ಕಾಂಗ್ರೆಸ್‌ನಲ್ಲಿ ಹಿಡಿತ ಸಾಧಿಸುತ್ತಿರುವ ಮಾಜಿ ಶಾಸಕ ಜಿ. ಎನ್‌. ನಂಜುಂಡಸ್ವಾಮಿ

| Published : May 07 2024, 01:05 AM IST

ಕಾಂಗ್ರೆಸ್‌ನಲ್ಲಿ ಹಿಡಿತ ಸಾಧಿಸುತ್ತಿರುವ ಮಾಜಿ ಶಾಸಕ ಜಿ. ಎನ್‌. ನಂಜುಂಡಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಕೊಳ್ಳೇಗಾಲ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಅನೇಕ ನಾಯಕರಿದ್ದರೂ ಆ ನಾಯಕರಿಗಿಂತ ರಾಜಕೀಯವಾಗಿ ಒಂದು ಹೆಜ್ಜೆ ಮುಂದೆ ಸಾಗುತ್ತಿದ್ದಾರೆ ಮಾಜಿ ಶಾಸಕ ಜಿ ಎನ್ ನಂಜುಂಡಸ್ವಾಮಿ.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಕೊಳ್ಳೇಗಾಲ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಅನೇಕ ನಾಯಕರಿದ್ದರೂ ಆ ನಾಯಕರಿಗಿಂತ ರಾಜಕೀಯವಾಗಿ ಒಂದು ಹೆಜ್ಜೆ ಮುಂದೆ ಸಾಗುತ್ತಿದ್ದಾರೆ ಮಾಜಿ ಶಾಸಕ ಜಿ ಎನ್ ನಂಜುಂಡಸ್ವಾಮಿ. ಹೌದು, ಕೊಳ್ಳೇಗಾಲ ಕ್ಷೇತ್ರದಲ್ಲಿ 2 ಬಾರಿ (1999ಮತ್ತು 2009ರ ಉಪಚುನಾವಣೆ) ಶಾಸಕರಾಗಿದ್ದ ಜಿ ಎನ್ ನಂಜುಂಡಸ್ವಾಮಿ ಪ್ರಾರಂಭದಲ್ಲಿ ರಾಜಕೀಯ ಜೀವನ ಆರಂಭಿಸಿದ್ದೆ ಬಿಜೆಪಿಯಿಂದ, ಆಗಿದ್ಯಾಗ್ಯೂ ಸಹಾ ನಂತರ ನೆಲೆ ಕಂಡು ಕೊಂಡಿದ್ದು ಕಾಂಗ್ರೆಸ್ ಮೂಲಕವೇ ಎಂಬುದು ಗಮನಾರ್ಹ ಸಂಗತಿ. ಒಟ್ಟಾರೆ ಒಮ್ಮೆ ಬಿಜೆಪಿ, ಮತ್ತೊಮ್ಮೆ ಕಾಂಗ್ರೆಸ್‌ನಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಕೊಳ್ಳೇಗಾಲ ಕ್ಷೇತ್ರದಲ್ಲಿ 59 ಸಾವಿರಕ್ಕೂ ಅಧಿಕ ಮತಗಳಿಂದ ಶಾಸಕರಾಗಿ ಎ. ಆರ್ ಕೃಷ್ಣಮೂರ್ತಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ. ಇನ್ನು ಕಳೆದ ಬಾರಿ ವಿಧಾನಸಭೆಗೆ ಬಿಜೆಪಿಯಿಂದ ಟಿಕೆಟ್ ವಂಚಿತರಾಗಿ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಂಡರು. ಅದಕ್ಕೂ ಮುನ್ನ ಮಾಜಿ ಶಾಸಕ ಎಸ್ ಜಯಣ್ಣ ಕಾಂಗ್ರೆಸ್‌ನಲ್ಲೇ ಗುರುತಿಸಿಕೊಂಡಿದ್ದರು. ಕೃಷ್ಣಮೂರ್ತಿಗೆ ಟಿಕೆಟ್ ನೀಡುತ್ತಿದ್ದಂತೆ ನನಗೆ ಸೂಕ್ತ ಸ್ಥಾನ ಮಾನ ನೀಡಬೇಕು ಎಂದು ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಲಾಗಿತ್ತು. ಅದರಂತೆ ಈಗ ಜಯಣ್ಣಗೆ ಉಗ್ರಾಣ ನಿಗಮದ ಅಧ್ಯಕ್ಷಸ್ಥಾನ ದಕ್ಕಿರುವುದನ್ನ ಇಲ್ಲಿ ಸ್ಮರಿಸಬಹುದು.

