ಗುಣಮಟ್ಟದ ಹಾಲು ಸರಬರಾಜು ಮಾಡಿ: ಶಾಸಕ ಕೆ.ಎನ್.ರಾಜಣ್ಣ

| Published : Nov 07 2025, 02:15 AM IST

ಸಾರಾಂಶ

ಹಾಲು ಉತ್ಪಾದಕರು ಹಸುಗಳನ್ನು ಕೊಂಡು ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಗುಣ ಮಟ್ಟದ ಹಾಲು ಪೂರೈಸುವ ನಿಟ್ಟಿನಲ್ಲಿ ಆರ್ಥಿಕವಾಗಿ ಅಭಿವೃದ್ಧಿ ಹೊಂದುವ ಮೂಲಕ ತಮ್ಮ ಜೀವನ ಮಟ್ಟ ಸುಧಾರಿಸಿಕೊಳ್ಳುವಂತೆ ಶಾಸಕ ಹಾಗೂ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಎನ್.ರಾಜಣ್ಣ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಮಧುಗಿರಿ

ಹಾಲು ಉತ್ಪಾದಕರು ಹಸುಗಳನ್ನು ಕೊಂಡು ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಗುಣ ಮಟ್ಟದ ಹಾಲು ಪೂರೈಸುವ ನಿಟ್ಟಿನಲ್ಲಿ ಆರ್ಥಿಕವಾಗಿ ಅಭಿವೃದ್ಧಿ ಹೊಂದುವ ಮೂಲಕ ತಮ್ಮ ಜೀವನ ಮಟ್ಟ ಸುಧಾರಿಸಿಕೊಳ್ಳುವಂತೆ ಶಾಸಕ ಹಾಗೂ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಎನ್.ರಾಜಣ್ಣ ಕರೆ ನೀಡಿದರು.

ದೊಡ್ಡೇರಿ ಹೋಬಳಿಯ ತಿಗಳರಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಕ್ಕೆ ತುಮುಲ್‌ ಹಾಲು ಒಕ್ಕೂಟದಿಂದ ಕ್ಷೀರ ಸಂಜೀವಿನಿ ಯೋಜನೆಯಡಿ 6 ಲಕ್ಷ 44 ಸಾವಿರ ಚೆಕ್ ವಿತರಿಸಿ ಮಾತನಾಡಿದರು.

14 ಹೈನುಗಾರರಿಗೆ ತಲಾ 44 ಸಾವಿರ ರುಗಳನ್ನು ಬಡ್ಡಿ ರಹಿತ ಸಾಲವಾಗಿ ನೀಡಲಾಗುತ್ತಿದೆ. ಇದರ ಜೊತೆಗೆ ಡಿಸಿಸಿ ಬ್ಯಾಂಕ್ ವತಿಯಿಂದ ಪ್ರತಿ ಫಲಾನುಭವಿಗೆ 26 ಸಾವಿರ ಸಾಲ ನೀಡುತ್ತಿದ್ದು ಒಟ್ಟು 70 ಸಾವಿರಗಳಲ್ಲಿ ಹಸುಗಳನ್ನು ಖರೀದಿಸಿ ಗುಣ ಮಟ್ಟದ ಹಾಲು ಸರಬರಾಜು ಮಾಡಿ ಆರ್ಥಿಕವಾಗಿ ಅಭಿವೃದ್ಧಿ ಸಾಧಿಸಿ ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುಬೇಕು ಎಂದರು.

ತುಮುಲ್ ಹಾಲು ಒಕ್ಕೂಟ ನಿರ್ದೇಶಕ ಬಿ.ನಾಗೇಶ್ ಮಾತನಾಡಿ, ಮಧುಗಿರಿ ತಾಲೂಕು ಗುಣ ಮಟ್ಟದ ಹಾಲು ಶೇಖರಣೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದು, ತಾಲೂಕಿನಲ್ಲಿ 1 ಲಕ್ಷ 20 ಸಾವಿರ ಲೀ.ಹಾಲು ಶೇಖರಣೆಯಾಗುತ್ತಿದೆ. ಈ ಹಿಂದೆ ಗುಣ ಮಟ್ಟದಲ್ಲಿ 10ನೇ ಸ್ಥಾನ ಪಡೆದಿದ್ದು ,ಆದರೆ ಕಳೆದ ತಿಂಗಳಿನಲ್ಲಿ ಮೊದಲ ಸ್ಥಾನಕ್ಕೆ ಬಂದಿದೆ.ಇದಕ್ಕೆ ಕಾರಣ ಶಾಸಕರಾದ ಕೆ.ಎನ್.ರಾಜಣ್ಣ, ಸಹಕಾರ ಸಚಿವರಾಗಿದ್ದ ವೇಳೆ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ನೂತನ ತಂತ್ರಜ್ಞಾನ ಅಳವಡಿಸಿಕೊಳ್ಳಲಲು ತಿಳಿಸಿದ್ದರಿಂದ ಇಂದು ಗುಣ ಮಟ್ಟದ ಹಾಲು ಬರುತ್ತಿದೆ. ಇದೇ ರೀತಿ ರಾಸುಗಳು ಮರಣ ಹೊಂದಿದರೆ ಪರಿಹಾರ ನೀಡಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಜಿ.ಜೆ.ರಾಜಣ್ಣ,ಕೆಎಂಎಫ್ ಮಾಜಿ ನಿರ್ದೇಶದ ಮೈದನಹಳ್ಳಿ ಕಾಂತರಾಜು,ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಗೋಪಾಲಯ್ಯ,ಮುಖಂಡರಾದ ಡಿ.ಎಚ್.ನಾಗರಾಜು,ತುಮುಲ್ ಹಾಲು ಒಕ್ಕೂಟದ ತಾಲೂಕು ಮುಖ್ಯಸ್ಥ ರಂಜಿತ್‌,ಸ್ಟೆಪ್ ವಿಭಾಗದ ಮುಖ್ಯಸ್ಥರಾದ ಮಧು,ಹಾಲು ಒಕ್ಕೂಟದ ಅಧಿಕಾರಿಗಳಾದ ದಿವಾಕರ್,ನಾಗರಾಜು,ರವಿತೇಜ ಇದ್ದರು.