ಮಾಜಿ ಸಚಿವ ಕೆ.ಎನ್.ರಾಜಣ್ಣ ಅವರ ಪುತ್ರ ವಿಧಾನ ಪರಿಷತ್ ಸದಸ್ಯ ರಾಜೇಂದ್ರ ಅವರು ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಕಾಂಗ್ರೆಸ್‌ನಲ್ಲಿ ನವೆಂಬರ್ ಕ್ರಾಂತಿ ಎಂಬ ಗುಸುಗುಸು ಬೆನ್ನಲ್ಲೇ ಭೇಟಿ

ತುಮಕೂರು : ಮಾಜಿ ಸಚಿವ ಕೆ.ಎನ್.ರಾಜಣ್ಣ ಅವರ ಪುತ್ರ ವಿಧಾನ ಪರಿಷತ್ ಸದಸ್ಯ ರಾಜೇಂದ್ರ ಅವರು ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. 

ಕಾಂಗ್ರೆಸ್‌ನಲ್ಲಿ ನವೆಂಬರ್ ಕ್ರಾಂತಿ ಎಂಬ ಗುಸುಗುಸು ಬೆನ್ನಲ್ಲೇ ಭೇಟಿ

ಕಾಂಗ್ರೆಸ್‌ನಲ್ಲಿ ನವೆಂಬರ್ ಕ್ರಾಂತಿ ಎಂಬ ಗುಸುಗುಸು ಬೆನ್ನಲ್ಲೇ ಅಮಿತ್‌ ಶಾ ಹಾಗೂ ರಾಜೇಂದ್ರ ಭೇಟಿ ರಾಜಕೀಯ ಕಾರಣಕ್ಕಾಗಿ ಕೂತೂಹಲ ಮೂಡಿಸಿದೆ. ದೆಹಲಿಯಲ್ಲಿ ನಡೆದ ಸಹಕಾರಿ ಇಲಾಖೆಯ ಕಾರ್ಯಕ್ರಮದಲ್ಲಿ ಅಮಿತ್‌ ಶಾ ಹಾಗೂ ರಾಜೇಂದ್ರ ಮುಖಾಮುಖಿಯಾಗಿದ್ದರು. ಆರಂಭದಲ್ಲಿ ಗುಂಪಿನಲ್ಲೇ ರಾಜೇಂದ್ರರನ್ನು ಶಾ ಅವರು ಮಾತಾಡಿಸಿದ್ದಾರೆ. ಬಳಿಕ ರಾಜೇಂದ್ರ ಜೊತೆ ಕೊಠಡಿಯಲ್ಲಿ ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದಾರೆ.

ಅರ್ಧ ತಾಸಿಗೂ ಹೆಚ್ಚು ಸಮಯ ಮಾತು

ಅಮಿತ್‌ ಶಾ ಅವರು ರಾಜೇಂದ್ರರಿಂದ ಅರ್ಧ ತಾಸಿಗೂ ಹೆಚ್ಚು ಸಮಯ ರಾಜ್ಯದ ರಾಜಕೀಯ ಬೆಳವಣಿಗೆ ಕುರಿತು ಮಾಹಿತಿ ಪಡೆದಿದ್ದಾರೆ ಎನ್ನಲಾಗಿದೆ. ಅಲ್ಲದೇ ರಾಜಣ್ಣ ಆರೋಗ್ಯ ವಿಚಾರಿಸಿದ ಅಮಿತಾ ಶಾ, ಹೊರಡುವಾಗ ರಾಜೇಂದ್ರ ಕೈ ಕುಲುಕಿ ಬೆನ್ನು ತಟ್ಟಿ ಒಳ್ಳೆಯದಾಗುತ್ತದೆ ಎಂದು ಶುಭ ಹಾರೈಸಿದ್ದಾರೆ.