ಸರಸ್ವತಿ ಪ್ರಭಾ ಪುರಸ್ಕಾರಕ್ಕೆ ಹಾಲಾಡಿ ಲಕ್ಷ್ಮೀದೇವಿ ಕಾಮತ್ ಆಯ್ಕೆ

| Published : May 07 2024, 01:03 AM IST

ಸರಸ್ವತಿ ಪ್ರಭಾ ಪುರಸ್ಕಾರಕ್ಕೆ ಹಾಲಾಡಿ ಲಕ್ಷ್ಮೀದೇವಿ ಕಾಮತ್ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಕೊಂಕಣಿಯಲ್ಲಿ ಉಪನ್ಯಾಸ, ಭಜನೆ, ಕುಂದಾಪುರ ಪರಿಸರದಲ್ಲಿ ಹಲವಾರು ಕೊಂಕಣಿ ಹಾಗೂ ಇತರ ಸಂಘಟನೆಗಳನ್ನು ಕಟ್ಟಿ ಬೆಳೆಸಿದ ಲಕ್ಷ್ಮೀದೇವಿ ಕಾಮತ್ ಅವರ ಸಾಧನೆಯನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಉಡುಪಿ

ಹುಬ್ಬಳ್ಳಿಯಿಂದ ಪ್ರಕಟಗೊಳ್ಳುವ ‘ಸರಸ್ವತಿ ಪ್ರಭಾ’ ಕೊಂಕಣಿ ಮಾಸಿಕ ಪತ್ರಿಕೆಯು ೨೦೨೨ರಿಂದ ಹಿರಿಯ ಕೊಂಕಣಿ ಭಾಷಾ ಸಾಧಕರಿಗೆ ನೀಡುವ ‘ಸರಸ್ವತಿ ಪ್ರಭಾ ಪುರಸ್ಕಾರ’ಕ್ಕೆ ೨೦೨೪ನೇ ಸಾಲಿನಲ್ಲಿ ಉಡುಪಿ ಜಿಲ್ಲೆಯ ಕುಂದಾಪುರದ ಹಾಲಾಡಿ ಲಕ್ಷ್ಮೀದೇವಿ ವಾಸುದೇವ ಕಾಮತ್ ಅವರನ್ನು ಆಯ್ಕೆ ಮಾಡಲಾಗಿದೆ.

ಕಳೆದ ಐದು ದಿವಸಗಳಿಂದ ಕೊಂಕಣಿ ಲೇಖನ, ಸಂಗೀತ, ನಾಟಕ ರಚನೆ ಮತ್ತು ನಿರ್ದೇಶನ, ಜಾನಪದ ಸಾಹಿತ್ಯಗಳ ಸಂಗ್ರಹ, ಕೊಂಕಣಿಯಲ್ಲಿ ಉಪನ್ಯಾಸ, ಭಜನೆ, ಕುಂದಾಪುರ ಪರಿಸರದಲ್ಲಿ ಹಲವಾರು ಕೊಂಕಣಿ ಹಾಗೂ ಇತರ ಸಂಘಟನೆಗಳನ್ನು ಕಟ್ಟಿ ಬೆಳೆಸಿದ ಲಕ್ಷ್ಮೀದೇವಿ ಕಾಮತ್ ಅವರ ಸಾಧನೆಯನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸರಸ್ವತಿ ಪ್ರಭಾ ಪತ್ರಿಕೆಯ ಸಂಪಾದಕ ಆರಗೋಡು ಸುರೇಶ ಶೆಣೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

೨೦೨೨ರ ಸಾಲಿನಲ್ಲಿ ಕೊಂಕಣಿ ಸಹಿತ ಕನ್ನಡ, ಇಂಗ್ಲಿಷ್ ಹಾಗೂ ಹಿಂದಿ ಭಾಷೆಗಳಲ್ಲಿ ೨೫ಕ್ಕಿಂತ ಅಧಿಕ ಸಾಹಿತ್ಯ ಕೃತಿಗಳನ್ನು ಬರೆದ ಡಾ.ಮೋಹನ ಜಿ. ಶೆಣೈ (80) ಮತ್ತು ಕೊಂಕಣಿ ಸಾಹಿತ್ಯ ಹಾಗೂ ರಂಗಕಲೆಗೆ ಅಪಾರ ಸೇವೆ ಸಲ್ಲಿಸಿ, ೩೦ಕ್ಕಿಂತ ಅಧಿಕ ನಾಟಕಗಳನ್ನು ಬರೆದ ಶಿರಸಿಯ ಅನಿಲ್ ಪೈ (75) ಇವರಿಗೆ, ೨೦೨೩ನೇ ಸಾಲಿನಲ್ಲಿ ಕೊಂಕಣಿಯ ಹೆಸರಾಂತ ಬರಹಗಾರ್ತಿ, ಕೊಂಕಣಿ ಜಾನಪದ ಸಾಹಿತ್ಯ ರಕ್ಷಕಿ, ೮ ಕೊಂಕಣಿ ಕೃತಿಗಳನ್ನು ಪ್ರಕಟಿಸಿರುವ ಶಿರಸಿಯ ಜಯಶ್ರೀ ನಾಯಕ ಎಕ್ಕಂಬಿ (77) ಅವರಿಗೆ ಸರಸ್ವತಿ ಪ್ರಭಾ ಪುರಸ್ಕಾರವನ್ನು ಪ್ರದಾನ ಮಾಡಲಾಗಿದೆ.