ಕುಸಿದ ಕರ್ನಾಟಕಕ್ಕೆ ದೇವದತ್‌ ಶತಕದ ಆಸರೆ

| Published : Feb 10 2024, 01:46 AM IST

ಸಾರಾಂಶ

ದೇಸಿ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ಮುಂದುವರಿಸಿರುವ ತಾರಾ ಬ್ಯಾಟರ್‌ ದೇವದತ್‌ ಪಡಿಕ್ಕಲ್‌ ರಣಜಿ ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ಮತ್ತೊಮ್ಮೆ ಕರ್ನಾಟಕಕ್ಕೆ ಆಪತ್ಬಾಂಧವರಾಗಿ ಮೂಡಿ ಬಂದಿದ್ದಾರೆ.

ಚೆನೈ: ದೇಸಿ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ಮುಂದುವರಿಸಿರುವ ತಾರಾ ಬ್ಯಾಟರ್‌ ದೇವದತ್‌ ಪಡಿಕ್ಕಲ್‌ ರಣಜಿ ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ಮತ್ತೊಮ್ಮೆ ಕರ್ನಾಟಕಕ್ಕೆ ಆಪತ್ಬಾಂಧವರಾಗಿ ಮೂಡಿ ಬಂದಿದ್ದಾರೆ. ತಮಿಳುನಾಡು ವಿರುದ್ಧ ಇಲ್ಲಿನ ಚೆಪಾಕ್‌ ಕ್ರೀಡಾಂಗಣದಲ್ಲಿ ಆರಂಭಗೊಂಡ ಪಂದ್ಯದಲ್ಲಿ ಪಡಿಕ್ಕಲ್‌ ಏಕಾಂಗಿ ಹೋರಾಟದಿಂದಾಗಿ ರಾಜ್ಯ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ ಉತ್ತಮ ಮೊತ್ತ ಗಳಿಸಿದೆ. ದಿನದ ಅಂತ್ಯಕ್ಕೆ ರಾಜ್ಯ ತಂಡ 5 ವಿಕೆಟ್‌ಗೆ 288 ರನ್‌ ಗಳಿಸಿದ್ದು, ದೊಡ್ಡ ಮೊತ್ತದತ್ತ ದಾಪುಗಾಲಿಡುವ ನಿರೀಕ್ಷೆಯಿದೆ.

ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ರಾಜ್ಯಕ್ಕೆ ಸಾಧಾರಣ ಆರಂಭ ಪಡೆಯಿತು. ಕಳೆದ ಪಂದ್ಯಕ್ಕೆ ಅಲಭ್ಯರಾಗಿ ಈ ಪಂದ್ಯಕ್ಕೆ ವಾಪಸಾಗಿದ್ದ ನಾಯಕ ಮಯಾಂಕ್‌ ಅಗರ್‌ವಾಲ್‌ 20 ರನ್‌ ಗಳಿಸಿದ್ದಾಗ ಸಾಯಿ ಕಿಶೋರ್‌ ಎಸೆತದಲ್ಲಿ ಕ್ಲೀನ್‌ ಬೌಲ್ಡ್‌ ಆದರು. ಬಳಿಕ ಆರ್‌.ಸಮರ್ಥ್‌ಗೆ ಜೊತೆಯಾದ ದೇವದತ್‌ ಪಡಿಕ್ಕಲ್‌ ತಮಿಳುನಾಡು ಬೌಲರ್‌ಗಳ ಬೆವರಿಳಿಸಿದರು. ಈ ಜೋಡಿ 2ನೇ ವಿಕೆಟ್‌ಗೆ 246 ಎಸೆತಗಳಲ್ಲಿ 132 ರನ್‌ ಸೇರಿಸಿ ತಂಡಕ್ಕೆ ಆಸರೆಯಾಯಿತು.ದೊಡ್ಡ ಮೊತ್ತದ ನಿರೀಕ್ಷೆಯಲ್ಲಿದ್ದ ಸಮರ್ಥ್‌ರ ಇನ್ನಿಂಗ್ಸ್‌ 57 ರನ್‌ಗೆ ಕೊನೆಗೊಂಡಿತು. ಇದಕ್ಕಾಗಿ ಅವರು 159 ಎಸೆತಗಳಲ್ಲಿ ಬಳಿಸಿಕೊಂಡರು. ಸಮರ್ಥ್‌ ನಿರ್ಗಮನದ ಬಳಿಕ ನಿಕಿನ್‌ ಜೋಸ್‌ ಜೊತೆ ಇನ್ನಿಂಗ್ಸ್‌ ಕಟ್ಟಿದ ಪಡಿಕ್ಕಲ್‌ ರಾಜ್ಯವನ್ನು ಅಲ್ಪಮೊತ್ತಕ್ಕೆ ಕುಸಿಯದಂತೆ ನೋಡಿಕೊಂಡರು. ಆದರೆ ನಿಕಿನ್‌ ಕೇವಲ 13ಕ್ಕೆ ವಿಕೆಟ್‌ ಒಪ್ಪಿಸಿದರು. 226ಕ್ಕೆ 2 ವಿಕೆಟ್‌ ಕಳೆದುಕೊಂಡಿದ್ದ ರಾಜ್ಯ ತಂಡ ಬಳಿಕ ಕೇವಲ 8 ರನ್ ಗಳಿಸುವಷ್ಟರಲ್ಲಿ ಪ್ರಮುಖ 3 ವಿಕೆಟ್‌ ಕಳೆದುಕೊಂಡಿತು. ಕಳೆದ ಪಂದ್ಯದ ಹೀರೋ ಮನೀಶ್‌ ಪಾಂಡೆ ಕೇವಲ 1 ರನ್‌ಗೆ ಔಟಾದರೆ, ಕಿಶನ್‌ ಬೆದರೆ ಕೊಡುಗೆ 3 ರನ್‌.ಏಕಾಂಗಿ ಅಬ್ಬರ:

