ಸಾರಾಂಶ
ಬೆಂಗಳೂರು: 10ನೇ ಆವೃತ್ತಿ ಪ್ರೊ ಕಬಡ್ಡಿಯಲ್ಲಿ ಬೆಂಗಾಲ್ ವಾರಿಯರ್ಸ್ ಪ್ರಾಬಲ್ಯ ಮುಂದುವರಿಸಿದ್ದು, ಮಂಗಳವಾರ ಪಾಟ್ನಾ ಪೈರೇಟ್ಸ್ ವಿರುದ್ಧ 60-42 ಅಂಕಗಳ ಭರ್ಜರಿ ಗೆಲುವು ಸಾಧಿಸಿತು. ಇದು ಟೂರ್ನಿಯಲ್ಲಿ ಬೆಂಗಾಲ್‌ಗೆ 4 ಪಂದ್ಯಗಳಲ್ಲಿ 3ನೇ ಜಯ. ಮತ್ತೊಂದು ಪಂದ್ಯವನ್ನು ಟೈ ಮಾಡಿಕೊಂಡಿದ್ದ ಬೆಂಗಾಲ್, ಒಟ್ಟು 18 ಅಂಕದೊಂದಿಗೆ ಅಗ್ರಸ್ಥಾನಕ್ಕೇರಿದೆ. ಅತ್ತ ಪಾಟ್ನಾಗಿದು ಈ ಆವೃತ್ತಿಯಲ್ಲಿ ಮೊದಲ ಸೋಲು. ಆರಂಭದ ಕೆಲ ನಿಮಿಷ ಪಾಟ್ನಾ ಉತ್ತಮ ಪ್ರದರ್ಶನ ತೋರಿತಾದರೂ, ಬಳಿಕ ಬೆಂಗಾಲ್‌ನ ಪ್ರಾಬಲ್ಯದ ಮುಂದೆ ಮಂಕಾಯಿತು. ಮೊದಲಾರ್ಧಕ್ಕೆ 27-16ರ ಮುನ್ನಡೆ ಪಡೆದ ವಾರಿಯರ್ಸ್ ಕೊನೆವರೆಗೂ ಪಾಟ್ನಾ ಮೇಲೆ ಸವಾರಿ ಮಾಡಿ, ಈ ಬಾರಿ ಟೂರ್ನಿಯ ಗರಿಷ್ಠ ಅಂಕದ ಸಾಧನೆ ಮಾಡಿತು. ಬೆಂಗಾಲ್‌ನ ರೈಡರ್‌ಗಳಾದ ಮಣೀಂದರ್ (15), ನಿತಿನ್ (14), ಶ್ರೀಕಾಂತ್ (12) ಸೂಪರ್-10 ಸಾಧಿಸಿದರು. ಸಚಿನ್ (14), ಸುಧಾಕರ್ (14)ರ ಆಕರ್ಷಕ ರೈಡಿಂಗ್ ಪಾಟ್ನಾಕ್ಕೆ ಗೆಲುವು ತಂದುಕೊಡಲಿಲ್ಲ. -ಇಂದಿನ ಪಂದ್ಯಗಳುತಲೈವಾಸ್-ಟೈಟಾನ್ಸ್, ರಾತ್ರಿ 8ಕ್ಕೆಬೆಂಗಳೂರು-ಜೈಪುರ , ರಾತ್ರಿ 9ಕ್ಕೆ