜನರ ಪರವಾಗಿದೆ. ಅಟಲ್ ಬಿಹಾರಿ ವಾಜಪೇಯಿ ಅಂತಹ ಮಹಾನ್ ನಾಯಕರ ಆದರ್ಶಗಳು ಮಾದರಿಯಾಗಬೇಕಿದೆ ಎಂದರು.

ಬಿಜೆಪಿ ಮುಖಂಡ ಬಾಳೆಕಾಯಿ ರಾಮ್ ದಾಸ್ ಮಾತನಾಡಿ, ಜನಸಂಘದ ಮೂಲಕ ರಾಜಕೀಯ ಪಕ್ಷವಾಗಿ ಭಾರತೀಯ ಜನತಾ ಪಕ್ಷ ಹುಟ್ಟಿದೆ. ಇಡೀ ದೇಶವ್ಯಾಪಿ ಬಿಜೆಪಿಯ ಜನಪ್ರಿಯತೆ ಮುಗಿಲು ಮುಟ್ಟುವಂತಿದೆ.


ಆ ನಿಟ್ಟಿನಲ್ಲಿ ಪ್ರಧಾನಿ ಮೋದಿಜೀಯವರ ಅಡಳಿತ ವೈಖರಿ ಜನಮಾನಸದಲ್ಲಿ ಬೆರೆತು ಹೋಗಿದೆ ಎಂದು ನುಡಿದರು.

ಭಾರತೀಯ ಜನತಾ ಪಕ್ಷ ಕಟ್ಟುವುದಕ್ಕಾಗಿ ಅನೇಕ ಹಿರಿಯರು ತ್ಯಾಗ ಬಲಿದಾನಗಳ ಮೂಲಕ ವಿಚಾರಗಳ ಮೂಲಕ ಪಕ್ಷ ಕಟ್ಟಿದ್ದಾರೆ. ಆದ್ದರಿಂದಲೇ ಬಿಜೆಪಿ ಇಡೀ ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚು ವಿಸ್ತಾಗೊಳ್ಳುತ್ತಿದೆ ಎಂದು ವಿವರಿಸಿದರು.ಬಿಜೆಪಿ ಮಂಡಲ ಅಧ್ಯಕ್ಷ ಬಿ.ಎಂ. ಸುರೇಶ್, ಸಿ.ಎಸ್. ಪ್ರಸಾದ್, ಬಿ.ಎಸ್‌. ಶಿವಪುತ್ರಪ್ಪ, ಸಿದ್ದಾಪುರ ರುದ್ರಮುನಿ, ಶ್ರೀನಿವಾಸ್ ಇದ್ದರು.