ದೇಶದ ಪ್ರತಿಷ್ಠಿತ ಆಟೋ ಮೊಬೈಲ್ ಕಂಪನಿ ಬಜಾಜ್ ಆಟೋ ಲಿಮಿಟೆಡ್ ಮತ್ತೊಂದ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ. ಪುಣೆ ನಗರದ ಅಕ್ಕುರಡಿಯಲ್ಲಿರುವ ಸಂಸ್ಥೆಯ ಉತ್ಸಾಹ್ ಸಭಾಂಗಣದಲ್ಲಿ ಚೇತಕ್ ಸಿ25 ವಾಹನದ ಬಿಡುಗಡೆ ಹಾಗೂ ವಾಹನದ ಟೆಸ್ಟ್ ರೈಡ್ ನಡೆಸಲಾಯಿತು.
ಗಿರಿಧರ್
ಪುಣೆ : ದೇಶದ ಪ್ರತಿಷ್ಠಿತ ಆಟೋ ಮೊಬೈಲ್ ಕಂಪನಿ ಬಜಾಜ್ ಆಟೋ ಲಿಮಿಟೆಡ್ ಮತ್ತೊಂದ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ. ಪುಣೆ ನಗರದ ಅಕ್ಕುರಡಿಯಲ್ಲಿರುವ ಸಂಸ್ಥೆಯ ಉತ್ಸಾಹ್ ಸಭಾಂಗಣದಲ್ಲಿ ಚೇತಕ್ ಸಿ25 ವಾಹನದ ಬಿಡುಗಡೆ ಹಾಗೂ ವಾಹನದ ಟೆಸ್ಟ್ ರೈಡ್ ನಡೆಸಲಾಯಿತು.
ಚೇತಕ್ ಸಿ 25 ಎಲೆಕ್ಟ್ರಿಕ್ ಸ್ಕೂಟರ್ ಒಮ್ಮೆ ಚಾರ್ಚ್ ಮಾಡಿದರೆ 113 ಕಿ.ಮೀ. ದೂರ ಕ್ರಮಿಸಲಿದೆ. ಮೆಟಲ್ ಬಾಡಿ ಜೊತೆಗೆ ಉತ್ಕೃಷ್ಟ ಗುಣಮಟ್ಟದ 6 ಬಣ್ಣಗಳಲ್ಲಿ ವಾಹನ ಗ್ರಾಹಕರನ್ನು ತಲುಪಲಿದೆ. ಸ್ಕೂಟರ್‌ನ ಎಕ್ಸ್ ಶೋ ರೂಂ ಬೆಲೆ 91,399 ರು. ಇದೆ.
ಕಂಪನಿಯ ಅಧ್ಯಕ್ಷ (ನಗರ ವ್ಯವಹಾರ) ಎರಿಕ್ ವಾಸ್ ಮಾತನಾಡಿ, ಬಜಾಜ್ ಕಂಪನಿಯ ಚೇತಕ್ ಸಿ 25 ನಗರ, ಪಟ್ಟಣಗಳಲ್ಲಿ ಸುಲಭವಾಗಿ ಸಾಗಲು, ಪಾರ್ಕ್ ಮಾಡಲು ಹಾಗೂ ಸಣ್ಣಪುಟ್ಟ ಕೆಲಸಗಳಿಗೆ ತ್ವರಿತ, ಸುಲಭವಾಗಿ ತಲುಪಲು ಸೂಕ್ತವಾಗಿದೆ ಎಂದರು.
