ಸಾರಾಂಶ
Karnataka continues to win more and more medals at the inagural Para Khelo India games.
ನವದೆಹಲಿ: ಇಲ್ಲಿ ನಡೆಯುತ್ತಿರುವ ಚೊಚ್ಚಲ ಆವೃತ್ತಿಯ ಖೇಲೋ ಇಂಡಿಯಾ ಪ್ಯಾರಾ ಗೇಮ್ಸ್‌ನಲ್ಲಿ ಕರ್ನಾಟಕ ಪ್ರಾಬಲ್ಯ ಮುಂದುವರಿಸಿದ್ದು, ಬ್ಯಾಡ್ಮಿಂಟನ್‌ನಲ್ಲಿ ಚಿನ್ನ ಸೇರಿ 5 ಪದಕ ಬಾಚಿಕೊಂಡಿದೆ.ಮಹಿಳಾ ಸಿಂಗಲ್ಸ್ ಡಬ್ಲ್ಯುಎಚ್1 ವಿಭಾಗದಲ್ಲಿ ಪಲ್ಲವಿ ಚಿನ್ನಕ್ಕೆ ಕೊರಳೊಡ್ಡಿದರು. ಮಹಿಳಾ ಸಿಂಗಲ್ಸ್ ಡಬ್ಲ್ಯುಎಚ್2 ಸ್ಪರ್ಧೆಯಲ್ಲಿ ಅಮ್ಮೊ ಮೋಹನ್, ಪುರುಷರ ಸಿಂಗಲ್ಸ್ ಡಬ್ಲ್ಯುಎಚ್2 ವಿಭಾಗದಲ್ಲಿ ಮಂಜುನಾಥ್ ಬೆಳ್ಳಿ ಪದಕ ಜಯಿಸಿದರು. ಪುರುಷರ ಸಿಂಗಲ್ಸ್‌ನ ಡಬ್ಲ್ಯುಎಚ್1 ವಿಭಾಗದಲ್ಲಿ ಇಂದೂಧರ, ಡಬ್ಲ್ಯುಎಚ್2 ವಿಭಾಗದಲ್ಲಿ ಸಿದ್ದಣ್ಣ ಕಂಚಿನ ಪದಕ ತಮ್ಮದಾಗಿಸಿಕೊಂಡರು.ಅಥ್ಲೆಟಿಕ್ಸ್‌ನಲ್ಲಿಮತ್ತೆ 4 ಪದಕಕರ್ನಾಟಕದ ಸ್ಪರ್ಧಿಗಳು ಅಥ್ಲೆಟಿಕ್ಸ್‌ನಲ್ಲಿ ಮತ್ತೆ 4 ಪದಕ ಜಯಿಸಿದರು. ಪುರುಷರ 400 ಮೀ. ಟಿ-11 ವಿಭಾಗದಲ್ಲಿ ರವಿಕುಮಾರ್, 5000 ಮೀ. ಟಿ-11 ವಿಭಾಗದಲ್ಲಿ ಕೇಶವಮೂರ್ತಿ ಬೆಳ್ಳಿ ಗೆದ್ದರು. ಮಹಿಳೆಯರ ಶಾಟ್‌ಪುಟ್ ಎಫ್-33 ವಿಭಾಗದಲ್ಲಿ ಮೇಧಾ, 200 ಮೀ. ಟಿ-11 ವಿಭಾಗದಲ್ಲಿ ಜ್ಯೋತಿ ಕಂಚು ಪಡೆದರು.