ಒಂದೆಡೆ ವಿಕೆಟ್‌ ಉರುಳುತ್ತಿದ್ದರೂ ರಾಜ್ಯ ತಂಡವನ್ನು ಸುಸ್ಥಿತಿಯಲ್ಲಿರುವಂತೆ ನೋಡಿಕೊಂಡಿದ್ದು ಪಡಿಕ್ಕಲ್‌. ತಮಿಳುನಾಡು ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಅವರು 216 ಎಸೆತಗಳಲ್ಲಿ 151 ರನ್‌ ಸಿಡಿಸಿದ್ದು, 2ನೇ ದಿನಕ್ಕೆ ಕ್ರೀಸ್‌ ಕಾಯ್ದುಕೊಂಡಿದ್ದಾರೆ. ಅವರ 3ನೇ ಶತಕದ ಇನ್ನಿಂಗ್ಸ್‌ನಲ್ಲಿ 12 ಬೌಂಡರಿ, 6 ಸಿಕ್ಸರ್‌ಗಳೂ ಒಳಗೊಂಡಿವೆ. ಹಾರ್ದಿಕ್‌ ರಾಜ್(ಔಟಾಗದೆ 35) ಕೂಡಾ ತಂಡಕ್ಕೆ ಆಸರೆಯಾಗಿದ್ದು, ಪಡಿಕ್ಕಲ್‌ ಜೊತೆಗೂಡಿ 2ನೇ ದಿನ ಕರ್ನಾಟಕವನ್ನು ಬೃಹತ್‌ ಮೊತ್ತದತ್ತ ಕೊಂಡೊಯ್ಯುವ ನಿರೀಕ್ಷೆ ಮೂಡಿಸಿದ್ದಾರೆ. ಸಾಯಿಕಿಶೋರ್‌ 3, ಅಜಿತ್‌ ರಾಮ್‌ 2 ವಿಕೆಟ್‌ ಪಡೆದಿದ್ದಾರೆ.ಸ್ಕೋರ್‌: ಮೊದಲ ಇನ್ನಿಂಗ್ಸ್‌ ಕರ್ನಾಟಕ 90 ಓವರ್‌ಗಳಲ್ಲಿ 288/5(ಮೊದಲ ದಿನದಂತ್ಯಕ್ಕೆ)(ದೇವದತ್‌ 151*, ಸಮರ್ಥ್‌ 57, ಹಾರ್ದಿಕ್‌ ರಾಜ್ 35*, ಕಿಶೋರ್‌ 3-94)---3ನೇ ಶತಕಈ ಬಾರಿ ಟೂರ್ನಿಯಲ್ಲಿ ಪಡಿಕ್ಕಲ್‌ 3ನೇ ಶತಕ ಬಾರಿಸಿದರು. ಪಂಜಾಬ್ ವಿರುದ್ಧ 193, ಗೋವಾ ವಿರುದ್ಧ 103 ರನ್‌ ಕಲೆಹಾಕಿದ್ದರು. ಒಟ್ಟಾರೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿದು ಅವರ 6ನೇ ಶತಕ.--ಪಡಿಕ್ಕಲ್‌ ನಾನ್‌ಸ್ಟಾಪ್‌ಅವಕಾಶಕ್ಕಾಗಿ ಭಾರತ ತಂಡದ ಕದ ತಟ್ಟುತ್ತಿರುವ ಪಡಿಕ್ಕಲ್‌ ದೇಸಿ ಕ್ರಿಕೆಟ್‌ನಲ್ಲಿ ಅಭೂತಪೂರ್ವ ಪ್ರದರ್ಶನ ನೀಡುತ್ತಿದ್ದಾರೆ. ಈ ಬಾರಿ ರಣಜಿಯಲ್ಲಿ ಅವರು 5 ಇನ್ನಿಂಗ್ಸ್‌ಗಳಲ್ಲಿ 3 ಶತಕ ಒಳಗೊಂಡ 520 ರನ್‌ ಕಲೆಹಾಕಿದ್ದಾರೆ. ಇತ್ತೀಚೆಗಷ್ಟೇ ಕೊನೆಗೊಂಡ ವಿಜಯ್‌ ಹಜಾರೆ ಏಕದಿನದಲ್ಲಿ ಅವರು 5 ಪಂದ್ಯಗಳಲ್ಲಿ 155ರ ಸರಾಸರಿಯಲ್ಲಿ 465 ರನ್‌ ಸಿಡಿಸಿದ್ದರು. ಇದರಲ್ಲಿ 2 ಶತಕ, 3 ಅರ್ಧಶತಕಗಳೂ ಒಳಗೊಂಡಿವೆ.-151 ರನ್‌216 ಎಸೆತ12 ಬೌಂಡರಿ6 ಸಿಕ್ಸರ್‌---ಪೂಜಾರ, ಪೃಥ್ವಿಶತಕ ಸಂಭ್ರಮಭಾರತ ತಂಡದಿಂದ ಹೊರಬಿದ್ದಿರುವ ಹಿರಿಯ ಬ್ಯಾಟರ್‌ ಚೇತೇಶ್ವರ್‌ ಪೂಜಾರ ರಣಜಿಯಲ್ಲಿ ಮತ್ತೊಂದು ಶತಕ ಬಾರಿಸಿದ್ದಾರೆ. ಸೌರಾಷ್ಟ್ರ ಪರ ಆಡುತ್ತಿರುವ ಪೂಜಾರ ಶುಕ್ರವಾರ ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ 110 ರನ್‌ ಸಿಡಿಸಿದರು. ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಜಾರ್ಖಂಡ್‌ ವಿರುದ್ಧ 243 ರನ್‌ ಚಚ್ಚಿದ್ದರು. ಇದೇ ವೇಳೆ ಮುಂಬೈ ಬ್ಯಾಟರ್‌ ಪೃಥ್ವಿ ಶಾ, ಛತ್ತೀಸ್‌ಗಢ ವಿರುದ್ಧ ಅಮೋಘ 159 ರನ್‌ ಸಿಡಿಸಿದರು.