ಚೇತಕ್ ಸಿ 25 ಎಲೆಕ್ಟ್ರಿಕ್ ವಾಹನದ ವಿನ್ಯಾಸಕಾರ ಗಗನ್ ದೀಪ್ ಸಿಂಗ್ ಮಾತನಾಡಿ, ಈ ವಾಹನ ಗಂಟೆಗೆ ಗರಿಷ್ಠ 55 ಕಿ.ಮೀ. ವೇಗ ಹೊಂದಿದೆ. 2 ತಾಸು 25 ನಿಮಿಷದಲ್ಲಿ ಶೇ.80 ಚಾರ್ಜ್ ಆಗಲಿದೆ. ಎಲ್ಲ ವಯೋಮಾನದವರಿಗೆ ಸೂಕ್ತವಾಗಿದೆ. ಈ ವಾಹನ ಪರೀಕ್ಷಾ ಸಮಯದಲ್ಲಿ ವಾಹನ ಬಿಸಿಯಾಗುವ ಸಮಸ್ಯೆ ಕಂಡುಬಂದಿಲ್ಲ ಎಂದರು.
ರಿವರ್ಸ್ ಚಾಲನೆ, ಸ್ಟ್ಯಾಂಡ್ ಸೆನ್ಸರ್
ಕಲರ್ ಎಲ್‌ಸಿಡಿ ಡಿಸ್‌ಪ್ಲೇ ಹೊಂದಿರುವ ಚೇತಕ್ ಸಿ 25ನ ಹ್ಯಾಂಡಲ್‌ನಲ್ಲಿ ಆರ್- ರಿವರ್ಸ್, ಡಿ-ಡ್ರೈವ್ ಬಟನ್‌ಗಳನ್ನು ನೀಡಲಾಗಿದೆ. ಎಂ- ಬಟನ್ ಮೂಲಕ ಕ್ಲಾಕ್, ಓಡೋ ಮೀಟರ್ ಮಾಹಿತಿ ಅರಿಯಬಹುದು. ಬ್ಯಾಟರಿ ಪರ್ಸೆಂಟೇಜ್, ರೇಂಜ್, ಪವರ್ ಬಾರ್, ಓಡೋ ಮೀಟರ್ ಮಾಹಿತಿ ಕಾಣಬಹುದು. ಕೆಂಪು-ಹಳದಿ-ಹಸಿರು ಬಣ್ಣಗಳ ಮೂಲಕ ಬ್ಯಾಟರಿ ಮಾಹಿತಿ ಸಹ ಕಾಣುವುದು. ಸೈಡ್ ಸ್ಟ್ಯಾಂಡ್ ಸೆನ್ಸರ್ ಹೊಂದಿದ್ದು, ಸ್ಟ್ಯಾಂಡ್ ಹಾಕಿದ್ದಾಗ ವಾಹನ ಸ್ಟಾರ್ಟ್ ಆಗುವುದಿಲ್ಲ.
ಸಂಸ್ಥೆ ಸಾಧನೆ:
100 ದೇಶಗಳಲ್ಲಿ ಒಟ್ಟಾರೆ 21 ಮಿಲಿಯನ್ ಮೋಟಾರ್ ಸೈಕಲ್‌ಗಳ ತಯಾರಿಕೆಯ ಹೆಗ್ಗಳಿಕೆ ಹೊಂದಿರುವ ಬಜಾಜ್ ಆಟೋ ಲಿ. ವಿಶ್ವದ ನಂ. 1 ಭಾರತೀಯ ವಾಹನ ಕಂಪನಿ ಎನಿಸಿದೆ. ಅಲ್ಲದೇ, ವಿಶ್ವದಲ್ಲೇ ತ್ರಿ ಚಕ್ರ ವಾಹನಗಳ ಉತ್ಪಾದನೆಯಲ್ಲಿ 3ನೇ ಸ್ಥಾನದಲ್ಲಿದೆ. ಕಂಪನಿಯ 2024-25ರ ಆರ್ಥಿಕ ವರ್ಷದಲ್ಲಿ 7.5 ಬಿಲಿಯನ್ ಡಾಲರ್ ವ್ಯವಹಾರ ನಡೆಸಿದೆ. ವಿಶ್ವದಲ್ಲೇ ದ್ವಿಚಕ್ರ, ತ್ರಿಚಕ್ರ ವಾಹನ ತಯಾರಿಕಾ ಕಂಪನಿ ಎಂಬ ಪಟ್ಟವನ್ನು ಮುಂದುವರಿಸಿಕೊಂಡಿದೆ. ಈ ಕೀರ್ತಿಗೆ ಕಾರಣ 75 ವರ್ಷಗಳಿಂದ ಉತ್ಪನ್ನಗಳನ್ನು ಗುಣಮಟ್ಟದ ವಿನ್ಯಾಸ ಮತ್ತು ತಾಂತ್ರಿಕತೆ, ಉತ್ಪನ್ನ ನಿರ್ಮಾಣದ ಗುಣಮಟ್ಟದ ವಿಚಾರದಲ್ಲಿ ಯಾವುದೇ ರಾಜಿಯಾಗದಿರುವುದಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಕಾರ್ಯಕ್ರಮದಲ್ಲಿ ಸಂಸ್ಥೆಯ ಎಂ.ಡಿ. ಅಬ್ರಹಾಂ ಜೋಸೆಫ್, ರಿಷಬ್ ಬಜಾಜ್ ಮತ್ತಿತರರು ಇದ್ದರು.
