ಕಾಂಗ್ರೆಸ್‌ ಗ್ಯಾರಂಟಿ ಬಡವರಿಗೆ ಸಹಕಾರಿ

| Published : May 06 2024, 12:30 AM IST

ಸಾರಾಂಶ

ಕಾಂಗ್ರೆಸ್‌ ಸರ್ಕಾರದ 5 ಗ್ಯಾರಂಟಿಗಳ ಮೂಲಕ ಒಂದು ಕುಟುಂಬಕ್ಕೆ ₹5000ದಂತೆ ವರ್ಷಕ್ಕೆ ₹ 60 ಸಾವಿರ ನೀಡುತ್ತಿದೆ, ನಿಮ್ಮ ಸಂಸಾರದ ಅಡಚಣೆ ನೀಗಿಸುವುದಕ್ಕಾಗಿ, ಪ್ರತಿ ತಿಂಗಳು ನಿಮ್ಮ ಖಾತೆಗಳಿಗೆ ನೇರವಾಗಿ ಜಮಾ ಮಾಡಲಾಗುತ್ತಿದೆ

ಮುಂಡರಗಿ: ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿ ಯೋಜನೆಗಳಿಂದ 1.10 ಕೋಟಿ ಬಡ ಕುಟುಂಬಗಳು ಬಡತನ ರೇಖೆಯಿಂದ ಮೇಲೆ ಬಂದಿವೆ ಎಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಭಾನುವಾರ ಪಟ್ಟಣದ ನಾಡಗೌಡ್ರ ವಾಡೆಯಲ್ಲಿ ಹಾವೇರಿ-ಗದಗ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಪರ ನಡೆದ ಬೃಹತ್ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಕಾಂಗ್ರೆಸ್‌ ಸರ್ಕಾರದ 5 ಗ್ಯಾರಂಟಿಗಳ ಮೂಲಕ ಒಂದು ಕುಟುಂಬಕ್ಕೆ ₹5000ದಂತೆ ವರ್ಷಕ್ಕೆ ₹ 60 ಸಾವಿರ ನೀಡುತ್ತಿದೆ, ನಿಮ್ಮ ಸಂಸಾರದ ಅಡಚಣೆ ನೀಗಿಸುವುದಕ್ಕಾಗಿ, ಪ್ರತಿ ತಿಂಗಳು ನಿಮ್ಮ ಖಾತೆಗಳಿಗೆ ನೇರವಾಗಿ ಜಮಾ ಮಾಡಲಾಗುತ್ತಿದೆ. ಇದುವರೆಗೂ ಯಾವ ಪಕ್ಷವೂ ಮಹಿಳೆಯರ ಸಮಸ್ಯೆ ಆಲಿಸಿ, ಅವರಿಗೆ ನೇರವಾಗಿ ಹಣಕಾಸಿನ ಸಹಾಯ ಮಾಡಲಿಲ್ಲ. ಕಾಂಗ್ರೆಸ್ ಮೊಟ್ಟಮೊದಲ ಬಾರಿಗೆ ರಾಜ್ಯದಲ್ಲಿ ಗ್ಯಾರಂಟಿ ಯೋಜನೆ ಜಾರಿಗೆ ತರುವ ಮೂಲಕ ನಮ್ಮ ರಾಷ್ಟ್ರದಲ್ಲಿ ಮಾತ್ರವಲ್ಲ, ಜಗತ್ತಿನಲ್ಲಿ ದಾಖಲೆ ಮಾಡಿದೆ. ಇದರಿಂದ ಬಡ ಕುಟುಂಬಗಳಲ್ಲಿದ್ದ ಅಡಚಣೆ ಕಡಿಮೆ ಮಾಡಿದ್ದೇವೆ ಎಂದರು.

ಧಾರವಾಡ ಶಾಸಕ ವಿನಯ ಕುಲಕರ್ಣಿ ಮಾತನಾಡಿ, ಈ ದೇಶದ ಭವಿಷ್ಯ ನಿರ್ಮಾಣ ಮಾಡುವುದು ನಿಮ್ಮ ಕೈಯಲ್ಲಿದೆ. ಮೋದಿ ಅವರು 10 ವರ್ಷಗಳ ಹಿಂದೆ ಹೇಳಿದ ಪ್ರತಿಯೊಬ್ಬರ ಖಾತೆಗೆ ₹ 15 ಲಕ್ಷ ಜಮಾ ಮಾಡುವುದು, ಪ್ರತಿವರ್ಷ ಯುವಕರಿಗೆ 2 ಕೋಟಿ ಉದ್ಯೋಗ ಸೃಷ್ಠಿ ಮಾಡುವುದು, ರೈತರ ಆದಾಯ ದ್ವಿಗುಣ ಮಾಡುವುದು ಸೇರಿದಂತೆ ಯಾವುದೇ ಭರವಸೆಗಳು ಜಾರಿಗೆ ಬಂದಿಲ್ಲ. ಈ ಚುನಾವಣೆಯಲ್ಲಿಯೂ ಅವರು ಹೇಳಿದ ಯಾವುವೂ ಜಾರಿಯಾಗುವುದಿಲ್ಲ ಎಂದರು.

ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ಶಾಸಕ ಜಿ.ಎಸ್. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಗದಗ-ಹಾವೇರಿ ಲೋಕಸಭಾ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ, ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ರಾಮಣ್ಣ ಲಮಾಣಿ, ಟಿ. ಈಶ್ವರ, ವೈ.ಎನ್. ಗೌಡರ್, ಎಸ್.ಡಿ. ಮಕಾಂದಾರ, ವಾಸಣ್ಣ ಕುರುಡಗಿ, ರಾಮಚಂದ್ರ ಕಲಾಲ್, ನಬೀಸಾಬ್ ಕೆಲೂರು ಮಾತನಾಡಿದರು.

ಜಿ.ಎಸ್. ಗಡ್ಡದೇವರಮಠ, ವಿ.ಎಲ್. ನಾಡಗೌಡ್ರ, ಸುಜಾತಾ ದೊಡ್ಡಮನಿ, ರುದ್ರಗೌಡ ಪಾಟೀಲ, ಎಸ್.ಡಿ. ಮಕಾಂದಾರ, ಹೇಮಂತಗೌಡ ಪಾಟೀಲ, ಶೋಭಾ ಮೇಟಿ, ಸೀತಾ ಬಸಾಪುರ, ಪೂಜಾ ಕಮ್ಮಾರ, ಎಂ.ಯು. ಮಕಾಂದಾರ್, ಡಿ.ಎಂ. ಕಾತರಕಿ, ಸುರೇಶ ಮಾಗಡಿ, ಮಂಜುನಾಥ ಮುಂಡವಾಡ, ಮದರಸಾಬ್ ಸಿಂಗನಮಲ್ಲಿ, ಕೆ.ಎಂ. ಸೈಯದ್, ಡಾ. ಸಂಗಮೇಶ ಕೊಳ್ಳಿ, ಅಂದಾನಗೌಡ ಪಾಟೀಲ, ಮಹ್ಮದ ರಫೀಕ ಮುಲ್ಲಾ, ರಾಜಾಸಾಬ್ ಬೆಟಗೇರಿ, ಅಶೋಕ ಹುಬ್ಬಳ್ಳಿ, ರಾಜು ಡಾವಣಗೇರಿ, ಬಸವರಾಜ ದೇಸಾಯಿ, ನಬೀಸಾಬ್ ಕೆಲೂರು, ಸುನಿತಾ ಬಳ್ಳಾರಿ, ದಾವಲ್ ಮುಳುಗುಂದ ಇದ್ದರು.