ಎಐಸಿಸಿ ಅಧ್ಯಕ್ಷರ ಸಂಪರ್ಕ ಸಾಧಿಸಿ ಕೈ ಸೇರ್ಪಡೆ:

ಇನ್ನು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೇರಿದ್ದ ನಂಜುಂಡಸ್ವಾಮಿ ತಮ್ಮದೆ ದಾಟಿಯಲ್ಲಿ ತಮ್ಮ ರಾಜಕೀಯ ಗುರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಂಪರ್ಕ ಸಾಧಿಸಿ ಪ್ರಭಾವ ಬಳಿಸಿ ಕಾಂಗ್ರೆಸ್ ಸೇರಿದ್ದರು. ನಂತರ ಚಾಮರಾಜನಗರ ಲೋಕಸಭಾ ಚುನಾವಣೆಗೆ ಪ್ರಬಲ ಆಕಾಂಕ್ಷಿಯಾಗಿ ಟಿಕೆಟ್ ಪಡೆಯಲು ಪೈಪೋಟಿ ನಡೆಸಿದ್ದರು. ಅದರಂತೆ ಮಲ್ಲಿಕಾರ್ಜುನ ಖರ್ಗೆಯಿಂದಲೇ ಟಿಕೆಟ್ ಗಾಗಿ ಬಾರಿ ಪೈಪೋಟಿ ನಡೆಸಿದ್ದರು. ಟಿಕೆಟ್ ಕೈತಪ್ಪುತ್ತಿದ್ದಂತೆ ತಮ್ಮದೆ ಸೂಕ್ತ ಸ್ಥಾನ, ಮಾನಕ್ಕೆ ಒತ್ತಾಯಿಸಿದ್ದರು. ಅದರಂತೆ ಪಕ್ಷದಲ್ಲಿ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ಸ್ಥಾನವನ್ನು ಸಹಾ ತಮ್ಮದೆ ಪ್ರಭವದ ಮೂಲಕ ಗಿಟ್ಟಿಸಿದ್ದು ಸಹಾ ಸುಳ್ಳಲ್ಲ. ಇನ್ನು ಮಂತ್ರಿ ಸಚಿವ ಮಹದೇವಪ್ಪ ಅವರೇ ಜಿ ಎನ್ ನಂಜುಂಡಸ್ವಾಮಿ ಮುನಿಸು ಶಮನಗೊಳಿಸಿ ಸೂಕ್ತ ಸ್ಥಾನ ಮಾನ ನೀಡಲಾಗುವುದು,

ತಮ್ಮ ಪುತ್ರ ಸುನೀಲ್ ಬೋಸ್ ಗೆಲುವಿಗೆ ಶ್ರಮಿಸಿ ಎಂದು ಮನವಿ ಮಾಡುವ ಜೊತೆಗೆ ಮುನಿಸು ಶಮನ ಮಾಡಿದ್ದರು. ಈ ಬೆಳವಣಿಗೆ ಗಮನಿಸಿದರೆ ಅವರ ಪ್ರಭಾವ, ಶಕ್ತಿ ಎಷ್ಟು ಎಂಬುದು ವೇಧ್ಯವಾಗಲಿದೆ.

