ಯಮಹಾ ಸ್ಕೂಟರ್‌, ಬೈಕ್‌ಗಳ ಮೇಲೆ ದಸರಾ ಹಬ್ಬದ ವಿಶೇಷ ಆಫರ್‌

| Published : Sep 27 2025, 12:00 AM IST

ಸಾರಾಂಶ

ಯಮಹಾ ತನ್ನ ಮೋಟಾರ್‌ಸೈಕಲ್‌ ಮತ್ತು ಸ್ಕೂಟರ್‌ಗಳ ಮೇಲೆ ಹಬ್ಬದ ಆಫರ್‌ ಘೋಷಿಸಿದೆ. ಈ ವಿವರಗಳು ಇಲ್ಲಿವೆ.

ಕನ್ನಡಪ್ರಭವಾರ್ತೆ

ಕರ್ನಾಟಕದೆಲ್ಲೆಡೆ ದಸರಾ ಹಬ್ಬದ ಸಂಭ್ರಮ ಆವರಿಸಿರುವ ಈ ಸಂದರ್ಭದಲ್ಲಿ ಯಮಹಾ ಇಂಡಿಯಾ ಮೋಟಾರ್ ಸಂಸ್ಥೆಯು ಗ್ರಾಹಕರಿಗೆ ವಿಶೇಷ ಆಫರ್‌ಗಳನ್ನು ಘೋಷಿಸಿದೆ. ಈ ಶುಭ ಸಂದರ್ಭದಲ್ಲಿ ಸಂಭ್ರಮ ಹೆಚ್ಚಿಸುವ ನಿಟ್ಟಿನಲ್ಲಿ ಯಮಹಾ ತನ್ನ ಜನಪ್ರಿಯ ಮೋಟಾರ್‌ ಸೈಕಲ್‌ ಗಳು ಮತ್ತು ಸ್ಕೂಟರ್‌ ಗಳ ಮೇಲೆ ಜಿಎಸ್‌ಟಿ ಲಾಭಗಳು, ವಿಮಾ ಆಫರ್‌ ಗಳು ಮತ್ತು ಕ್ಯಾಶ್‌ ಬ್ಯಾಕ್‌ ಒದಗಿಸುವ ಮೂಲಕ ಹಲವಾರು ವಿಶೇಷ ಆಫರ್ ಗಳನ್ನು ನೀಡುತ್ತಿದೆ. ಹಾಗಾಗಿ ಯಮಹಾವನ್ನು ಮನೆಗೆ ತೆಗೆದುಕೊಂಡು ಹೋಗಲು ಇದು ಸೂಕ್ತ ಸಮಯವಾಗಿದೆ.ಯಮಹಾದ ನವರಾತ್ರಿ ವಿಶೇಷ ಆಫರ್‌ಗಳು:

-R15 V4: ಈ ವಾಹನದ ಮೇಲೆ Rs. 15,734 ವರೆಗೆ ಜಿಎಸ್‌ಟಿ ಲಾಭ ಮತ್ತು Rs. 6,560 ಮೌಲ್ಯದ ವಿಮಾ ಪ್ರಯೋಜನ

-MT-15: ಈ ವಾಹನದ ಮೇಲೆ Rs. 14,964 ವರೆಗೆ ಜಿಎಸ್‌ಟಿ ಲಾಭ ಮತ್ತು Rs. 6,560 ಮೌಲ್ಯದ ವಿಮಾ ಪ್ರಯೋಜನ

- FZ-S Fi ಹೈಬ್ರಿಡ್: ಈ ವಾಹನದ ಮೇಲೆ Rs. 12,031 ವರೆಗೆ ಜಿಎಸ್‌ಟಿ ಲಾಭ ಮತ್ತು Rs. 6,501 ಮೌಲ್ಯದ ವಿಮಾ ಪ್ರಯೋಜನ

-Fascino 125 ಹೈಬ್ರಿಡ್: Rs. 8,509 ವರೆಗೆ ಜಿಎಸ್‌ಟಿ ಲಾಭ ಮತ್ತು Rs. 5,401 ಮೌಲ್ಯದ ವಿಮಾ ಪ್ರಯೋಜನ

-RayZR 125 Fi: Rs. 7,759 ವರೆಗೆ ಜಿಎಸ್‌ಟಿ ಲಾಭ ಮತ್ತು Rs. 3,799 ವರೆಗೆ ಪ್ರಯೋಜನಯಮಹಾ ಸಂಸ್ಥೆಯು ತನ್ನ ಪ್ರೀಮಿಯಂ ಮೋಟಾರ್‌ ಸೈಕಲ್‌ ಗಳು ಮತ್ತು ಸ್ಕೂಟರ್‌ ಗಳ ಮೇಲೆ ಆಕರ್ಷಕ ಆಫರ್‌ಗಳನ್ನು ಒದಗಿಸಿದ್ದು, ಈ ಮೂಲಕ ಯಮಹಾ ಉತ್ಪನ್ನಗಳ ಜೊತೆ ನವರಾತ್ರಿ ಮತ್ತು ದಸರಾ ಹಬ್ಬವನ್ನು ಆಚರಿಸಲು ಆಹ್ವಾನ ನೀಡಿದೆ. ಅತ್ಯುತ್ತಮ ಅನುಕೂಲತೆ ಮತ್ತು ಆರಾಮದಾಯಕತೆ ಒದಗಿಸುವಂತೆ ಈ ವಾಹನಗಳನ್ನು ವಿನ್ಯಾಸಗೊಳಿಸಲಾಗಿದ್ದು, ಆಸಕ್ತ ಗ್ರಾಹಕರು ಹತ್ತಿರದ ಯಮಹಾ ಡೀಲರ್‌ ಶಿಪ್‌ಗೆ ಭೇಟಿ ನೀಡಿ ಮತ್ತು ಈ ಹಬ್ಬದ ಆಫರ್‌ ಗಳನ್ನು ಪಡೆದುಕೊಳ್ಳಬಹುದು.