ಸಾಲಬಾಧೆಗೆ ನೇಣಿಗೆ ಶರಣಾದ ರೈತ

| Published : May 07 2024, 01:04 AM IST

ಸಾರಾಂಶ

ಸಾಲಬಾಧೆಗೆ ಹೆದರಿ ಮನನೊಂದ ರೈತ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಕಬ್ಬಗೆರೆ ಗೊಲ್ಲರಹಟ್ಟಿ ಗ್ರಾಮದಲ್ಲಿ ತಡರಾತ್ರಿ ನೆಡೆದಿದೆ.

ಕನ್ನಡಪ್ರಭ ವಾರ್ತೆ ಕೊರಟಗೆರೆ

ಸಾಲಬಾಧೆಗೆ ಹೆದರಿ ಮನನೊಂದ ರೈತ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಕಬ್ಬಗೆರೆ ಗೊಲ್ಲರಹಟ್ಟಿ ಗ್ರಾಮದಲ್ಲಿ ತಡರಾತ್ರಿ ನೆಡೆದಿದೆ.ತಾಲೂಕಿನ ಕಬ್ಬಗೆರೆ ಗ್ರಾಮದ ರಾಜಣ್ಣ (38) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಮೃತ ರೈತನ ಜಮೀನಿನಲ್ಲಿ ಸುಮಾರು 5 ಬೋರ್‌ವೆಲ್ ಕೊರಸಿದರೂ ನೀರು ಸಿಗದೆ ಇರುವ ಕಾರಣ ಆತ್ಮತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ರೈತ ಬೋರ್‌ವೆಲ್ ಕೊರೆಸಲು ಸುಮಾರು 12 ಲಕ್ಷ ರು. ಅಧಿಕ ಸಾಲ ಮಾಡಿಕೊಂಡಿದ್ದನು. ಜನರಲ್ಲಿ ಕೈ ಸಾಲ ಹಾಗೂ ಮೈಕ್ರೋ ಫೈನಾಸ್‌ನಲ್ಲಿ ಸಾಲ ಪಡೆದುಕೊಂಡಿದ್ದಾನೆ. ಮಾಡಿದ ಸಾಲ ತಿರಿಸಲು ಯಾವುದೇ ಮಾರ್ಗ ಇಲ್ಲ ಎಂದು ಮನನೊಂದು ತನ್ನ ಜಮೀನಿನಲ್ಲಿರುವ ಹುಣಸೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೃಷಿ ಅಧಿಕಾರಿ, ಸಿಪಿಐ ಅನಿಲ್, ಪಿಎಐ ಮಂಜುನಾಥ್ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.