ಜಿಲ್ಲೆಯ ಕೀಲು, ಮೂಳೆ ತಜ್ಞರಿಂದ ಉತ್ತಮ ಸೇವೆ: ಡಾ. ಮಂಜುನಾಥ್‌

| Published : May 06 2024, 12:31 AM IST

ಜಿಲ್ಲೆಯ ಕೀಲು, ಮೂಳೆ ತಜ್ಞರಿಂದ ಉತ್ತಮ ಸೇವೆ: ಡಾ. ಮಂಜುನಾಥ್‌
Share this Article
  • FB
  • TW
  • Linkdin
  • Email

ಸಾರಾಂಶ

ಯಡಪುರ ಸಿಮ್ಸ್ ಆಸ್ಪತ್ರೆ ಸಭಾಂಗಣದಲ್ಲಿ ಚಾಮರಾಜನಗರ ಆರ್ಥೋಪಿಡಿಕ್ ಸರ್ಜನ್ ಅಸೋಸಿಯೇಶನ್ ಹೆಸರಿನಲ್ಲಿ ನೂತನವಾಗಿ ಚಾಮರಾಜನಗರ ಜಿಲ್ಲೆಯ ಕೀಲು ಮತ್ತು ಮೂಳೆ ಶಸ್ತ್ರ ಚಿಕಿತ್ಸಕರ ಸಂಘಟನೆ ಉದ್ಘಾಟನೆ

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಜಿಲ್ಲೆಯಲ್ಲಿ ಕೀಲು ಮತ್ತು ಮೂಳೆಯ ತಜ್ಞರು ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ಇನ್ನು ಹೆಚ್ಚಿನ ವಿಷಯಗಳನ್ನು ತಿಳಿಯಲು ಸಂಘಟನೆಯು ಬಹಳ ಮುಖ್ಯವಾಗುತ್ತದೆ ಎಂದು ವೈದ್ಯಕೀಯ ಕಾಲೇಜಿನ ಡೀನ್ ಹಾಗೂ ನಿರ್ದೇಶಕ ಡಾ. ಮಂಜುನಾಥ್ ತಿಳಿಸಿದರು. ನಗರದ ಯಡಪುರ ಸಿಮ್ಸ್ ಆಸ್ಪತ್ರೆ ಸಭಾಂಗಣದಲ್ಲಿ ಚಾಮರಾಜನಗರ ಆರ್ಥೋಪಿಡಿಕ್ ಸರ್ಜನ್ ಅಸೋಸಿಯೇಶನ್ ಹೆಸರಿನಲ್ಲಿ ನೂತನವಾಗಿ ಚಾಮರಾಜನಗರ ಜಿಲ್ಲೆಯ ಕೀಲು ಮತ್ತು ಮೂಳೆ ಶಸ್ತ್ರ ಚಿಕಿತ್ಸಕರ ಸಂಘಟನೆಯನ್ನು ಉದ್ಘಾಟಿಸಿ ಮಾತನಾಡಿದರು. ನಮ್ಮ ಜಿಲ್ಲೆಯಲ್ಲಿ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಬಿಟ್ಟರೆ ಯಾವುದೇ ವೈದ್ಯಕೀಯ ಸಂಘಟನೆಗಳು ಇರಲಿಲ್ಲ. ವೈದ್ಯಕೀಯ ಕ್ಷೇತ್ರದಲ್ಲಿ ಸಂಘಟನೆಗಳ ಅವಶ್ಯಕತೆ , ಮುಂದುವರೆದ ಶಿಕ್ಷಣ, ರೋಗಿಗಳ ಉತ್ತಮ ಆರೈಕೆ ಹಾಗೂ ವೈದ್ಯಕೀಯ ಜ್ಞಾನದ ನಿರಂತರ ಕಲಿಕೆ ಮಹತ್ವವಾಗಿರುತ್ತದೆ ಎಂದು ತಿಳಿಸಿದರು.

ಚಾಮರಾಜನಗರ ಆರ್ಥೋಪಿಡಿಕ್ ಸಂಘಟನೆಯ ಪ್ರಥಮ ಅಧ್ಯಕ್ಷ ಕೊಳ್ಳೇಗಾಲದ ಡಾ. ಪದ್ಮಾಕ್ಷ ಮಾತನಾಡಿ, ಸಂಘನೆಯ ಮುಖಾಂತರ ಕೀಲು ಮತ್ತು ಮೂಳೆ ತಜ್ಞರುಗಳಿಗೆ ಹೆಚ್ಚಿನ ವಿಷಯಗಳನ್ನು ತಿಳಿಸಿಕೊಡುವ ಕಾರ್ಯಗಾರಗಳನ್ನು ರೂಪಿಸಲಾಗುವುದು. ಸಾರ್ವಜನಿಕರಿಗೆ ಅನುಕೂಲವಾಗುವಂತೆ ಉತ್ತಮ ಚಿಕಿತ್ಸೆಗಳನ್ನು ನೀಡಲು ಸಂಘವು ಸಹಕಾರಿಯಾಗಲಿದೆ ಎಂದರು.

ಆರ್ಥೋ ಜಿಲ್ಲಾ ಸಂಘಟನೆಯ ಕಾರ್ಯದರ್ಶಿ ಡಾ.ಶಿವಣ್ಣ ಮಾತನಾಡಿ, ಚಾಮರಾಜನಗರದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಹಲವಾರು ಮಹತ್ವದ ಬೆಳವಣಿಗೆಗಳು ಹಾಗಿದೆ. ಹತ್ತು ವರ್ಷಗಳ ಹಿಂದೇ ಜಿಲ್ಲೆಯಲ್ಲಿ ಕೇವಲ ಇಬ್ಬರು, ಮೂವರು ಕೀಲು ಮತ್ತು ಮೂಳೆ ತಜ್ಞರು ಇದ್ದರು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು, ಬೆಂಗಳೂರು ಆಸ್ಪತ್ರೆಗಳಿಗೆ ಕರೆದೊಯ್ಯಬೇಕಿತ್ತು. ಈಗ ಜಿಲ್ಲೆಯಲ್ಲಿ ೨೮ ಕೀಲು ಮತ್ತು ಮೂಳೆ ತಜ್ಞರು ಇದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ತಜ್ಞ ವೈದ್ಯರ ಸಂಘಟನೆಗಳು ದೊಡ್ಡ ನಗರಗಳಲ್ಲಿ ಇರುವ ಹಾಗೆ ನಮ್ಮ ಜಿಲ್ಲೆಯಲ್ಲೂ ಬರಲಿದೆ ಎಂದರು.

ಕಾರ್ಯಕ್ರಮದಲ್ಲಿ ಸಂಘಟನೆಯು ಉಪಾಧ್ಯಕ್ಷ ಡಾ.ರಾಜಶೇಖರ್, ವೈದ್ಯಕೀಯ ಅಧೀಕ್ಷಕ ಡಾ. ಕೃಷ್ಣಪ್ರಸಾದ್, ನಿವಾಸಿ ವೈದ್ಯ ಡಾ. ಎಂ. ಮಹೇಶ್, ಹಿರಿಯ ಪ್ರಾಧ್ಯಾಪಕ ಡಾ. ಮೃತ್ಯುಂಜಯ ಸಂಘನೆಯ ಖಜಾಂಚಿ ಡಾ. ರಾಘವೇಂದ್ರ ಹಾಗೂ ಚಾಮರಾಜನಗರ ಜಿಲ್ಲೆಯ ಕೀಲು ಮತ್ತು ಮೂಳೆ ತಜ್ಞರುಗಳು ಉಪಸ್ಥಿತರಿದ್ದರು.