ಅದರಂತೆ ಈಗ ಅವರಿಗೆ ರಾಜ್ಯ ಉಪಾಧ್ಯಕ್ಷ ಸ್ಥಾನ ಮಾನ ಸಹಾ ದಕ್ಕಿದ್ದು ಪ್ರಸ್ತುತ ತಮ್ಮ ಬೆಂಬಲಿಗರಿಗೂ ಸಹಾ ಸೂಕ್ತ ಸ್ಥಾನ ಕೊಡಿಸುವಲ್ಲಿ ತಮ್ಮದೆ ದಾಟಿಯಲ್ಲಿ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ನಾಯಕರನ್ನು ಭೇಟಿ ಮಾಡುವ ಮೂಲಕ ಅವರ ಗಮನ ಸೆಳೆಯುವ ಚಾಣಾಕ್ಷ ಕೆಲಸ ಮಾಡುತ್ತಿದ್ದಾರೆ.

ಅದರಂತೆ ಈಗ ಅವರ ಪರಮಾಪ್ತರಾದ ಜಿ ಪಿ ಶಿವಕುಮಾರ್ ಅವರ ಧರ್ಮ ಪತ್ನಿ ಪಂಕಜಗೆ ರಾಜ್ಯ ಕಾಂಗ್ರೆಸ್ ಕಾಮಿ೯ಕ ವಿಭಾಗದ ಕಾಯ೯ದಶಿ೯ ಸ್ಥಾನ ಕೊಡಿಸುವಲ್ಲಿ ಯಶಸ್ವಿಯಾಗಿದ್ದು ಶೀಘ್ರದಲ್ಲೆ ಇನ್ನಷ್ಟು ತಮ್ಮ ಬೆಂಬಲಿಗರಿಗೆ ಸ್ಥಾನ, ಮಾನ ಕೊಡಿಸುವಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರ ಏಡೆ ತಾಕುವ ಕೆಲಸ ಮಾಡುತ್ತಿದ್ದಾರೆ. ಅದರಂತೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಸಹಾ ತಮ್ಮ ಆಪ್ತ ಬೆಂಬಲಿಗರಿಗೆ ಕೊಡಿಸಬೇಕು ಎಂಬ ಬಯಕೆ ಸಹಾ ಹೊಂದಿದ್ದು ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬುದು ಅವರ ಆಪ್ತರ ಅಭಿಪ್ರಾಯವೂ ಹೌದು. ಮುಂದಿನ ಟಿಕೆಟ್‌ಗಾಗಿಯೂ ಈಗಲೇ ಕಸರತ್ತು:

