ಟಿ20: ರನ್‌ ಮಳೆಯಲ್ಲಿ ಆಸ್ಟ್ರೇಲಿಯಾ ಮುಂದೆ ಜಾರಿ ಬಿದ್ದ ವಿಂಡೀಸ್‌ ಪಡೆ

| Published : Feb 10 2024, 01:45 AM IST / Updated: Feb 10 2024, 09:20 AM IST

ಟಿ20: ರನ್‌ ಮಳೆಯಲ್ಲಿ ಆಸ್ಟ್ರೇಲಿಯಾ ಮುಂದೆ ಜಾರಿ ಬಿದ್ದ ವಿಂಡೀಸ್‌ ಪಡೆ
Share this Article
  • FB
  • TW
  • Linkdin
  • Email

ಸಾರಾಂಶ

ಡೇವಿಡ್‌ ವಾರ್ನರ್‌ ಹಾಗೂ ಆ್ಯಡಂ ಜಂಪಾ ಅಭೂತಪೂರ್ವ ಪ್ರದರ್ಶನದ ನೆರವಿನಿಂದ ವೆಸ್ಟ್‌ ಇಂಡೀಸ್‌ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿದ ಆಸ್ಟ್ರೇಲಿಯಾ 11 ರನ್‌ ಜಯ ಸಾಧಿಸಿದೆ.

ಹೋಬರ್ಟ್‌: ಡೇವಿಡ್‌ ವಾರ್ನರ್‌ ಹಾಗೂ ಆ್ಯಡಂ ಜಂಪಾ ಅಭೂತಪೂರ್ವ ಪ್ರದರ್ಶನದ ನೆರವಿನಿಂದ ವೆಸ್ಟ್‌ ಇಂಡೀಸ್‌ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿದ ಆಸ್ಟ್ರೇಲಿಯಾ 11 ರನ್‌ ಜಯ ಸಾಧಿಸಿದೆ. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ ಆಸೀಸ್‌ 1-0 ಮುನ್ನಡೆ ಸಾಧಿಸಿತು.

36 ಎಸೆತಗಳಲ್ಲಿ 70 ರನ್‌ ಬಾರಿಸಿದ ಡೇವಿಡ್‌ ವಾರ್ನರ್‌ ಹಾಗೂ 17 ಎಸೆತಗಳಲ್ಲಿ ಔಟಾಗದೆ 37 ರನ್‌ ಗಳಿಸಿದ ಟಿಮ್‌ ಡೇವಿಡ್‌ ಆಸೀಸ್‌ ಬೃಹತ್‌ ಮೊತ್ತ ಗಳಿಸಲು ನೆರವಾದರು. ಈ ಮೂಲಕ ಆಸ್ಟ್ರೇಲಿಯಾ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 213 ರನ್‌ ಗಳಿಸಿತು. 

ಬೃಹತ್‌ ಗುರಿ ಬೆನ್ನತ್ತಿದ ವಿಂಡೀಸ್‌ಗೆ ಬ್ರೆಂಡಾನ್‌ ಕಿಂಗ್‌(53), ಜಾನ್ಸನ್‌ ಚಾರ್ಲ್ಸ್‌ (42) ಉತ್ತಮ ಆರಂಭ ಒದಗಿಸಿದ ಹೊರತಾಗಿಯೂ 8 ವಿಕೆಟ್‌ಗೆ 202 ರನ್‌ ಗಳಿಸಲಷ್ಟೆ ಶಕ್ತವಾಯಿತು. 

ಕೊನೆಯಲ್ಲಿ ಜೇಸನ್‌ ಹೋಲ್ಡರ್‌ 15 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್‌ನೊಂದಿಗೆ ಔಟಾಗದೆ 34 ರನ್‌ ಸಿಡಿಸಿದರೂ ತಂಡಕ್ಕೆ ಗೆಲುವು ಸಿಗಲಿಲ್ಲ. ವಿಂಡೀಸ್‌ನ ಪ್ರಮುಖ ಬ್ಯಾಟರ್‌ಗಳಿಗೆ ಪೆವಿಲಿಯನ್ ಹಾದಿ ತೋರಿದ ಆ್ಯಡಂ ಜಂಪಾ 3 ವಿಕೆಟ್‌ ಪಡೆದು ಗೆಲುವಿಗೆ ಮಹತ್ವದ ಕಾಣಿಕೆ ನೀಡಿದರು.