ಹೊಸಹೊಳಲ್ಲಿ ಸಂಭ್ರಮದಿಂದ ನಡೆದ ಹನುಮಂತೋತ್ಸವ

| Published : May 07 2024, 01:06 AM IST

ಹೊಸಹೊಳಲ್ಲಿ ಸಂಭ್ರಮದಿಂದ ನಡೆದ ಹನುಮಂತೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಮೆರವಣಿಗೆಯಲ್ಲಿ ಕೇರಳದ ಚೆಂಡೆವಾದ್ಯ, ಮಡಿಕೇರಿಯ ಡಿಜೆ ಪ್ರಜ್ವಲ್ ಅವರಿಂದ ಡಿಜೆ ಮ್ಯೂಸಿಕ್, ಲಕ್ಷ್ಮೀಸಾಗರದ ಕೇಂಪೆಗೌಡ ಅವರ ನಾಸಿಕ್ ಬ್ಯಾಂಡ್ ಮತ್ತು ಪಿಯೋನ, ತಮಟೆ ವಾದ್ಯ, ಹುಲಿ ವೇಷದಾರಿಗಳು, ಪಾಳೆಗಿರಿ ವೇಷದಾರಿಗಳು, ವಿವಿಧ ರೀತಿಯ ಮುಸುಕು ವೇಷಗಳನ್ನು ತೊಟ್ಟ ಯುವಕರು ಉತ್ತಮ ಕಲಾಪ್ರದರ್ಶನ ನೀಡಿ ಸಾರ್ವಜನಿಕರನ್ನು ರಂಜಿಸಿದರು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ತಾಲೂಕು ಹೊಸಹೊಳಲು ಗ್ರಾಮದಲ್ಲಿ ಕುರುಹಿನಶೆಟ್ಟಿ ಸಮಾಜದಿಂದ ಸಡಗರ-ಸಂಭ್ರಮದಿಂದ ಹನುಮಂತೋತ್ಸವ ಉತ್ಸವವು ನಡೆಯಿತು. ರಾಜ್ಯ ಆರ್.ಟಿ.ಓ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಪಾಲ್ಗೊಂಡು ದೇವರಿಗೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು.

ಕಳೆದ 15 ದಿನಗಳಿಂದ ಶ್ರೀರಾಮನ ಪಟ್ಟಾಭಿಷಕ ಮಹೋತ್ಸವದ ಅಂಗವಾಗಿ ರಾಮ ಮಂದಿರದಲ್ಲಿ ಪ್ರತಿದಿನ ಪೂಜಾ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿತ್ತು. ಅಂತಿಮವಾಗಿ ಭಾನುವಾರ ಸಂಜೆ ಹನುಮಂತೋತ್ಸವದ ಅಂಗವಾಗಿ ಹೊಸಹೊಳಲು ಗ್ರಾಮದ ವಿವಿಧ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆಯಲ್ಲಿ ಶ್ರೀಹನುಮಂತ ದೇವರ ವಿಗ್ರಹದ ಮೆರವಣಿಗೆಯನ್ನು ಸಂಭ್ರಮದಿಂದ ನಡೆಸಲಾಯಿತು.

ಮೆರವಣಿಗೆಯಲ್ಲಿ ಕೇರಳದ ಚೆಂಡೆವಾದ್ಯ, ಮಡಿಕೇರಿಯ ಡಿಜೆ ಪ್ರಜ್ವಲ್ ಅವರಿಂದ ಡಿಜೆ ಮ್ಯೂಸಿಕ್, ಲಕ್ಷ್ಮೀಸಾಗರದ ಕೇಂಪೆಗೌಡ ಅವರ ನಾಸಿಕ್ ಬ್ಯಾಂಡ್ ಮತ್ತು ಪಿಯೋನ, ತಮಟೆ ವಾದ್ಯ, ಹುಲಿ ವೇಷದಾರಿಗಳು, ಪಾಳೆಗಿರಿ ವೇಷದಾರಿಗಳು, ವಿವಿಧ ರೀತಿಯ ಮುಸುಕು ವೇಷಗಳನ್ನು ತೊಟ್ಟ ಯುವಕರು ಉತ್ತಮ ಕಲಾಪ್ರದರ್ಶನ ನೀಡಿ ಸಾರ್ವಜನಿಕರನ್ನು ರಂಜಿಸಿದರು. ಡಿಜೆ ಸಾಂಗ್ಸ್ ಗಳಿಗೆ ಯುವಕರು-ಯುವತಿಯರು ಕುಣಿದು ಕುಪ್ಪಳಿಸಿದರು. ಬಾಣ ಬಿರುಸುಗಳನ್ನು ಸಿಡಿಸುವ ಮೂಲಕ ಭಾನಂಗಲದಲ್ಲಿ ಚಿತ್ತಾರ ಮೂಡಿಸಲಾಯಿತು.

ಉತ್ಸವದಲ್ಲಿ ಆಸರೆ ಟ್ರಸ್ಟ್ ಅಧ್ಯಕ್ಷ ಎ.ಎಂ.ಬಸವರಾಜು, ಪುರಸಭೆ ಮಾಜಿ ಅಧ್ಯಕ್ಷ ನಟರಾಜ್, ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಆರ್.ಲೋಕೇಶ್, ಸದಸ್ಯರಾದ ಗಾಯಿತ್ರಿಸುಬ್ಬಣ್ಣ, ಎಚ್.ಎನ್.ಪ್ರವೀಣ್ ಕುಮಾರ್, ಸಹಕಾರ ಬ್ಯಾಂಕ್ ಸೊಸೈಟಿ ಅಧ್ಯಕ್ಷ ಮಂಜುನಾಥ್, ಸಮಾಜದ ಮುಖಂಡರಾದ ಜಿ. ಸೋಮಶೇಖರ್, ಆರ್.ಎಸ್.ಎಸ್ ಮಂಜುನಾಥ್, ಹನುಮಂತಶೆಟ್ಟಿ, ಲಾರಿ ಮಂಜುನಾಥ್, ಪುಟ್ಟರಾಜು, ಸಮಾಜಸೇವಕ ಆರ್.ಸೋಮಶೇಖರ್, ಉದ್ಯಮಿ ಮಂಜುನಾಥ್, ಹೆಚ್.ಕೆ.ಹರೀಶ್, ಉದಯ್, ಎಚ್.ಆರ್.ಮಂಜುನಾಥ್, ಕಿಕ್ಕೇರಿ ಅರುಣ್ ಕುಮಾರ್, ರವೀಂದ್ರ, ರಾಮಚಂದ್ರ ಮಿಲ್ ರಘು, ಚಂದನ್, ಸುಕನ್ಯಾರಂಗನಾಥ್ ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡಿದ್ದರು.