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜಯಣ್ಣರಿಗೆ ವಯಸ್ಸಿನ ಕಾರಣಕ್ಕಾಗಿ ಟಿಕೆಟ್ ಸಿಗಲ್ಲ, ಅದೆ ರೀತಿಯಲ್ಲಿ ಕೃಷ್ಣಮೂರ್ತಿಗೂ ಟಿಕೆಟ್ ಸಿಗುತ್ತಾ ಕಾದು ನೋಡಬೇಕು, ಆದರೆ ಜಿ ಎನ್ ನಂಜುಂಡಸ್ವಾಮಿ ಈಗಲೇ ಮುಂದಿನ ವಿಧಾನಸಭಾ ಚುನಾವಣೆಯ ವೇಳೆ ಟಿಕೆಟ್ ಗಿಟ್ಟಿಸಲು ಈಗಲೆ ಕಸರತ್ತು ಪ್ರಾರಂಭಿಸಿರುವುದು ಸುಳ್ಳಲ್ಲ, ಮುಂದಿನ ಚುನಾವಣೆ ವೇಳೆ ರೇಸ್ ನಲ್ಲಿ ಪ್ರಭಲ ಆಕಾಂಕ್ಷಿಯಾಗಿ ನಂಜುಂಡಸ್ವಾಮಿ ಪೈಪೋಟಿ ನೀಡುವುದು ವಾಸ್ತವ. ಅದಕ್ಕಾಗಿಯೇ ಈಗಿನಿಂದಲೇ ತಮ್ಮ ಬೆಂಬಲಿಗರಿಗೆ ಪಕ್ಷದಲ್ಲಿ ಸ್ಥಾನ, ಮಾನಕ್ಕಾಗಿ ಲಾಭಿ ನಡೆಸುತ್ತಿದ್ದಾರೆ. ಅದರಂತೆ ಹಲವಾರು ವರುಷಗಳಿಂದ ಒಬ್ಬರೇ (ತೋಟೇಶ್) ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸುತ್ತಿರುವುದರಿಂದ ಆ ಸ್ಥಾನವೂ ಸಹಾ ಕೆಂಗಣ್ಣು ಬೀರಿದ್ದು ತಮ್ಮ ಬೆಂಬಲಿಗರಿಗೆ ಕೊಡಿಸುವಲ್ಲಿ ಅವರು ಯಶಸ್ವಿ ಕಾಣುತ್ತಾರಾ ಕಾದು ನೋಡಬೇಕಿದೆ. ಬ್ಲಾಕ್ ಅಧ್ಯಕ್ಷ ತೋಟೇಶ್ ಸಹಾ ಪಕ್ಷದಲ್ಲಿ ತಮ್ಮದೆ ಹಿಡಿತ ಸಾಧಿಸಿ ಪ್ರಭಾವಿಯಾಗಿದ್ದಾರೆ. ಹಾಗಾಗಿ ಅವರ ಬದಲಾವಣೆಯಂತಹ ಕೆಲಸ ಜಿ ಎನ್ ನಂಜುಂಡಸ್ವಾಮಿ ಕೈಹಾಕಿದ್ದಾರೆ ಎಂಬ ಮಾತು ಸಹಾ ಪಕ್ಷದಲ್ಲೆ ಚರ್ಚೆಯಾಗುತ್ತಿದೆ. ಅಂದುಕೊಂಡಿದ್ದನ್ನ ಸಾಧಿಸುವ ಛಲಗಾರ

ಕೊಳ್ಳೇಗಾಲದ ಮಾಜಿ ಶಾಸಕ ನಂಜುಂಡಸ್ವಾಮಿ ಶಾಸಕರಾಗಿದ್ದ ವೇಳೆ ಅನೇಕ ಅಭಿವೃದ್ಧಿ ಕಾರ್ಯ ಕೈಗೊಂಡು ಮೆಚ್ಚುಗೆಗಳಿಸಿದ್ದರು, ಅಂದುಕೊಂಡಂತಹ ಕೆಲಸ ಸಾಧಿಸುವ ಹಠಗಾರರಾಗಿ ಗುರುತಿಸಿಕೊಂಡಿದ್ದರೂ ಮಾತ್ರವಲ್ಲ ನೇರ ನಿಷ್ಟೂರವಾದಿಯಾಗಿಯೂ ತಮ್ಮ ಕೆಲಸ ಸಾಧಿಸಿಕೊಳ್ಳುವ ಛಲಗಾರರಾಗಿದ್ದರು.

ಬಿಜೆಪಿಯಲ್ಲಿದ್ದ ವೇಳೆಯೂ ಸಹಾ ಬೆಂಬಲಿಗ ಶಿವಮೂರ್ತಿಗೆ ಎಪಿಎಂಸಿ ಸದಸ್ಯ ಸ್ಥಾನ ಸೇರಿದಂತೆ ಅನೇಕ ಬೆಂಬಲಿಗರಿಗೆ ಬಿಜೆಪಿ ಸರ್ಕಾರದಲ್ಲಿ ಸೂಕ್ತ ಸ್ಥಾನ ಮಾನ ಕೊಡಿಸಿದ ಖ್ಯಾತಿ ನಂಜುಂಡಸ್ವಾಮಿ ಅವರದ್ದಾಗಿತ್ತು.