ಡಬ್ಲ್ಯುಪಿಎಲ್‌: ಮುಂಬೈ ಇಂಡಿಯನ್ಸ್‌ ವಿರುದ್ಧ ಯು.ಪಿ.ವಾರಿಯರ್ಸ್‌ಗೆ 7 ವಿಕೆಟ್‌ ಜಯ

| Published : Feb 29 2024, 02:03 AM IST

ಡಬ್ಲ್ಯುಪಿಎಲ್‌: ಮುಂಬೈ ಇಂಡಿಯನ್ಸ್‌ ವಿರುದ್ಧ ಯು.ಪಿ.ವಾರಿಯರ್ಸ್‌ಗೆ 7 ವಿಕೆಟ್‌ ಜಯ
Share this Article
  • FB
  • TW
  • Linkdin
  • Email

ಸಾರಾಂಶ

2ನೇ ಆವೃತ್ತಿಯ ಮಹಿಳಾ ಪ್ರೀಮಿಯರ್‌ ಲೀಗ್‌ ಟಿ20 ಟೂರ್ನಿಯಲ್ಲಿ ಯು.ಪಿ.ವಾರಿಯರ್ಸ್‌ಗೆ ಮೊದಲ ಗೆಲುವು. ಮುಂಬೈ ವಿರುದ್ಧ 7 ವಿಕೆಟ್‌ ಜಯ. ಈ ಆವೃತ್ತಿಯಲ್ಲಿ ಮೊದಲ ಸೋಲು ಕಂಡ ಹಾಲಿ ಚಾಂಪಿಯನ್‌ ಮುಂಬೈ.

ಕನ್ನಡಪ್ರಭ ವಾರ್ತೆ ಬೆಂಗಳೂರು

2ನೇ ಆವೃತ್ತಿ ವುಮೆನ್ಸ್‌ ಪ್ರೀಮಿಯರ್‌ ಲೀಗ್‌ (ಡಬ್ಲ್ಯುಪಿಎಲ್‌)ನಲ್ಲಿ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಮೊದಲ ಸೋಲು ಅನುಭವಿಸಿದೆ.

ಮೊದಲೆರಡು ಪಂದ್ಯಗಳಲ್ಲಿ ಜಯಭೇರಿ ಬಾರಿಸಿದ್ದ ಮುಂಬೈ, ಬುಧವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಯು.ಪಿ.ವಾರಿಯರ್ಸ್‌ ವಿರುದ್ಧ 7 ವಿಕೆಟ್‌ ಸೋಲು ಅನುಭವಿಸಿತು. ಮೊದಲೆರಡು ಪಂದ್ಯಗಳಲ್ಲಿ ಸೋತಿದ್ದ ಯು.ಪಿ.ಗೆ ಇದು ಮೊದಲು ಜಯ

ಹರ್ಮನ್‌ಪ್ರೀತ್‌ ಕೌರ್‌ ಅನುಪಸ್ಥಿತಿಯಲ್ಲಿ ತಂಡವನ್ನು ನಥಾಲಿ ಸ್ಕೀವರ್‌ ಮುನ್ನಡೆಸಿದರು. ಮೊದಲು ಬ್ಯಾಟ್‌ ಮಾಡಿದ ಮುಂಬೈ 20 ಓವರಲ್ಲಿ 6 ವಿಕೆಟ್‌ಗೆ 161 ರನ್‌ ಕಲೆಹಾಕಿತು.

ಹೇಯ್ಲಿ ಮ್ಯಾಥ್ಯೂಸ್ 55 ರನ್‌ ಸಿಡಿಸಿ ತಂಡಕ್ಕೆ ನೆರವಾದರು. ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಯು.ಪಿ.ಗೆ ಕಿರಣ್‌ ನವ್ಗೀರೆ ಹಾಗೂ ನಾಯಕಿ ಅಲೀಸಾ ಹೀಲಿ ಸ್ಫೋಟಕ ಆರಂಭ ಒದಗಿಸಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 9.1 ಓವರಲ್ಲಿ 94 ರನ್‌ ಸೇರಿಸಿದರು.

ಕೇವಲ 25 ಎಸೆತದಲ್ಲಿ ಅರ್ಧಶತಕ ಬಾರಿಸಿದ ಕಿರಣ್‌, 31 ಎಸೆತದಲ್ಲಿ 6 ಬೌಂಡರಿ, 4 ಸಿಕ್ಸರ್‌ಗಳೊಂದಿಗೆ 57 ರನ್‌ ಸಿಡಿಸಿದರು. ಅಲೀಸಾ 33 ರನ್‌ ಕೊಡುಗೆ ನೀಡಿದರು. ಗ್ರೇಸ್‌ ಹ್ಯಾರಿಸ್‌ ಔಟಾಗದೆ 38, ದೀಪ್ತಿ ಶರ್ಮಾ ಔಟಾಗದೆ 27 ರನ್‌ ಚಚ್ಚಿ ತಂಡವನ್ನು ಇನ್ನೂ 3.3 ಓವರ್‌ ಬಾಕಿ ಇರುವಂತೆಯೇ ಗೆಲ್ಲಿಸಿದರು. ಸ್ಕೋರ್‌: ಮುಂಬೈ 20 ಓವರಲ್ಲಿ 161/6 (ಮ್ಯಾಥ್ಯೂಸ್‌ 55, ಯಸ್ತಿಕಾ 26, ಗ್ರೇಸ್‌ 1-20), ಯು.ಪಿ. 16.3 ಓವರಲ್ಲಿ 163/3 (ಕಿರಣ್‌ 57, ಗ್ರೇಸ್‌ 33*, ಇಸ್ಸಿ 2-30)ಇಂದಿನ ಪಂದ್ಯ: ಆರ್‌ಸಿಬಿ vs ಡೆಲ್ಲಿ, ಸಂಜೆ 7.30ಕ್ಕೆ