* ಚೇತಕ್ ಸಿ 25 ವಿಶೇಷತೆಗಳು:
- ಪ್ರೀಮಿಯಮ್ ಮೆಟಲ್ ಬಾಡಿ, ಡಿಆರ್‌ಎಲ್ ಹೆಡ್ ಲ್ಯಾಪ್
- ಚಿತ್ತಾಕರ್ಷಕ 6 ಬಣ್ಣಗಳಲ್ಲಿ ಲಭ್ಯ
- ಓಷನ್ ಟೀಲ್, ಕ್ಲಾಸಿಕ್ ವೈಟ್, ರೇಸಿಂಗ್ ರೆಡ್, ಮಿಸ್ಟಿ ಎಲ್ಲೋ, ಓಪಲ್‌ಸೆಂಟ್ ಸಿಲ್ವರ್, ಬ್ರೋಕ್ಲಿನ್ ಬ್ಲ್ಯಾಕ್ ಬಣ್ಣದ ಸ್ಕೂಟರ್‌ಗಳು
- 25 ಲೀ. ಬೂಟ್ ಸ್ಪೇಸ್ (ಫುಲ್ ಹೆಲ್ಮೆಟ್ ಸೈಜ್)
- 2.5 ಕಿಲೋ ವ್ಯಾಟ್ ಬ್ಯಾಟರಿ ಸಾಮರ್ಥ್ಯ, 113 ಕಿ.ಮೀ. ರೇಂಜ್
- ಟಾಪ್ ಸ್ಪೀಡ್ 55 ಕಿ.ಮೀ.
- 2.25 ಗಂಟೆಗಳಲ್ಲಿ 0-80%ರಷ್ಟು ಚಾರ್ಚಿಂಗ್ ಸಾಮರ್ಥ್ಯ
- ಐಪಿ67 ರೇಟೆಡ್ ವಾಟರ್ ರೆಸಿಸ್ಟೆನ್ಸ್
- ಮುಂದಿನ ಚಕ್ರ ಡಿಸ್ಕ್ ಬ್ರೇಕ್, ಹಿಂದೆ ಡ್ರಂ ಬ್ರೇಕ್
- ಕಲರ್ ಎಲ್‌ಸಿಡಿ ಡಿಸ್‌ಪ್ಲೇ.
- ರಿವರ್ಸ್ ಚಾಲನೆ ಸೌಲಭ್ಯ
- ಲಗೇಜ್ ಹುಕ್ ಇದೆ, ಅಕ್ಕಪಕ್ಕ ಸಣ್ಣ ವಸ್ತುಗಳನ್ನಿಡಲು ಜಾಗ
- ವಾರಂಟಿ- 3 ವರ್ಷ, 50000 ಕಿಮೀ.
- ರೈಡ್ ಮೋಡ್: ಇಕೋ, ಸ್ಪೋರ್ಟ್ಸ್
