ಸಾರಾಂಶ
ಉದ್ಘಾಟನಾ ಆವೃತ್ತಿಯ Para Khelo India ಕ್ರೀಡಾಕೂಟದಲ್ಲಿ ಕರ್ನಾಟಕಕ್ಕೆ 6ನೇ ಚಿನ್ನದ ಪದಕ ದೊರೆತಿದೆ. ಪುರುಷರ ಪವರ್-ಲಿಫ್ಟಿಂಗ್‌ನ 88 ಕೆ.ಜಿ. ವಿಭಾಗದಲ್ಲಿ ರಾಜ್ಯದ Sandesh B G ಚಿನ್ನದ ಪದಕ ಹೆಕ್ಕಿದ್ದಾರೆ.
ನವದೆಹಲಿ: ಉದ್ಘಾಟನಾ ಆವೃತ್ತಿಯ ಪ್ಯಾರಾ ಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ ಕರ್ನಾಟಕಕ್ಕೆ 6ನೇ ಚಿನ್ನದ ಪದಕ ದೊರೆತಿದೆ. ಪುರುಷರ ಪವರ್-ಲಿಫ್ಟಿಂಗ್‌ನ 88 ಕೆ.ಜಿ. ವಿಭಾಗದಲ್ಲಿ ರಾಜ್ಯದ ಸಂದೇಶ್ ಬಿ.ಜಿ. ಚಿನ್ನದ ಪದಕ ಹೆಕ್ಕಿದ್ದಾರೆ. ಗುರುವಾರ ನಡೆದ ಸ್ಪರ್ಧೆಯಲ್ಲಿ ಅವರು 171 ಕೆ.ಜಿ. ಭಾರ ಎತ್ತಿ ಸ್ವರ್ಣಕ್ಕೆ ಮುತ್ತಿಟ್ಟರು. 145 ಕೆ.ಜಿ. ತೂಕ ಎತ್ತಿದ ದೆಹಲಿಯ ಜಗ್ಮೋಹನ್‌ಗೆ ಬೆಳ್ಳಿ, 140 ಕೆ.ಜಿ. ಭಾರ ಎತ್ತಿದ ಗುಜರಾತ್‌ನ ದಿವ್ಯೇಶ್‌ಗೆ ಕಂಚು ದೊರೆಯಿತು.
ಕರ್ನಾಟಕ 6 ಚಿನ್ನ, ತಲಾ 8 ಬೆಳ್ಳಿ ಹಾಗೂ ಕಂಚಿನೊಂದಿಗೆ ಒಟ್ಟು 22 ಪದಕ ಜಯಿಸಿ ಪದಕ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ. 34 ಚಿನ್ನ, 36 ಬೆಳ್ಳಿ, 18 ಕಂಚಿನೊಂದಿಗೆ 88 ಪದಕ ಗೆದ್ದಿರುವ ಹರ್ಯಾಣ ಮೊದಲ ಸ್ಥಾನ ಪಡೆದಿದೆ.