ಕನ್ನಡಪ್ರಭ ವಾರ್ತೆ ನೆಲಮಂಗಲ
ಬಸವಣ್ಞ ದೇವರ ಮಠ ಆರಂಬಿಸರುವ ವಚನ ಕಂಠಪಾಠ ಸ್ಪರ್ಧೆಯಲ್ಲಿ ನಿರಂತರವಾಗಿ 1420 ವಚನಗಳನ್ನು ಹೇಳಿದ ನೀಲಾ ನಾಗಭೂಷಣ್ ಅವರಿಗೆ ಶ್ರೀಮಠದ ಶ್ರೀ ಸಿದ್ದಲಿಂಗಸ್ವಾಮಿಗಳು 1 ಲಕ್ಷ ರು. ನಗದು ಬಹುಮಾನ ನೀಡಿ ಗೌರವಿಸಿದರು.ನಗರದ ಬಸವಣ್ಣ ದೇವರ ಮಠದಲ್ಲಿ ಸತತ 3 ನೇ ಬಾರಿಗೆ ನಡೆದ ವಚನ ಕಂಠಪಾಠ ಸ್ಪರ್ಧೆಯಲ್ಲಿ ನೂರಕ್ಕೂ ಹೆಚ್ಚು ಜನರು ರಾಜ್ಯ ಹಾಗೂ ನೆರೆರಾಜ್ಯಗಳಿಂದ ಭಾಗವಹಿಸಿದ್ದರು. ಈ ಬಾರಿಯ ಸ್ಪರ್ದೆಯಲ್ಲಿ ಒಟ್ಟಾರೆ 15705 ವಚನಗಳನ್ನು ಸ್ಪರ್ಧಿಗಳು ಕಂಠಪಾಠ ಮಾಡಿ ಹೇಳಿದ್ದಾರೆ. ದೇಶದಲ್ಲಿ ಇದೇ ದೊಡ್ಡ ಮಟ್ಟದ ಸ್ಪರ್ದೆಯಾಗಿದೆ ಎಂದು ಭಾರತ ಶರಣ ಸಾಹಿತ್ಯ ಪಂಪತ್ತಿನ ಅಧ್ಯಕ್ಷ ಡಾ. ಸಿ. ಸೋಮಶೇಖರ್ ತಿಳಿಸಿದರು.3ಲಕ್ಷಕ್ಕೂ ಹೆಚ್ಚು ಬಹುಮಾನ ವಿತರಣೆ: 1420 ವಚನಗಳನ್ನು ನಿರಂತರವಾಗಿ ಹೇಳಿದ ಹಾಸನ ಜಿಲ್ಲೆಯ ಬೇಲೂರಿನ ನೀಲಾನಾಗಭೂಷಣ್ ಪ್ರಥನು ಸ್ಥಾನ ಪಡೆದು 1 ಲಕ್ಷ ಬಹುಮಾನ ಪಡೆದುಕೊಂಡರು. ಕಲಬುರಗಿ ಚಿಮ್ಮನ್ ಚೂಡ್ನ ಜಗದೀಶ್ಮರಪಳ್ಳಿ 870 ವಚನಗಳನ್ನು ಹೇಳುವ ಮೂಲಕ ದ್ವಿತೀಯ ಸ್ಥಾನ ಪಡೆದುಕೊಂಡು 75ಸಾವಿರ ಪಡೆದರೆ, ಬೆಳಗಾವಿಯ ರಾಯಭಾಗದ ಲತಾ ಶಿವಾನಂದ ಪಾಟೀಲ್ 852 ವಚನಗಳನ್ನು ಹೇಳುವ ಮೂಲಕ ತೃತೀಯ ಸ್ಥಾನ ಪಡೆದು 50 ಸಾವಿರ ಬಹುಮಾನ ಪಡೆದುಕೊಂಡರು. 845 ವಚನ ಹೇಳಿದ ಬೆಳಗಾವಿಯ ಸವದತ್ತಿಯ ಈರಮ್ಮ 4ನೇ ಸ್ಥಾನ ಪಡೆದಿದ್ದು 25 ಸಾವಿರ ನಗದು ಬಹುಮಾನ ನೀಡಲಾಯಿತು.ಇದರ ಜೊತೆ ಹಿಂದಿನ ಬಾರಿ ಪ್ರಥಮ ಸ್ಥಾನ ಪಡೆದ ಲಾವಣ್ಯ ಅಂಗಡಿ 1118 ವಚನಗಳನ್ನುಹೇಳಿದ ಹಾಗೂ 836 ವಚನಗಳನ್ನು ಹೇಳಿದ ವಿನಾಯಕ ಮತ್ತು ಸವಿತಾ ಸಮಾಧಾನಕರ ಬಹುಮಾನ ವಿತರಿಸಿದರು. ಪವಾಡ ಶ್ರೀ ಪ್ರಶಸ್ತಿಯನ್ನು ಕ್ಯಾನ್ಸರ್ ರೋಗ ತಜ್ಙೆ ಡಾ ವಿಜಯಲಕ್ಷ್ಮೀ ರವರಿಗೆ ಶ್ರೀ ಸಿದ್ದಲಿಂಗಸ್ವಾಮಿ ಗಳು ನೀಡಿ ಗೌರವಿಸಿದರು.ಅದ್ಧೂರಿ ಮೆರವಣಿಗೆ: ವಚನ ಕಂಠಪಾಠ ಸ್ಪರ್ಧೆಯಲ್ಲಿ ವಿಜೇತರಾದವರನ್ನು ಮೆರವಣಿಗೆ ಮಾಡಲಾಯಿತು. ಈ ವೇಳೆ ಶಾಸಕ ಎನ್. ಶ್ರೀನಿವಾಸ್,ಮಾಜಿ ಶಾಸಕ ಎಂ.ವಿ. ನಾಗರಾಜು ಎನ್ಪಿಯ ಅಧ್ಯಕ್ಷ ಎಂ.ಕೆ. ನಾಗರಾಜು ಮಾಜಿ ಅಧ್ಯಕ್ಷ ಮಲ್ಲಯ್ಯ ನಗರಸಭೆ ಸದಸ್ಯ ಸಿ.ಪ್ರದೀಪ್ ಹಾಜರಿದ್ದರು.
ಫೋಟಟನೆಲಮಂಗಲ-ಬಸವಣ್ಞ ದೇವರ ಮಠ ಆರಂಬಿಸರುವ ವಚನ ಕಂಠಪಾಠ ಸ್ಪರ್ಧೆಯಲ್ಲಿ ನಿರಂತರವಾಗಿ 142೦ ವಚನಗಳನ್ನು ಹೇಳಿದ ನೀಲಾನಾಗಭೂಷಣ್ ಶ್ರೀಮಠದ ಶ್ರೀ ಸಿದ್ದಲಿಂಗಸ್ವಾಮಿಗಳು 1ಲಕ್ಷ ರು. ನಗದು ಬಹುಮಾನ ನೀಡಿ ಗೌರವಿಸಿದರು.