ಕರಾವಳಿಯ 35 ಕರಾಟೆಪಟುಗಳಿಗೆ ಕಪ್ಪುಪಟ್ಟಿ

| Published : May 07 2024, 01:01 AM IST

ಸಾರಾಂಶ

ಉಡುಪಿ ದೊಡ್ಡಣ್ಣಗುಡ್ಡೆ ಜನತಾ ವ್ಯಾಯಾಮ ಶಾಲೆಯಲ್ಲಿ 2024ನೇ ಸಾಲಿನ ಕರಾಟೆ ಕಪ್ಪು ಪಟ್ಟಿ ವಿಭಾಗದ ಪರೀಕ್ಷೆಯು ನಡೆಯಿತು. ಸುಮಾರು 35 ಕರಾಟೆ ವಿದ್ಯಾರ್ಥಿಗಳು ಕಪ್ಪು ಪಟ್ಟಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಕರಾಟೆ ಬುಡೋಕಾನ್ ಇಂಟರ್ನ್ಯಾಷನಲ್ ವತಿಯಿಂದ ಇತ್ತೀಚೆಗೆ ಕೊಬುಡೊ ಬುಡೋಕಾನ್ ಕರಾಟೆ ಡೊ ಅಸೋಸಿಯೇಷನ್ ಕರ್ನಾಟಕ ಇದರ ಸಹಭಾಗಿತ್ವದಲ್ಲಿ ಉಡುಪಿ ದೊಡ್ಡಣ್ಣಗುಡ್ಡೆ ಜನತಾ ವ್ಯಾಯಾಮ ಶಾಲೆಯಲ್ಲಿ 2024ನೇ ಸಾಲಿನ ಕರಾಟೆ ಕಪ್ಪು ಪಟ್ಟಿ ವಿಭಾಗದ ಪರೀಕ್ಷೆಯು ನಡೆಯಿತು.

ಕಾರ್ಯಕ್ರಮವನ್ನು ಸಂಸ್ಥೆಯ ಗೌರವ ಅಧ್ಯಕ್ಷ ಡಾ. ಎನ್.ಬಿ. ವಿಜಯ ಬಲ್ಲಾಳ್ ಉದ್ಘಾಟಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಸ್ಥಳೀಯ ನಗರಸಭಾ ಸದಸ್ಯರಾದ ಶ್ರೀ ಪ್ರಭಾಕರ್ ಪೂಜಾರಿ, ಯಕ್ಷಗಾನ ಕಲಾಕೇಂದ್ರ ಗುಂಡಿಬೈಲು ಇದರ ಅಧ್ಯಕ್ಷರಾದ ಶ್ರೀ ಬಾಬು ಗೌಡ, ವ್ಯಾಯಾಮ ಶಾಲೆಯ ಅಧ್ಯಕ್ಷರಾದ ಶ್ರೀ ರಾಮದಾಸ್ ಶೆಟ್ಟಿ, ಬುಡೋಕಾನ್ ಕರಾಟೆಯ ಏಷ್ಯದ ಮುಖ್ಯ ಪರಿವೀಕ್ಷಕರಾದ ಬಿ. ಪರಮೇಶ್ ಅವರು ಉಪಸ್ಥಿತರಿದ್ದರು.

ಈ ಸಂಧರ್ಭದಲ್ಲಿ ಸಂಸ್ಥೆಯ ಮುಖ್ಯ ಶಿಕ್ಷಕರಾದ ಕ್ಯೋಷಿ ರವಿ ಕುಮಾರ್ ಉದ್ಯಾವರ, ಶಿಹಾನ್ ಹರ್ಷ ಭಾಗವತ್, ಶಿಹಾನ್ ಸಚಿನ್ ಪಿತ್ರೋಡಿ, ಶಿಹಾನ್ ಸೋಮನಾಥ್, ಶಿಹಾನ್ ದೀಪಕ್ ಪಿರೇರ, ಡಾ. ಅನೂಪ್ ಪೂಜಾರಿ, ಸೆನ್ಸಾಯಿ ಸೀತಾರಾಮ್ ಪೂಜಾರಿ ಉಪಸ್ಥಿತರಿದ್ದರು. ಸುಮಾರು 35 ಕರಾಟೆ ವಿದ್ಯಾರ್ಥಿಗಳು ಕಪ್ಪು ಪಟ್ಟಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದರು.