ನೀರಿಗಾಗಿ ಖಾಲಿ ಬಿಂದಿಗೆ ಹಿಡಿದು ಪ್ರತಿಟನೆ

| Published : May 06 2024, 12:32 AM IST

ನೀರಿಗಾಗಿ ಖಾಲಿ ಬಿಂದಿಗೆ ಹಿಡಿದು ಪ್ರತಿಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಗೌರಿಬಿದನೂರು ನಗರಸಭೆಗೆ ನೀರು ಸರಬರಾಜು ಮಾಡಲು ಇರುವುದೇ ಒಂದೇ ಒಂದು ಟ್ಯಾಂಕರ್ ಮಾತ್ರ. ನಗರಸಭೆ ವತಿಯಿಂದ ಈ ವಾರ್ಡ್ ನಲ್ಲಿ 100ರಿಂದ 150 ಮನೆಗಳಿಗೆ ವಾರಕ್ಕೆ ಒಮ್ಮೆ ಮಾತ್ರ ಒಂದು ಟ್ಯಾಂಕರ್ ನೀರನ್ನು ಸರಬರಾಜು ಮಾಡುತ್ತಿದ್ದಾರೆ.

ಗೌರಿಬಿದನೂರು : ನಗರದ 2 ಮತ್ತು 11ನೇ ವಾರ್ಡ್ ಗಳು ಪಕ್ಕ ಪಕ್ಕದಲ್ಲೇ ಇದ್ದು ಈ ವಾರ್ಡಿನ ನಿವಾಸಿಗಳಿಗೆ ಕಳೆದ 3 ತಿಂಗಳಿನಿಂದಲೂ ಮನೆಗಳಿಗೆ ಪೈಪ್ ಲೈನ್ ಮುಖಾಂತರ

ಸರಬರಾಜ ಆಗಬೇಕಾದ ನೀರು ಸರಬರಾಜಾಗುತ್ತಿಲ್ಲ. ಎಂದು ಭಾನುವಾರ ಖಾಲಿ ಬಿಂದಿಗೆಗಳನ್ನು ಹಿಡಿದು ವಾರ್ಡ್ ನಿವಾಸಿಗಳು ಪ್ರತಿಭಟನೆ ನಡೆಸಿದರು ಈ ಸಮಸ್ಯೆಯ ಬಗ್ಗೆ ನಗರಸಭೆಯ ಆಯುಕ್ತರಿಗೆ ಮತ್ತು ಜೆ.ಇ. ಮತ್ತು ಇದಕ್ಕೆ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳಿಗೆ ಗಮನಕ್ಕೆ ಈ ಸಮಸ್ಯೆಯನ್ನು ತಿಳಿಸಲಾಗಿದೆ. ಆದರೂ ಕೂಡ ಯಾವುದೇ ರೀತಿಯ ಕ್ರಮ ವಹಿಸಿಲ್ಲ ಎಂದು ಆರೋಪಿಸಿದರು.

ನಗರಸಭೆ ವಿರುದ್ಧ ಘೋಷಣೆ

ಸಾರ್ವಜನಿಕರ ಪ್ರತಿಭಟನೆಗೆ ಸ್ಪಂದಿಸದ ನಗರಸಭೆ ವಿರುದ್ಧ ಘೋಷಣೆಗಳನ್ನು ಕೂಗಿದರು, ಸ್ಥಳಕ್ಕೆ ಆಗಮಿಸಿದ ಗುತ್ತಿಗೆದಾರ ನಾಳೆಯಿಂದಲೇ ದುರಸ್ತಿ ಕಾರ್ಯ ಕೈಗೊಳ್ಳುವುದಾಗಿ ತಿಳಿಸಿದರು. ಗುತ್ತಿಗೆ ಪಡೆದ ಗುತ್ತಿಗೆದಾರರು 2 ರಿಂದ 3 ಬಾರಿ ಈ ವಾರ್ಡಿಗೆ ಬಂದು ಪರೀಕ್ಷೆ ಸಹ ಮಾಡದೆ ಸುಮ್ಮನೆ ನೋಡಿಕೊಂಡು ಹೋಗಿರುತ್ತಾರೆ. ಒಂದು ಸ್ಥಳದಲ್ಲಿ ಪರಿಶೀಲನೆ ಮಾಡಲು ನಿವಾಸಿಗಳು ಕೇಳಿದಾಗ ಸುಮ್ಮನೆ ಸಿಟ್ಟುಮಾಡಿಕೊಳ್ಳುತ್ತಾರೆ ಎಂದು ವಾರ್ಡಿನ ನಿವಾಸಿ ಹೇಳಿದರು. ಗೌರಿಬಿದನೂರು ನಗರಸಭೆಗೆ ನೀರು ಸರಬರಾಜು ಮಾಡಲು ಇರುವುದೇ ಒಂದೇ ಒಂದು ಟ್ಯಾಂಕರ್ ಮಾತ್ರ. ನಗರಸಭೆ ವತಿಯಿಂದ ಈ ವಾರ್ಡ್ ನಲ್ಲಿ 100ರಿಂದ 150 ಮನೆಗಳಿಗೆ ವಾರಕ್ಕೆ ಒಮ್ಮೆ ಮಾತ್ರ ಒಂದು ಟ್ಯಾಂಕರ್ ನೀರನ್ನು ಸರಬರಾಜು ಮಾಡುತ್ತಿದ್ದಾರೆ. ಈ ಸುಡು ಬೇಸಿಗೆ ಸಮಯದಲ್ಲಿ ಮನೆಗಳಲ್ಲಿ ಎಷ್ಟು ನೀರಿದ್ದರೂ ಸಾಕಾಗುವುದಿಲ್ಲ. ಇಂತಹ ಸಮಯದಲ್ಲಿ ಪೈಪ್ ಲೈನ್ ಮುಖಾಂತರ ಬರಬೇಕಿದ್ದ ನೀರು ಬರುತ್ತಿಲ್ಲ. ಇನ್ನು ಖಾಸಗಿ ಟ್ಯಾಂಕರ್ ಗಳ ಮುಖಾಂತರ ನೀರನ್ನು ಖರೀದಿ ಮಾಡಲು ಹೋದರೆ ಒಂದು ಟ್ಯಾಂಕರ್ ಗೆ 400 ರಿಂದ 500 ರೂಗಳನ್ನು ಪಾವತಿ ಮಾಡಬೇಕಾಗುತ್ತದೆ ಎಂದರು.2-3 ದಿನಗಳಲ್ಲಿ ಪರಿಹಾರ

ಗೌರಿಬಿದನೂರು ಪುರಸಭೆ ಯಿಂದ ನಗರಸಭೆಯಾಗಿ ಬದಲಾಗಿ 2 ವರ್ಷಗಳಾದರೂ ನಗರದಲ್ಲಿ ಯಾವುದೇ ರೀತಿಯ ಅಭಿವೃದ್ದಿಯನ್ನು ಕಾಣದ ನಗರ ಗೌರಿಬಿದನೂರು. 2ನೇ ವಾರ್ಡಿನ ನಗರಸಭೆ ಸದಸ್ಯೆ ಪದ್ಮಾವತಮ್ಮ ಮಾತನಾಡಿ, ಈ ಸಮಸ್ಯೆಯನ್ನು ಇನ್ನು 2-3 ದಿನಗಳಲ್ಲಿ ಪರಿಹರಿಸಲಾಗುವುದು, ಕುಡಿಯುವ ನೀರು ಸಮಪ೯ಕವಾಗಿ ಒದಗಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನಾಕಾರರು ಪ್ರತಿಭಟನೆಯನ್ನು ವಾಪಸ್ ಪಡೆದರು ಪ್ರತಿಭಟನೆಯಲ್ಲಿ ವಿನಯ್, ನಾಗರಾಜಪ್ಪ ಸುನಂದಮ್ಮ, ಉಮಕ್ಕ ರಮೇಶ್ ಬಾಬು, ವೆಂಕಟೇಶ್ ರೆಡ್ಡಿ, ನಿವೃತ್ತ ಶಿಕ್ಷಕರಾದ ನಾರಾಯಣಪ್ಪ, ದಯಾನಂದ್,ಜಯಮ್ಮ ಸುನಿತಾ ನಳಿನ ಇನ್ನೂ ಉಳಿದ ವಾರ್ಡಿನ ನಿವಾಸಿಗಳು ಪಾಲ್ಗೊಂಡಿದ್ದರು.